Tel: 7676775624 | Mail: info@yellowandred.in

Language: EN KAN

    Follow us :


ಕೊರೋನಾ: ಹೊಸ ಪ್ರಕರಣ ದಾಖಲಾಗಿಲ್ಲ

Posted date: 30 May, 2020

Powered by:     Yellow and Red

ಕೊರೋನಾ: ಹೊಸ ಪ್ರಕರಣ ದಾಖಲಾಗಿಲ್ಲ

ರಾಮನಗರ:ಮೇ/೩೦/೨೦/ಶನಿವಾರ. ರಾಮನಗರ ಜಿಲ್ಲೆಯಲ್ಲಿ ಇಂದು ಯಾವುದೇ ಕರೋನಾ (ಕೋವಿಡ್-೧೯) ಪ್ರಕರಣ ಹೊಸದಾಗಿ ಧೃಡಪಟ್ಟಿರುವುದಿಲ್ಲ.


ಕೋವಿಡ್ ನಿಯಂತ್ರಣಕ್ಕೆ ಸಂಬಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಶನಿವಾರ (ಮೇ ೩೦) ವರದಿಯಲ್ಲಿ ಇದುವರೆಗೆ ಜಿಲ್ಲೆಯಲ್ಲಿ ಒಂದು ಕೊರೋನಾ ಪಾಸಿಟೀವ್ ಪ್ರಕರಣ ದಾಖಲಾಗಿರುವ ಹೊರತು ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂದು ನಮೂದಿಸಲಾಗಿದೆ.


ಪಿಡುಗು ತಡೆ ಕುರಿತ ಪ್ರಕರಣಗಳಿಗೆ ಸಂಬಧಪಟ್ಟಂತೆ ಇಂದಿನ ಇನ್ನುಳಿದ ಅಂಕಿ - ಅಂಶಗಳು ಹೀಗಿವೆ. ಇದುವರೆಗೆ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೩,೮೪೮ (ಹೊಸದಾಗಿ ಇಂದಿನ ೧೧೫ ಸೇರಿ). ೨೮ ದಿನಗಳ ನಿಗಾ ಅವಧಿ ಪೂರೈಸಿದವರು ೧,೨೨೮ ಜನರಿದ್ದಾರೆ. ಇಂದು ಹೊಸದಾಗಿ ಪೂರೈಸಿದವರು ಇರುವುದಿಲ್ಲ. ೧೪ ದಿನಗಳ ನಿಗಾ ಅವಧಿ ಪೂರೈಸಿದವರು ೧,೨೫೪ ಜನರಾಗಿದ್ದಾರೆ. ಹೊಸದಾಗಿ ಇಂದಿನ ೧೧೪ ಜನ ಸೇರಿ ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ ೧,೦೪೪ ಜನರಾಗಿದ್ದಾರೆ.


ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು ೪೧ ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ ೧,೬೬೦ ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ. ಒಬ್ಬರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್‌ಗೆ ಒಟ್ಟಾರೆ ಸಂಖ್ಯೆ ೧೯೫ ಕ್ಕೆ ಏರಿಕೆಯಾಗಿದೆ.


ಇಂದು ಹೊಸದಾಗಿ ೧೩೫ ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು ೩,೯೨೭ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ ಒಟ್ಟು ೩,೬೧೧ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿರುತ್ತದೆ. ಇಂದಿನ ೧೩೫ ಬಾಕಿ ವರದಿ ಸೇರಿ ಒಟ್ಟು ೩೧೫ ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑