Tel: 7676775624 | Mail: info@yellowandred.in

Language: EN KAN

    Follow us :


ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ

Posted date: 27 May, 2020

Powered by:     Yellow and Red

ಕಾಡಾನೆ ದಾಳಿಗೆ ನಲುಗಿದ ಟೊಮ್ಯಾಟೊ ತೋಟ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಒಂದೆಡೆ ಕೊರೋನಾ ಕಾಟಕ್ಕೆ ರೈತರು ಸೊರಗಿ ದ್ದಾರೆ. ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ ಯಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದ ರೈತ ಸ್ವಾಮಿ ಎಂಬುವವರ ಟೊಮೋಟೋ ತೋಟಕ್ಕೆ ನುಗ್ಗಿದ್ದ ೫ - ೬ ಕಾಡಾನೆ ಗಳ ಹಿಂಡು ೨ ಎಕರೆಯಲ್ಲಿ ಬೆಳೆದಿದ್ದ ಟೊಮೋಟೋ ಬೆಳೆಯಲ್ಲಿ ಭಾಗಶಃ ನಾಶಪಡಿಸಿರುವ ಘಟನೆ ನಡೆದಿದೆ. ಜೊತೆಗೆ ಪರಂಗಿ, ಹಲಸು, ಮಾವಿನ ಮರಗಳನ್ನು ನೆಲಸಮ ನಾಡಿ ಧ್ವಂಸ ಮಾಡಿವೆ.


ಕಬ್ಬಾಳು - ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬರುತ್ತಿರುವ ಕಾಡಾನೆಗಳ ಹಿಂಡು ರೈತರ ಕೃಷಿ ಭೂಮಿಗೆ ಕಾಲಿಟ್ಟು ನಾಶಪಡಿಸುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕೆಂದು ನೊಂದ ರೈತ ಸ್ವಾಮಿ ಒತ್ತಾಯಿಸಿದ್ದಾರೆ.


೩೦ ಸಾವಿರ ಗಿಡಗಳ ಪೈಕಿ ೪ ಸಾವಿರ ಟೊಮೋಟೊ ಗಿಡಗಳನ್ನ ಕಾಡಾನೆಗಳ ಹಿಂಡು ತುಳಿದು ನಾಶ ಮಾಡಿವೆ. ರಾಮನಗರ - ಚನ್ನಪಟ್ಟಣ ಗಡಿ ಹಾಗೂ ಚನ್ನಪಟ್ಟಣ - ಕನಕಪುರ ಗಡಿಯಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗಿದೆ. ಮುಖ್ಯವಾಗಿ ರೈತರ ಕೃಷಿ ಭೂಮಿಗೆ ಲಗ್ಗೆಯಿಟ್ಟು ದಾಳಿ ಮಾಡುತ್ತಿವೆ. ಹಾಗಾಗಿ ರೈತರು ಈ ಭಾಗದಲ್ಲಿ ವ್ಯವಸಾಯ ಮಾಡುವುದೇ ಕಷ್ಟವಾಗಿದೆ ಎಂಬ ಅಭಿಪ್ರಾಯವನ್ನ ಈ ಭಾಗದ ಕೃಷಿಕರು ವ್ಯಕ್ತಪಡಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑