ಮಾನಸಿಕ ಆರೋಗ್ಯ ಸಮಸ್ಯೆ: ಶುಲ್ಕ ರಹಿತ ಸಹಾಯವಾಣಿ ಪ್ರಾರಂಭ
ರಾಮನಗರ:ಮೇ/೦೬/೨೦/ಬುಧವಾರ. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ನಿಮ್ಹಾನ್ಸ್ ಸಂಸ್ಥೆ ವತಿಯಿಂದ ಕೊವಿಡ್-೧೯ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿವಿಧ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಹಜವಾಗಿರುವುದರಿಂದ ಅವುಗಳನ್ನು ನಿಭಾಯಿಸಲು ಶುಲ್ಕ ರಹಿತ ಸಂಖ್ಯೆ: ೦೮೦ - ೪೬೧೧೦೦೦೭ ಅನ್ನು ಪ್ರಾರಂಭಿಸಿರುತ್ತಾರೆ.
ಸಾರ್ವಜನಿಕರು ಆರೋಗ್ಯ ಇಲಾಖೆ ಸಹಾಯವಾಣಿ ೧೦೪ ರೊಂದಿಗೆ ನಿಮ್ಹಾನ್ಸ್ ಸಂಸ್ಥೆಯ ಶುಲ್ಕ ರಹಿತ ಸಂಖ್ಯೆ: ೦೮೦ - ೪೬೧೧೦೦೦೭ ಕರೆ ಮಾಡಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆಯುವಂತೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಮಂಜುನಾಥ್ ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು