Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಹಿನ್ನೆಲೆ; ಸರಳವಾಗಿ ಆಚರಣೆಗೊಂಡ ರಂಜಾನ್ ಹಬ್ಬ

Posted date: 25 May, 2020

Powered by:     Yellow and Red

ಕೊರೊನಾ ಹಿನ್ನೆಲೆ; ಸರಳವಾಗಿ ಆಚರಣೆಗೊಂಡ ರಂಜಾನ್ ಹಬ್ಬ

ಚನ್ನಪಟ್ಟಣ:ಮೇ/೨೫/೨೦/ಸೋಮವಾರ. ಮುಸ್ಲಿಮರ ಬಹುದೊಡ್ಡ ಭಕ್ತಿಯ ಹಾಗೂ ಸ್ನೇಹದ ಆಚರಣೆಯ ಹಬ್ಬವಾದ ರಂಜಾನ್ ಹಬ್ಬವ‌ನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ತಮ್ಮ ತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿ ಸುವ ಮೂಲಕ ಮುಸ್ಲಿ ಮರು ಆಚರಿಸಿದರು.


ಪ್ರತಿವರ್ಷವೂ ಹೆದ್ದಾರಿಯ ಹೊಸ ಕೋರ್ಟ್ ಬಳಿ ಇರುವ ಈದ್ಗಾ ಮೈದಾನದಲ್ಲಿ ಸಹಸ್ರಾರು ಮಂದಿ ಒಗ್ಗೂಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಷ್ಟೇ ಅಲ್ಲದೆ ಬೇರೆ ಬೇರೆ ಮಸೀದಿಗಳ ಆವರಣ ದಲ್ಲೂ ಹಬ್ಬ ಆಚರಣೆ ನಡೆಯುತ್ತಿತ್ತು.


ಇದೇ ಪ್ರಥಮ ಬಾರಿಗೆ ರಾಷ್ಟ್ರದಾದ್ಯಂತ ಕೊರೊನಾ ಹರಡಿರುವುದರಿಂದ ಹಾಗೂ ಸರ್ಕಾರವೂ ಸಹ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಿರುವುದರಿಂದ ಸರ್ಕಾರದ ಆದೇಶಕ್ಕೆ ಸ್ಪಂದಿಸಿ, ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.


ಈದ್ಗಾ ಮೈದಾನದಲ್ಲಿ ಈಗಾಗಲೇ ಪೊಲೀಸರು ಬೀಡು ಬಿಟ್ಟಿದ್ದು, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಟ್ಟಿಲ್ಲ. ನಗರದಾದ್ಯಂತ ಎಲ್ಲಾ ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುತ್ತಿದ್ದು, ಮಸೀದಿಗಳಲ್ಲೂ ಸಹ ಸಾಮೂಹಿಕ ಪ್ರಾರ್ಥನೆ ಮಾಡದಂತೆ ಕಟ್ಟೆಚ್ಚರ ವಹಿಸಿದ್ದಾರೆ.


ಮುಸ್ಲಿಮರಲ್ಲಿಯೂ ಸಹ ಅನೇಕ ಬುದ್ಧಿಜೀವಿಗಳಿದ್ದು ಜೊತೆಗೆ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಭಯ ಪಟ್ಟಿರುವುದರಿಂದ ಸಾಮೂಹಿಕ ಪ್ರಾರ್ಥನೆಗೆ ಒಲವು ತೋರದೆ, ತಮ್ಮ ತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿರುವುದು ಒಳ್ಳೆಯ ಬೆಳವಣಿಗೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑