Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯದ ಮಹಾಮಾರಿ ಕೊರೊನಾ ಕಪ್ ಸೋತ ರಾಮನಗರ !?

Posted date: 25 May, 2020

Powered by:     Yellow and Red

ರಾಜ್ಯದ ಮಹಾಮಾರಿ ಕೊರೊನಾ ಕಪ್ ಸೋತ ರಾಮನಗರ !?

ರಾಮನಗರ:ಮೇ/೨೫/೨೦/ಸೋಮವಾರ. ರಾಜ್ಯದ ರಾಮನಗರ ಮತ್ತು ಚಾಮರಾಜನಗರ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೊನಾ ಎಂಬ ಮಹಾ ಮಾರಿಯು ಕಾಲಿಟ್ಟಿದ್ದು. ಈ ಎರಡು ಜಿಲ್ಲೆಗಳು ಕೊರೊನಾದಿಂದ ಮುಕ್ತವಾಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಕಪ್ ಯಾರಿಗೆ ಎಂಬ ಬರಹ ಗಳು ಇದುವರೆಗೂ ಹರಿದಾಡುತ್ತಿದ್ದವು.


ಇಂದಿನ ಬಲ್ಲ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಇಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ವಾಸ್ತವದ ಸ್ಥಿತಿಯೇನೆಂದರೆ, ಸಾರಿಗೆ ನಿಗಮದ ಚಾಲಕರೊಬ್ಬರು ಲಾಕ್‌ಡೌನ್ ಸಮಯದಲ್ಲಿ ತುಮಕೂರಿನಲ್ಲಿ ವಾಸ್ತವ್ಯ ಹೂಡಿದ್ದು, ಕರ್ತವ್ಯದ ಮೇರೆಗೆ ಮಾಗಡಿಗೆ ಬಂದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ,  ಸ್ವಾಬ್ ತೆಗೆಯಲಾಗಿತ್ತು. ಆದರೆ  ವರದಿ ಬರುವ ಮುನ್ನವೇ ಅವರನ್ನು ಕೆಲಸಕ್ಕೆ ನಿಯೋಜನೆ ಗೊಳಿಸಲಾಗಿತ್ತು. ವರದಿ ಬಂದ ನಂತರ ಪಾಸಿಟೀವ್ ಇರುವುದು ಗೊತ್ತಾಗಿ ಆತನನ್ನು ತುಮಕೂರಿನಲ್ಲಿಯೇ ಕ್ವಾರಂ ಟೈನ್ ಮಾಡಲಾಗಿದೆ.


ಮತ್ತೊಂದು ಪ್ರಕರಣ ದಲ್ಲಿ ಚೆನ್ನೈ ನ ಟಿ ನಗರದಿಂದ ನಾಲ್ವರು ಮಾಗಡಿಗೆ ಆಗಮಿಸಿದ್ದು, ಅವರನ್ನೂ ಸಹ ಕ್ವಾರಂಟೈನ್ ಮಾಡಲಾಗಿತ್ತು. ಹದಿನಾಲ್ಕು ದಿನಗಳ ನಂತರ ಬಿಡುಗಡೆಗೆ ಮುನ್ನ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿ, ನಾಲ್ವರಲ್ಲಿ ಎರಡು ವರ್ಷಗಳ ಮಗುವೊಂದಕ್ಕೆ ಮಾತ್ರ ಸೋಂಕು ತಗಲಿರುವುದು ದೃಢಪಟ್ಟಿದೆ. ನಾಲ್ವರಲ್ಲಿ ಮಗುವಿಗೆ ಮಾತ್ರ ಪಾಸಿಟಿವ್ ಬಂದಿರುವುದು ವೈದ್ಯರಲ್ಲಿ ಗೊಂದಲ ಮೂಡಿಸಿದ್ದು, ಮತ್ತೊಂದು ಬಾರಿ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸ ಲಾಗಿದ್ದು, ವರದಿ ಬಂದ ನಂತರವಷ್ಟೇ ದೃಢಪಡಿಸ ಲಾಗುವುದು ಎಂದು ಸಂಬಂಧಿಸಿದ ವೈದ್ಯರು ತಿಳಿಸಿದ್ದಾರೆ.


ರಾಮನಗರ ದ ಬಂದೋಬಸ್ತಿಗಾಗಿ ಬಂದಿದ್

 ಪೇದೆಯೊಬ್ಬರಿಗೂ ಸೋಂಕು ತಗುಲಿದೆಯೆಂಬ ಮಾಹಿತಿ ಬಂದಿದ್ದು, ಅವರನ್ನು ಸಹ ಕ್ವಾರಂಟೈನ್ ನಲ್ಲಿ ಇಡಲಾಗಿದೆಯಂತೆ.

ಹಾಗೂ ಅವರು ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆ ಹಾಗೂ ಮುತ್ತಪ್ಪ ರೈ ಸತ್ತಾಗಿನ ಬಂದೋಬಸ್ತ್ ನಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿ ದೊರಕಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆಯಂತೆ.


ಈ ಸಂಬಂಧ ರಾಮನಗರ ಜಿಲ್ಲಾಧಿಕಾರಿಗಳು ಯಾವುದೇ ಅಭಿಪ್ರಾಯವನ್ನು ಈವರೆಗೂ ನೀಡಿಲ್ಲ. ಇದರಿಂದ ಸ್ಪಷ್ಟ ವಾಗಿ ರಾಮನಗರ ಜಿಲ್ಲೆಗೆ ಕೊರೊನಾ ವಕ್ಕರಿಸಿದೆ ಎಂದು ನಿಖರವಾಗಿ ತಿಳಿದು ಬಂದಿಲ್ಲ. ವರದಿ ಬಂದ ನಂತರ ನಿಖರವಾಗಲಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑