Tel: 7676775624 | Mail: info@yellowandred.in

Language: EN KAN

    Follow us :


ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಇರುಳಿಗ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

Posted date: 17 May, 2020

Powered by:     Yellow and Red

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಇರುಳಿಗ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ರಾಮನಗರ : ಬುಡಕಟ್ಟು ಸಮುದಾಯಗಳ ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ, ಶಿಕ್ಷಕಿ ಡಿ.ಆರ್. ನೀಲಾಂಬಿಕಾ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ತಾಲ್ಲೂಕಿನ ಗಂಗರಾಜನಹಳ್ಳಿಯ ಇರುಳಿಗರ ಕಾಲೋನಿಯಲ್ಲಿನ ಇರುಳಿಗ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು.

ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗಿದ್ದರೂ ಬುಡಕಟ್ಟು ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಕೊರೋನಾ ವೈರಸ್ ಸೋಂಕಿನಿಂದಾಗಿ ಸಮಾಜದಲ್ಲಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬುಡಕಟ್ಟು ಸಮುದಾಯಗಳ ಜನರ ನೆರವಿಗೆ ಎಲ್ಲರೂ ಸ್ಪಂದಿಸಬೇಕು ಎಂದು ಸಾಹಿತಿ ಡಾ.ಎಂ. ಬೈರೇಗೌಡ ತಿಳಿಸಿದರು.


ಸಾಂಸ್ಕøತಿಕ ಸಂಘಟಕ ವಿಜಯ್ ರಾಂಪುರ ಮಾತನಾಡಿ ಎಸ್. ರುದ್ರೇಶ್ವರ ಅವರು ತಮ್ಮ ವೈಯಕ್ತಿಕ ಆಚರಣೆಗಳನ್ನು ಸಮಾಜಮುಖಿಯಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿದ್ದ ಇರುಳಿಗ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಎಚ್.ವಿ. ಶೇಷಾದ್ರಿ ಅಯ್ಯರ್ ಮಾತನಾಡಿ ಕೊರೊನಾ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ರೋಗ ನಿಯಂತ್ರಣಕ್ಕೆ ಜನರು ಸರ್ಕಾರದ ಜತೆ ಕೈಜೋಡಿಸಬೇಕು. ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಂಗಡಿ ಅಥವಾ ಮಾರುಕಟ್ಟೆಗಳಿಗೆ ಹೋದಾಗ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ವಿ. ಬಾಲಕೃಷ್ಣ, ತಾಲ್ಲೂಕು ಅಧ್ಯಕ್ಷ ಕೆ.ಎಸ್. ಶಂಕರಯ್ಯ, ಜಿಲ್ಲಾ ಯೂತ್ ರೆಡ್ ಕ್ರಾಸ್ ಉಪಾಧ್ಯಕ್ಷೆ ಲಾವಣ್ಯಅಶ್ವಿನ್, ಲಯನೆಸ್ ಕ್ಲಬ್ ಖಜಾಂಚಿ ಸಂಧ್ಯಾ ಅಯ್ಯರ್, ಸಮಾಜ ಸೇವಕ ಅಮಿತ್ ರಾಜ್ ಶಿವ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಯೋಜಕ ಎಂ.ಎಸ್. ಚನ್ನವೀರಪ್ಪ, ಜಿಲ್ಲಾ ಕಾರ್ಯದರ್ಶಿ ಕೆ.ಆರ್. ವಿನುತ, ಯಲ್ಲೊ ಅಂಡ್ ರೆಡ್ ಫೌಂಡೇಷನ್ ಸಂಸ್ಥೆಯ ಆನಂದಶಿವ, ಶಿಕ್ಷಣ ಸಂಯೋಜಕ ಬಿ. ಮಂಜುನಾಥ್, ರಂಗಸಿರಿ ಕಲಾ ಟ್ರಸ್ಟಿನ ಅಧ್ಯಕ್ಷ ಕೆ.ಆರ್. ರೇಣುಕಾ ಪ್ರಸಾದ್, ಅಮೃತ ವಿಕಲಚೇತನ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಟಿ. ರಮೇಶ್, ಸಮಾಜ ಸೇವಕ ಅರುಣ್ ಕುಮಾರ್, ವನವಾಸಿ ಕಲ್ಯಾಣ ಸಮಿತಿಯ ಆರ್.ಕೆ. ಸತೀಶ್, ರಾಜು, ಕೃಷ್ಣಮೂರ್ತಿ, ಮಂಜುನಾಥ್, ಕಾಮಾರಾಜ್, ಸಾಮಾಜಿಕ ಕಾರ್ಯಕರ್ತೆ ಎಸ್. ಪದ್ಮರೇಖಾ, ಗಾಯಕ ಚೌ.ಪು. ಸ್ವಾಮಿ, ಗಂಗಾಧರಯ್ಯ, ಜಿ. ಉಮಾಮಹೇಶ್ವರಿ, ಎಂ.ಕುಮಾರ್, ಕಾವ್ಯ ಇದ್ದರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑