Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಹೊಸದೊಡ್ಡಿಯಲ್ಲಿ ಕಲ್ಲುಕಂಬ ಮುರಿದು, ತಂತಿ ಹರಿದು ಮಾವು ನಾಶಮಾಡಿದ ಒಂಟಿ ಸಲಗ

Posted date: 30 May, 2020

Powered by:     Yellow and Red

ರಾಮನಗರ ಹೊಸದೊಡ್ಡಿಯಲ್ಲಿ ಕಲ್ಲುಕಂಬ ಮುರಿದು, ತಂತಿ ಹರಿದು ಮಾವು ನಾಶಮಾಡಿದ ಒಂಟಿ ಸಲಗ

ರಾಮನಗರ:ಮೇ/೩೦/೨೦/ಶನಿವಾರ. ರಾಮನಗರ ಜಿಲ್ಲೆ/ತಾಲ್ಲೂಕಿನ ಹೊಸದೊಡ್ಡಿ ಗ್ರಾಮದ ಜಯರಾಮಯ್ಯ (ಜಯಣ್ಣ) ಎಂಬುವವರ ಮಾವಿನ ತೋಟಕ್ಕೆ ನಿನ್ನೆ ರಾತ್ರಿ ನುಗ್ಗಿರುವ ಒಂಟಿ ಸಲಗವೊಂದು ಮಾವಿನ ಫಸಲನ್ನು ಹಾಳುಗೆಡವಿದ್ದಲ್ಲದೆ, ಫೆನ್ಸಿಂಗ್ ಹಾಕಿದ್ದ ಕಲ್ಲುಕಂಬಗಳು ಮತ್ತು ತಂತಿಯನ್ನು ಕತ್ತರಿಸಿ ಹಾಕಿವೆ.


ಕಲ್ಲು ಕಂಬಕ್ಕೆ ಜೋಡಿಸಿರುವ ಮುಳ್ಳು ತಂತಿಗಳನ್ನು ಕಟಿಂಗ್ ಫ್ಲೇಯರ್ ನಲ್ಲಿ ತುಂಡರಿಸುವಂತೆ ತನ್ನ ಹಲ್ಲುಗಳಿಂದಲೇ ತುಂಡರಿಸಿದ್ದು ನಂತರ ಮೂವತ್ತಕ್ಕೂ ಹೆಚ್ಚು ಕಲ್ಲು ಕಂಬಗಳನ್ನು ಉರುಳಿಸಿ ಒಳಹೊಕ್ಕು ಫಸಲನ್ನು ತಿಂದು ಹಾಳುಗೆಡವಿದೆ.


ಕಳೆದ ತಿಂಗಳು ಸಹ ಐದಾರು ಆನೆಗಳು ‌ಇದೇ ತೋಟಕ್ಕೆ ನುಗ್ಗಿ ಮರಗಳನ್ನು ಮುರಿದು ಮಾವಿನ ಕಾಯಿಗಳನ್ನು ತಿಂದು ಹೋಗಿದ್ದಲ್ಲದೇ ಇಡೀ ಒಂದು ಎಕರೆ ತೋಟವನ್ನು ಕುಸ್ತಿಯ ಅಖಾಡವಾಗಿ ಮಾರ್ಪಡಿಸಿಕೊಂಡಿದ್ದವು. ಈ ಬಾರಿ ಒಂದೇ ಆನೆ ಬಂದಿರುವ ಕುರುಹು ಇದ್ದು, ಬಾದಾಮಿ ಮರಗಳನ್ನೇ ಆಯ್ಕೆ ಮಾಡಿಕೊಂಡು ರೆಂಬೆಗಳನ್ನು ಮುರಿದು ಕಾಯಿಗಳನ್ನು ತಿಂದು ಹೋಗಿವೆ ಎಂದು ಮಾದರಿ ರೈತ ಜಯಣ್ಣ ರವರು ದು:ಖ ತೋಡಿಕೊಂಡಿದ್ದಾರೆ.


ಅರಣ್ಯ ಇಲಾಖೆ, ತೋಟಗಾರಿಕೆ ಮತ್ತು ಮಾವು ಬೆಳೆಗಾರರ ಸಂಘದವರು ಬಂದು ಪರಿಶೀಲಿಸಿ ಸೂಕ್ತ ಪರಿಹಾರದ ಜೊತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑