Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ

Posted Date: 27 May, 2020

ರಾಜ್ಯ ರೈತ ಸಂಘದಿಂದ ತಹಶಿಲ್ದಾರರ ಮುಖೇನ ಪ್ರಧಾನಿಗೆ ಮನವಿ

ಚನ್ನಪಟ್ಟಣ:ಮೇ/೨೭/೨೦/ಬುಧವಾರ. ಇಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಷ್ಟ್ರದ ಪ್ರಧಾನಿಯವರಿಗೆ ಇಲ್ಲಿನ ದಂಡಾಧಿಕಾರಿಗಳ ಮೂಲಕ ಮನವಿಯೊಂದನ್ನು ಸಲ್ಲಿಸಿದರು. ಕೊರೊನಾ ಲಾಕ್ಡೌನ್ ಪರಿಸ್ಥಿತಿಯಿಂದ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮ ಕಸುಬುದಾರರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ರೈತರು ಒಂದು ರೀತಿಯಲ್ಲಿ ನೋವಿಗೆ ಒಳಗಾಗಿದ್ದರೆ, ಅವರನ್ನು ಅವಲಂಭಿಸಿರುವ ಈ ಮೇಲ್ಕಂಡ ಕಾರ್ಮಿಕರು ತೀವ್ರ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.


ಇಂತಹ ಪರಿಸ್ಥಿತಿಯಿಂದ ಹಸಿವು, ನಿರುದ್ಯೋಗ, ಆರ್ಥಿಕ ದಿವಾಳಿತನ ಕೊರೊನಾಕ್ಕಿಂತ ಭೀಕರವಾಗಿ ಈ ಸಮುದಾಯವನ್ನು ಕಾಡುತ್ತಿದೆ.

ಹಿಂದೆಂದೂ ಕಂಡರಿಯದಂತಹ ಈ ಸಂಕಷ್ಟದಲ್ಲಿರುವ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರಿಗೆ ಆರ್ಥಿಕ ನೆರವು ನೀಡುವುದು ಇಂದಿನ ತುರ್ತಾಗಿದೆ. ಲಕ್ಷ ಲಕ್ಷ ಕೋಟಿ ರೂಗಳ ರಿಯಾಯಿತಿಗಳು, ಸಾಲಮನ್ನಾಗಳು ಈ ದೇಶದ ಬೆರಳಣಿಕೆಯಷ್ಟು ಶ್ರೀಮಂತಿರಿಗೆ, ಕಾರ್ಪೋರೇಟ್ ಕಂಪನಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಾ ಬಂದಿದೆ.


ಇಂತಹ ಸಂಕಷ್ಟದ ಸಂದರ್ಭದಲ್ಲಿಯಾದರೂ ದೊಡ್ಡ ದೊಡ್ಡ ಶ್ರೀಮಂತರು, ಕಾರ್ಪೋರೇಟ್ ಕಂಪನಿಗಳಿಂದ ಸಂಗ್ರಹ ಮಾಡುತ್ತಿದ್ದ ಸಂಪತ್ತಿನ ತೆರಿಗೆ ಪದ್ಧತಿಯನ್ನು ಮತ್ತೆ ಜಾರಿಗೆ ತಂದು ಕನಿಷ್ಠ ಶೇ ೨ ರಷ್ಟು ತೆರಿಗೆಯನ್ನು ಸಂಗ್ರಹ ಮಾಡಿ ಗ್ರಾಮೀಣ ಜನರಿಗೆ ನೆರವು ನೀಡಲು ಉಪಯೋಗಿಸಬೇಕೆಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, (ಂIಏSಅಅ) ಇಂದು ರಾಷ್ಟ್ರದಾದ್ಯಂತ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲು ಕರೆ ನೀಡಿದೆ.


ಇದಕ್ಕೆ ಇನ್ನೂರು ಸಂಘಟನೆಗಳಿಗಿಂತ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಈ ಕೂಡಲೆ ಈ ಸಂಘರ್ಷ ಸಮನ್ವಯ ಸಮಿತಿ ನೀಡಿರುವ ೧೨ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು  ಇಲ್ಲಿನ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಪದಾಧಿ ಕಾರಿಗಳು ಆಗ್ರಹಿಸಿದರು.

೧೨ ಹಕ್ಕೊತ್ತಾಯಗಳ ಜೊತೆಗೆ ವಿದ್ಯುತ್ ಇಲಾ ಖೆಯನ್ನು ಖಾಸಗೀಕರಣ ಗೊಳಿಸುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಇಲಾಖೆಯ ಮೇಲೆ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ಕಸಿಯುತ್ತಿರುವ  ಧೋರಣೆ ಯನ್ನು ಖಂಡಿಸಲಾಯಿತು.


ಈ ಮನವಿ ಪತ್ರದಲ್ಲಿ ರಾಜ್ಯ ರೈತ ಹಾಗೂ ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್, ರಾಜ್ಯ ಉಪಾಧ್ಯಕ್ಷ ಎಂ.ರಾಮು, ಜಿಲ್ಲಾಧ್ಯಕ್ಷ  ಕೆ.ಮಲ್ಲಯ್ಯ, ತಾಲ್ಲೂಕು ಅಧ್ಯಕ್ಷ ರಾಮೇಗೌಡ, ತಾಲ್ಲೂಕು ಗೌರವ ಅಧ್ಯಕ್ಷ ಹೆಚ್.ಸಿ ಕೃಷ್ಣಯ್ಯ, ಕಾರ್ಯದರ್ಶಿ ಹೆಚ್. ನಾಗೇಶ್, ಸಂಘದ ಪ್ರಮುಖರಾದ ತಿಮ್ಮೇಗೌಡ, ಸಿದ್ದಪ್ಪಾಜಿ ಸೇರಿದಂತೆ ಹಲವರು ಸಹಿ ಮಾಡಿದ್ದು ತಹಶಿಲ್ದಾರರಿಗೆ ಮನವಿ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑