Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ

Posted date: 30 May, 2020

Powered by:     Yellow and Red

ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ

ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಇಡೀ ಜಗತ್ತನ್ನೇ ಆವರಿಸಿ ಬಲಿ ಪಡೆಯುತ್ತಿರುವ ಮಹಾಮಾರಿ ಕೊರೊನಾ (ಕೋವಿಡ್-೧೯) ಗೆ ಅಂಜದೆ, ಅಳುಕದೆ ಅವರಿಷ್ಟದಂತಿದ್ದ ಮಂದಿ ಕರಡಿಗೆ ಹೆದರಿ ಬಾಗಿಲು ಮುಚ್ಚಿ ಮಲಗುವ ಹಂತಕ್ಕೆ ತಲುಪಿದ್ದಾರೆ.


ಹೌದು ಇತ್ತೀಚಿಗೆ ಮೇವು ಹರಸಿ ಕಾಡಿನಿಂದ ನಗರಕ್ಕೆ ಬಂದ ಕರಡಿಯೊಂದು ಜನರ ಭೀತಿಗೆ ಹೆದರಿ, ಮನೆಯೊಂದರ ಕಾಂಪೌಂಡ್ ನೊಳಗೆ ಅವಿತು ಕುಳಿತಿತ್ತು. ಅರಿವಿಲ್ಲದ ಮನೆಯ ಒಡತಿ ಸಾಕಮ್ಮ (೬೫) ಮನೆಯ ಬಾಗಿಲು ತೆಗೆದು ಹೊರ ಬಂದ ತಕ್ಷಣ ಮೊದಲೇ ಹೆದರಿ ಕುಳಿತಿದ್ದ ಕರಡಿಯು ಏಕಾಏಕಿ ಸಾಕಮ್ಮನ ಮೇಲೆರೆಗಿ ಇಡೀ ಮುಖವನ್ನು ಪರಚಿ ಒಂದು ಕಣ್ಣನ್ನು ಕಿತ್ತು ಘಾಸಿಗೊಳಿಸಿದ್ದು, ಪ್ರಾಣಕ್ಕೆ ಯಾವುದೇ ತೊಂದರೆ ಆಗಿಲ್ಲವಾದರೂ ದೃಷ್ಟಿ ಮತ್ತು ಮುಖದ ಅಂದ ಮರಳಿ ಬರುವುದು ಕಷ್ಟಸಾಧ್ಯವಾಗಿದೆ.


ಇದಾದ ಬಳಿಕ ಕರಡಿ ನಗರದಲ್ಲಿಯೇ ತಳ ಊರಿದೆಯಾ ಇಲ್ಲ ಕಾಡು ಪಾಲಾಗಿದೆಯಾ ಎಂಬ ಸಂಶಯ ನಗರದ ಮಂದಿಯ ತಲೆ ಹೊಕ್ಕಿದ್ದು ಅದರಿಂದ ಆಚೆ ಬರಲಾಗದೆ ಕಪ್ಪೆ ವಟರಗುಟ್ಟಿದರೂ, ಕತ್ತೆ ಕಿರುಚಿದರೂ, ಕಪ್ಪು ನಾಯಿ ಅಥವಾ ಹಂದಿಯನ್ನು ಸಂದಿಯಲ್ಲೋ, ಪೊದೆಯಲ್ಲೋ ನೋಡಿದರೂ ಸಹ ಅದು ಕರಡಿಯೇ ಇರಬಹುದು ಎಂದು ಹೀಕರಿಸಿಕೊಂಡಿದ್ದಾರೆ.


ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ ಆ ಕರಡಿಯು ರೈಲು ಹಳಿ ದಾಟಿ ದೇವರಹಳ್ಳಿ ಮೂಲಕ ಅಬ್ಬೂರು ಗುಡ್ಡೆ ಕಡೆ ಹೋಗಿದೆ ಎಂದು ಹೇಳುತ್ತಾರಾದರೂ ಅದು ಇಂತಹ ಕಡೆಗೆ ಹೋಗಿದೆ ಎಂಬ ಕುರುಹು ಕಾಣದಿರುವುದರಿಂದ ನಗರದ ಮಂದಿ ಇಲ್ಲೇ ಇರಬಹುದು ಎಂದು ಕಂಗಾಲಾಗಿರುವುದು ಸತ್ಯ.


ಪೋಲಿಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ನಗರದಲ್ಲಿರುವ ಎಲ್ಲಾ ಸಿಸಿ ಟಿವಿ ಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ವೀಕ್ಷಿಸಿ ಜಾಹಿರು ಪಡಿಸುವ ಮೂಲಕ ಅದು ಎಲ್ಲಿಗೆ, ಎಷ್ಟೊತ್ತಿಗೆ ಹೋಗಿದೆ ಎಂಬುದನ್ನು ಪ್ರಚುರಪಡಿಸಿ ನಗರದ ಮಂದಿಗೆ ಧೈರ್ಯ ತುಂಬಬೇಕಾಗಿದೆ.


*ಅಂದಿನಿಂದ ಇಂದಿನವರೆಗೂ ತಪ್ಪಲಿಲ್ಲ ಗಾಳಿಸುದ್ದಿ*


ಕರಡಿಯೂ ಬಂದು ಹೋದಾಗಿನಿಂದ ಇಂದಿನವರೆಗೂ ನಗರದ ಅಂತರಗಂಗೆ, ಕುಡಿ ನೀರಿನ ಕಟ್ಟೆ, ರಾಮಮ್ಮನಕೆರೆ, ಚರ್ಚ್ ರಸ್ತೆ, ಕುವೆಂಪು ನಗರ, ಅಪ್ಪಗೆರೆ , ಲಾಳಾಘಟ್ಟ ಸೇರಿದಂತೆ ಅಲ್ಲಿತ್ತು, ಇಲ್ಲಿತ್ತು ಎಂಬ ಗಾಳಿ ಸುದ್ದಿಗಳೇ ಹರಿದಾಡುತ್ತಿವೆ. ಕೆಲವರಿಗೆ ಇದೇ ದುರಭ್ಯಾಸವಾಗಿದ್ದು ನಾಳೆ ನಿಜವಾಗಿಯೂ ಕರಡಿ ಕಾಣಿಸಿಕೊಂಡಾಗ ಅವರುಗಳ ಸ್ಥಿತಿ ಭಯಾನಕವಾಗುತ್ತದೆ ಎಂಬ ಅರಿವು ಇರಬೇಕಾಗಿದೆ.


ಕರಡಿ ನಗರದಲ್ಲಂತೂ ಇಲ್ಲ, ನಮ್ಮ ವನ್ಯಜೀವಿ ತಂಡ, ಪ್ರಾಣಿ ವೈದ್ಯ ತಂಡ ಮತ್ತು ಇಲಾಖೆಯು ನಗರದಲ್ಲಿ ಹುಡುಕಾಡಿದ್ದಾರೆ. ಅದು ಈಗಾಗಲೇ ಅರಣ್ಯ ಪ್ರದೇಶಕ್ಕೆ ಹೋಗಿರುವ ಗುರುತುಗಳನ್ನು ಪತ್ತೆ ಹಚ್ಚಿದ್ದಾರೆ. ನಗರದ ನಾಗರೀಕರು ಭಯಪಡುವ ಅಗತ್ಯವಿಲ್ಲ.

ಇನ್ನು ಪಿಟಿಎಸ್ ಬಳಿ ಚಿರತೆಗಳಿರುವುದು ಗಮನಕ್ಕೆ ಬಂದಿದೆ. ಚಿರತೆಗಳು ಯಾವುದೇ ಕಾರಣಕ್ಕೂ ಮನುಷ್ಯನ ಮೇಲೆ ಏಕಾಏಕಿ ಎರಗುವುದಿಲ್ಲ. ಎಲ್ಲಿ ತೊಂದರೆ ಕಂಡುಬಂದರೂ ಶೀಘ್ರವಾಗಿ ಕ್ರಮಕೈಗೊಳ್ಳುತ್ತೇವೆ.

*ಎಸ್ ಎನ್ ಹೆಗ್ಗಡೆ. ಡಿಸಿಎಫ್ ರಾಮನಗರ*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑