Tel: 7676775624 | Mail: info@yellowandred.in

Language: EN KAN

    Follow us :


ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ

Posted date: 11 May, 2020

Powered by:     Yellow and Red

ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ

ರಾಮನಗರ:ಮೇ/೧೧/೨೦/ಸೋಮವಾರ. ತುರ್ತು ನಿರ್ವಹಣಾ (ಐಸಿಯು) ಘಟಕ ನಿರ್ವಹಣೆಗೆ ಅಗತ್ಯ ಇರುವ ತಜ್ಞ ವೈದ್ಯರ ಕೊರತೆ ನೀಗಿಸಲು ಜಿಲ್ಲೆಯ ಕೊವಿಡ್-೧೯ ಆಸ್ಪತ್ರೆಯಲ್ಲಿ ಟೆಲಿ ಐಸಿಯು ಸೇವೆ ಆರಂಭಿಸಲಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. 


ಕೊವಿಡ್-೧೯ ನಿವರ್ಹಣೆಗೆ ನಿಗದಿಯಾಗಿರುವ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಲಭ್ಯ ಇರುವ  ಸೌಲಭ್ಯ ಪರಿಶೀಲಿಸಿ, ಟೆಲಿ ಐಸಿಯು ಘಟಕ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. 


"ರಾಮನಗರದ ಕೊವಿಡ್-೧೯ ಆಸ್ಪತ್ರೆಯಲ್ಲಿ ೨೪ ತಾಸು ಕಾರ್ಯನಿರ್ವಹಿಸುವ ೧೬ ಹಾಸಿಗೆಯ  ಟೆಲಿ ಐಸಿಯೂ ವ್ಯವಸ್ಥೆ ಆರಂಭಿಸಲಾಗಿದೆ. ಕಮ್ಯಾಂಡ್‌ ರೂಮ್‌ನಿಂದಲೇ ತಜ್ಞ ವೈದ್ಯರು ಈ ರಿಮೋಟ್‌ ಐಸಿಯು ಘಟಕವನ್ನು ನಿರ್ವಹಿಸಲು ಸಾಧ್ಯವಿದ್ದು, ಐಸಿಯುವಿನಲ್ಲಿರುವ ರೋಗಿಗಳ ಸ್ಥಿತಿಯನ್ನು ಪರಿಶೀಲಿಸಿ ಇಲ್ಲಿನ ವೈದ್ಯ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಬಹುದು," ಎಂದು ಅವರು ವಿವರಿಸಿದರು.  


"'ಆ್ಯಕ್ಟ್‌' ಸಂಸ್ಥೆ ಈ ಟೆಲಿ ಐಸಿಯು ಸೇವೆಯನ್ನು ಉಚಿತವಾಗಿ ಒದಗಿಸಿದ್ದು, ಇನ್ನೂ ಹಲವು ಸಂಸ್ಥೆಗಳು ಕೊವಿಡ್-೧೯‌ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಲು ಮುಂದೆ ಬಂದಿರುವುದು ಸಂತಸದ ವಿಷಯ. ಸ್ಯಾಂಪಲ್‌ ಕಿಟ್‌ ತಯಾರಿಕೆ ಸೇರಿದಂತೆ ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಸ್ಟಾರ್ಟ್‌ಅಪ್‌ಗಳು ಹೊಸ ಆವಿಷ್ಕಾರದಲ್ಲಿ ನಿರತವಾಗಿವೆ. ಸ್ಟಾರ್ಟ್‌ ಅಪ್‌ ವಿಷನ್‌ ಗ್ರೂಪ್‌ನ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ಕಳೆದ ಒಂದು ತಿಂಗಳಿಂದ ಇಂಥ ಹಲವಾರು ಪ್ರಯತ್ನಗಳಿಗೆ ಸಹಕರಿಸಿದ್ದಾರೆ,"ಎಂದು ತಿಳಿಸಿದರು. 


*ಲ್ಯಾಬ್‌ ಆರಂಭ*

"ರಾಮನಗರದಲ್ಲಿ  ಪ್ರಯೋಗಾಲಯ ಆರಂಭ ಮಾಡಲು ೧.೫ ಕೋಟಿ ರೂ. ಹಣ ಹಂಚಿಕೆ ಆಗಿದೆ. ಅಗತ್ಯ ಇರುವ ಹೆಚ್ಚುವರಿ ಹಣ ಒದಗಿಸಿ ಸುಸಜ್ಜಿತ ಲ್ಯಾಬ್‌ ಸ್ಥಾಪಿಸಲಾಗುವುದು,"ಎಂದು ಉಪ ಮುಖ್ಯ ಮಂತ್ರಿಗಳು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑