Tel: 7676775624 | Mail: info@yellowandred.in

Language: EN KAN

    Follow us :


ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ

Posted date: 14 May, 2020

Powered by:     Yellow and Red

ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ

ದೆಹಲಿ:ಮೇ/೧೩/೨೦/ಬುಧವಾರ. ದೇಶ ಕಾಯುತ್ತಿರುವ ಅರೆಸೈನಿಕ ಪಡೆಯ ದೇಶದ ನಾನಾ ಭಾಗದ ಎಲ್ಲಾ ಕ್ಯಾಂಟೀನ್ ಗಳಲ್ಲೂ ಜೂನ್ ಒಂದನೇ ತಾರೀಖಿನಿಂದ ಸ್ವದೇಶಿ ವಸ್ತುಗಳನ್ನಷ್ಟೇ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ರವರು ಬುಧವಾರ ಘೋಷಿಸಿದ್ದಾರೆ.


ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು ದೇಶವನ್ನು ಸ್ವಾವಲಂಬಿಯಾಗಿಸಲು ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಒತ್ತು ನೀಡುವಂತೆ ಪ್ರಧಾಮಿ ಮೋದಿ ಯವರು ಮನವಿ ಮಾಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.


ಕೇಂದ್ರ  ಸಶಸ್ತ್ರ ಪೋಲೀಸ್ ಪಡೆಯ (ಸಿಎಸಿಎಫ್) ಸುಮಾರು ಹತ್ತು ಲಕ್ಷ ಸಿಬ್ಬಂದಿಯ ಐವತ್ತು ಲಕ್ಷ ಕುಟುಂಬ ಸದಸ್ಯರು ಇನ್ನು ಮುಂದೆ ಸ್ವದೇಶಿ ಉತ್ಪನ್ನಗಳನ್ನು ಬಳಸಲಿದ್ದಾರೆ ಎಂದು ತಿಳಿಸಿದ್ದಾರೆ.


ಸಿಎಪಿಎಫ್, ಸಿ ಆರ್ ಪಿ ಎಫ್, ಬಿಎಸ್ಎಫ್, ಸಿಐಎಸ್ಎಫ್, ಐಟಿಬಿಪಿ, ಎಸ್ ಎಸ್ ಬಿ, ಎನ್ ಎಸ್ ಜಿ ಮತ್ತು ಅಸ್ಸಾಂ ರೈಫಲ್ಸ್ ನ ಎಲ್ಲಾ ಕ್ಯಾಂಟೀನ್ ಗಳಲ್ಲಿ ವಾರ್ಷಿಕ ೨,೮೦೦ ಕೋಟಿ ರೂಪಾಯಿಗಳ ವಹಿವಾಟು ನಡೆಯತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑