Tel: 7676775624 | Mail: info@yellowandred.in

Language: EN KAN

    Follow us :


ಹನ್ನೊಂದು ಬೋನುಗಳ ಪೈಕಿ ನಾಲ್ಕು ಬೋನುಗಳಲ್ಲಿ ಸೆರೆಯಾದ ಚಿರತೆಗಳು. ಇಂದು ಕರುವಿನ ಕುತ್ತಿಗೆಗೆ ಬಾಯಿ ಹಾಕಿದ ಮತ್ತೊಂದು ಚಿರತೆ

Posted date: 18 May, 2020

Powered by:     Yellow and Red

ಹನ್ನೊಂದು ಬೋನುಗಳ ಪೈಕಿ ನಾಲ್ಕು ಬೋನುಗಳಲ್ಲಿ ಸೆರೆಯಾದ ಚಿರತೆಗಳು. ಇಂದು ಕರುವಿನ ಕುತ್ತಿಗೆಗೆ ಬಾಯಿ ಹಾಕಿದ ಮತ್ತೊಂದು ಚಿರತೆ

ಮಾಗಡಿ:ಮೇ/೧೮/೨೦/ಸೋಮವಾರ. ವಿವಿಧ ಗ್ರಾಮಗಳಲ್ಲಿ ಇಟ್ಟಿದ್ದ ಒಟ್ಟು ೧೧ ಬೋನುಗಳ ಪೈಕಿ ನಾಲ್ಕು ಬೋನುಗಳಲ್ಲಿ ನಾಲ್ಕು ಚಿರತೆಗಳು ಸೆರೆಯಾಗಿವೆ. ಇದರಿಂದ ಸುತ್ತಲಿನ ಗ್ರಾಮಸ್ಥರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಒಂದೇ ವಾರದಲ್ಲಿ ಬಾಲಕ ಹೇಮಂತ್ ಹಾಗೂ ಕೊತ್ತಗಾನಹಳ್ಳಿ ಗ್ರಾಮದ ವೃದ್ಧೆ ಗಂಗಮ್ಮನವರನ್ನು ನರಭಕ್ಷಕ ಚಿರತೆಗಳು ಬಲಿಪಡೆದಿದ್ದವು. ಗ್ರಾಮಸ್ಥರು ಭಯ ಭೀತರಾಗಿ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನೆಲಮಂಗಲ ಮತ್ತು ಮಾಗಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂ ಡಿದ್ದರು.


ಅರಣ್ಯ ಉಪಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾರ್ಗದರ್ಶನ ಹಾಗೂ ವಲಯ ಅರಣ್ಯಾಧಿಕಾರಿ ಕೆ.ಪುಷ್ಪಲತಾ ನೇತೃತ್ವದಲ್ಲಿ ಸಿಬ್ಬಂದಿ ಸುಮಾರು ೧೧ ಬೋನ್‌ಗಳನ್ನು ವಿವಿಧ ಗ್ರಾಮದ ಕಾಡಂಚಿನಲ್ಲಿಟ್ಟು ಕಾರ್ಯಾಚರಣೆ ನಡೆಸಿದ್ದರು.ಮೂರು ಗ್ರಾಮಗಳ ಕಾಡಂಚಿನಲ್ಲಿ ಇಟ್ಟಿದ್ದ ಬೋನ್‌ಗೆ ನಾಲ್ಕು ಚಿರತೆಗಳು ಬಿದ್ದಿದ್ದು, ಕಾಡಂಚಿನ ಗ್ರಾಮದ ಜನತೆ ನಿರಾಳದಾಗಿದ್ದಾರೆ.


*ಇಂದು  ಕರುವಿನ  ಮೇಲೆ ಚಿರತೆ ದಾಳಿ*

ರಾಮನಗರ ತಾಲ್ಲೂಕಿನ ಕಟಮಾನದೊಡ್ಡಿ ಗ್ರಾಮದ ಮನೆಯೊಂದರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಇಂದು ಮುಂಜಾನೆ ಮೂರರ ವೇಳೆಗೆ ದೇಸಪ್ಪ ಎಂಬುವರ ಮನೆಯ ಕಾಂಪೌಂಡ್ ಜಿಗಿದ ಚಿರತೆಯೊಂದು ಒಳ ನುಗ್ಗಿ ಕೊಟ್ಟಿಗೆಗೆ ಪ್ರವೇಶಿಸಿ, ಅಲ್ಲಿದ್ದ ಆರು ತಿಂಗಳ ಕರುವಿನ ಕುತ್ತಿಗೆಗೆ ಬಾಯಿ ಹಾಕಿ ಗಾಯಗೊಳಿಸಿದ್ದು, ಹೊತ್ತೊಯ್ಯಲು ಯತ್ನಿಸಿತು.

ಕರುವಿನ ಚೀರಾಟದಿಂದ ಮನೆಯವರು ಎಚ್ಚೆತ್ತಿದ್ದು ಕೊಟ್ಟಿಗೆಯ ಲೈಟ್ ಹಾಕಿ ಹೋದ ಸಂದರ್ಭ ಚಿರತೆ ಅಲ್ಲಿಂದ ಪರಾರಿ ಆಯಿತು ಎಂದು ಸ್ಥಳೀಯರು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑