Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೩೩: ಜನ್ಮ ದಿನವನ್ನಾಚರಿಸುವವರು ಏನೇನು ಮಾಡಬಾರದು ?

Posted date: 19 May, 2020

Powered by:     Yellow and Red

ತಾಳೆಯೋಲೆ ೨೩೩: ಜನ್ಮ ದಿನವನ್ನಾಚರಿಸುವವರು ಏನೇನು ಮಾಡಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಜನ್ಮ ದಿನವನ್ನಾಚರಿಸುವವರು ಏನೇನು ಮಾಡಬಾರದು ?


ಹುಟ್ಟಿದ ದಿನ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡಬಾರದು. ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುವ ವ್ಯಕ್ತಿ ಬಾಳೆ ಗಿಡವನ್ನು ಕತ್ತರಿಸುವುದಾಗಲೀ, ಒಲೆಯನ್ನು ಆರಿಸುವುದಾಗಲಿ, ಆ ದಿನ ತನ್ನ ಶರೀರಕ್ಕೆ ಗಾಯವಾಗಲಿ, ಖಾಯಿಲೆಯಾಗಲಿ ಆಗದಂತೆ ನೋಡಿಕೊಳ್ಳಬೇಕು. ಆ ದಿನ ಇತರರು ಬಿಟ್ಟ ಆಹಾರವಾಗಲಿ ಹಳಸಿದ ಆಹಾರವಾಗಲಿ ತಿನ್ನುವುದು ಸರಿಯಲ್ಲ.


ಆದಿನ ಹಳೆಯ ಬಟ್ಟೆಗಳನ್ನು ಹಾಕಿಕೊಳ್ಳುವುದಾಗಲಿ ಇಲ್ಲವೆ ಸ್ಮಶಾನಕ್ಕೆ ಅಂತ್ಯಕ್ರಿಯೆಗಳಿಗಾಗಲಿ ಹೋಗುವುದು ಒಳ್ಳೆಯದಲ್ಲ. ಈ ದಿನ ಕ್ಷೌರ ಮಾಡಿಸಿಕೊಳ್ಳುವುದಾಗಲಿ ಉಗುರು ಕತ್ತರಿಸಿ ಕೊಳ್ಳುವುದಾಗಲಿ ಸರಿಯಲ್ಲ. ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವವರಿಗೆ ಆಹಾರ ವನ್ನು  ಎಡಗಡೆಯಿಂದ ಬಡಿಸಬಾರದು. ಅವರು ಒಂಟಿಯಾಗಿ ಕುಳಿತು ಊಟ ಮಾಡಬಾರದು. ಹಾಗೆಯೇ ತಯಾರಿಸಿದ ತಿನ್ನಿಸುಗಳನ್ನು ಒಬ್ಬನೇ ಪೂರ್ತಿಯಾಗಿ ತಿನ್ನಬಾರದು. ಈ ದಿನ ತನ್ನ ವಯಸ್ಸನ್ನು ತಿಳಿಸುವುದೂ ನಿಷೇಧವೆ.


ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ವ್ಯಕ್ತಿ ಮೊದಲು ತಯಾರಿಸಿದ ಅಡುಗೆಗಳನ್ನು ತಿನ್ನಲು ಪ್ರಾರಂಭಿಸಿದ ನಂತರವೇ ಇತರರು ತಿನ್ನಬೇಕು. ಹಾಗೆಯೇ ಅವರು ಊಟ ಮುಗಿಸಿ ಎದ್ದ ನಂತರವೇ ಇತರರು ಎದ್ದೇಳಬೇಕು.ಆದಿನ ಅವರನ್ನು ಬೈಯ್ಯುವುದಾಗಲಿ, ಹೊಡೆಯುವುದಾಗಲಿ ಮಾಡಬಾರದು. ಆದಿನ ಪೂರ್ತಿ ಸ್ವೇಚ್ಚಾ ಜೀವನವನ್ನು ನಡೆಸಲು ಅವರಿಗೆ ಅಧಿಕಾರ ನೀಡಬೇಕು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑