Tel: 7676775624 | Mail: info@yellowandred.in

Language: EN KAN

    Follow us :


ಸಾಕವ್ವ ನಿಗೆ ಸಾಂತ್ವನ; ಪ್ರಾಣಕ್ಕೆ ತೊಂದರೆಯಿಲ್ಲ. ಇನ್ನೂ ಇಪ್ಪತ್ನಾಲ್ಕು ಗಂಟೆ ಕಣ್ಣಿನ ಬಗ್ಗೆ ಹೇಳಲಾಗುವುದಿಲ್ಲa

Posted date: 28 May, 2020

Powered by:     Yellow and Red

ಸಾಕವ್ವ ನಿಗೆ ಸಾಂತ್ವನ; ಪ್ರಾಣಕ್ಕೆ ತೊಂದರೆಯಿಲ್ಲ. ಇನ್ನೂ ಇಪ್ಪತ್ನಾಲ್ಕು ಗಂಟೆ ಕಣ್ಣಿನ ಬಗ್ಗೆ ಹೇಳಲಾಗುವುದಿಲ್ಲa

ಬೆಂಗಳೂರು/ಚನ್ನಪಟ್ಟಣ:ಮೇ/೨೮/೨೦/ಗುರುವಾರ. ನಿನ್ನೆ ಬೆಳಿಗ್ಗೆ ತನ್ನ ಮನೆಯ ಕಾಂಪೌಂಡ್ ನೊಳಗೆ ಕರಡಿಯೊಂದು ಅವಿತು ಕುಳಿತು ದಾಳಿ ಮಾಡಿದ್ದರಿಂದ ಒಂದು ಕಣ್ಣನ್ನು ಸ್ಥಳದಲ್ಲಿಯೇ ಕಳೆದುಕೊಂಡು, ಮುಖದ ಬಹುಭಾಗವನ್ನೆಲ್ಲಾ ಕಳೆದುಕೊಂಡಿರುವ ವೃದ್ದೆ ಸಾಕವ್ವ ನನ್ನು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಸದ್ಯ ಇನ್ನೂ ಐಸಿಯು ವಾರ್ಡ್ ನಲ್ಲಿದ್ದು ದಾಳಿಯ ಸಮಯದಲ್ಲೇ ಕಳೆದು ಕೊಂಡಿದ್ದ ಕಣ್ಣನ್ನು ಮರು ಜೋಡಿಸಲು ಸಾಧ್ಯವಾಗುತ್ತಿಲ್ಲ. ಇರುವ ಕಣ್ಣು ಮತ್ತು ಮುಖದ ಅಂದವನ್ನು ಮರಳಿ ಪಡೆಯಲು ಸಾಧ್ಯವೇ ಎಂಬುದನ್ನು ಮುಂದಿನ ಇಪ್ಪತ್ನಾಲ್ಕು ಗಂಟೆಗಳ ನಂತರವಷ್ಟೇ ತೀರ್ಮಾನಿಸಲಾಗುವುದು ಆದರೆ ಪ್ರಾಣಕ್ಕೆ ಯಾವುದೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ತಿಳಿದುಬಂದಿದೆ.


ನಗರದಲ್ಲಿ ಕೆಲವರಿಂದ ಆಕೆ ಮರಣಿಸಿದ್ದಾರೆಂದು ಊಹಾಪೋಹಗಳು ಹಬ್ಬಿದ್ದು, ಅದು ಸುಳ್ಳು‌ಮಾಹಿತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯು ಸಹ ನಗರದ ಬಡಾವಣೆಗಳಲ್ಲಿ ರಾತ್ರಿ ಸಮಯ ಯಾರೂ ಹೊರಗಡೆ ಬರಬಾರದೆಂಬ ಸೂಚನೆಯನ್ನು ನೀಡಿದ್ದು, ಸಾರ್ವಜನಿಕರು ಸಹ ಸ್ಪಂದಿಸಬೇಕೆಂದು ನಗರದ ವೃತ್ತ ನಿರೀಕ್ಷಕ ಗೋವಿಂದರಾಜು ತಿಳಿಸಿದರು.


ನಾನು ಖುದ್ದು ಆಸ್ಪತ್ರೆಗೆ ಭೇಟಿ ‌ನೀಡಿದ್ದು, ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದ್ದೇನೆ. ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಮುಂದಿನ ಪರಿಹಾರ ಮತ್ತು ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವಿದೆಯೋ ಎಲ್ಲವನ್ನೂ ವಿತರಿಸಲು ಕ್ರಮಕೈಗೊಳ್ಳುತ್ತೇವೆ ಎಂದು ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ಮಾಹಿತಿ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑