Tel: 7676775624 | Mail: info@yellowandred.in

Language: EN KAN

    Follow us :


ಕೂಡ್ಲೂರು ದೊಡ್ಡಮಳೂರು ನಡುವೆ ಚಿರತೆಯ ಓಡಾಟದ ಹೆಜ್ಜೆ ಗುರುತು ಗ್ರಾಮಸ್ಥರಲ್ಲಿ ಆತಂಕ

Posted date: 23 May, 2020

Powered by:     Yellow and Red

ಕೂಡ್ಲೂರು ದೊಡ್ಡಮಳೂರು ನಡುವೆ ಚಿರತೆಯ ಓಡಾಟದ ಹೆಜ್ಜೆ ಗುರುತು ಗ್ರಾಮಸ್ಥರಲ್ಲಿ ಆತಂಕ

ಚನ್ನಪಟ್ಟಣ:ಮೇ/೨೩/೨೦/ಶನಿವಾರ. ರಾಮನಗರ ಜಿಲ್ಲೆಯಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು ಮಾಗಡಿ ತಾಲ್ಲೂಕಿನಲ್ಲಿ ಇಬ್ಬರು ಬಲಿಯಾಗಿದ್ದು, ಇದು ಮಾಸುವ ಮುನ್ನವೇ ನಗರಕ್ಕೆ ಸಮೀಪವಿರುವ ದೊಡ್ಡಮಳೂರು ಮತ್ತು ಕೂಡ್ಲೂರು ಗ್ರಾಮಗಳ ನಡುವಿನ ತೋಟಗಳಲ್ಲಿ ಚಿರತೆಯ ಹೆಜ್ಜೆಗಳ ಗುರುತು ಪತ್ತೆಯಾಗಿದ್ದು ಗ್ರಾಮಸ್ಥರುಗಳಲ್ಲಿ ಆತಂಕ ಮನೆ ಮಾಡಿದೆ.


ಇತ್ತೀಚೆಗೆ ತೊರೆಹೊಸೂರು ಗ್ರಾಮದ ದೇವಾಲಯದ ಬಳಿ ಕಾಣಿಸಿಕೊಂಡಿದ್ದ ಚಿರತೆಗೆ ಅರಣ್ಯಾಧಿಕಾರಿಗಳು ಬೋನು ಇಟ್ಟಿದ್ದು ಇದುವರೆಗೂ‌ ಅದು ಪತ್ತೆಯಾಗಿಲ್ಲ.

ಈಗ ಅದೇ ಚಿರತೆ ಈ ಭಾಗಕ್ಕೆ ಬಂದಿರಬಹುದು ಎಂಬ ಗುಮಾನಿ ಇದೆ.


ತೊರೆಯ ಒಂದು ಭಾಗದಿಂದ ನಾಯಿಯೊಂದನ್ನು ಕೊಂದು ಎಳೆದುಕೊಂಡು ಹೋಗಿರುವ ಗುರುತುಗಳು ಕಂಡು ಬಂದಿದ್ದು, ಇದರ ಜೊತೆಗೆ ಮೂರು ತೋಟಗಳಲ್ಲೂ ನಾಯಿಯನ್ನು ಎಳೆದುಕೊಂಡು ಹೋಗಿರುವ ಮತ್ತದರ ಹೆಜ್ಜೆ ಗುರುತುಗಳು ಗೋಪಾಲ್ ಎಂಬುವವರ ತೋಟದಲ್ಲಿ ಮೂಡಿವೆ. ತೊರೆಯ (ನದಿ) ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.


ಈ ಹೆಜ್ಜೆ ಗುರುತುಗಳು ಚಿರತೆದ್ದೇ ಆಗಿವೆ. ಈಗಾಗಲೇ ತೊರೆಹೊಸೂರು ಗ್ರಾಮದ ಭಾಗದಲ್ಲಿ ಒಂದು ಬೋನು ಇಟ್ಟಿದ್ದು ಈ ಭಾಗದಲ್ಲಿಯೂ ಒಂದು ಬೋನು ಇಟ್ಟು ಕಾರ್ಯಾಚರಣೆ ನಡೆಸುತ್ತೇವೆ.

*ಮಹಮ್ಮದ್ ಮನ್ಸೂರ್. ವಲಯ ಅರಣ್ಯಾಧಿಕಾರಿಗಳು ಚನ್ನಪಟ್ಟಣ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑