Tel: 7676775624 | Mail: info@yellowandred.in

Language: EN KAN

    Follow us :


ಕೊರೋನಾ: ಹೊಸ ಪ್ರಕರಣ ದೃಢ; ರಾಮನಗರದಲ್ಲಿ ಎರಡನೇ ಪ್ರಕರಣ ದಾಖಲು

Posted date: 01 Jun, 2020

Powered by:     Yellow and Red

ಕೊರೋನಾ: ಹೊಸ ಪ್ರಕರಣ ದೃಢ; ರಾಮನಗರದಲ್ಲಿ ಎರಡನೇ ಪ್ರಕರಣ ದಾಖಲು

ರಾಮನಗರ:ಜೂನ್/೦೧/೨೦/ಸೋಮವಾರ. ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ (ಕೋವಿಡ್-೧೯) ಪಾಸಿಟಿವ್ ಪ್ರಕರಣ ಸೋಮವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡಕ್ಕೆ ಏರಿಕೆಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.


ಜಿಲ್ಲೆಯ ರಾಮನಗರ ತಾಲ್ಲೂಕಿನ ೫೭ ವರ್ಷ ವಯಸ್ಸಿನ ವ್ಯಕ್ತಿ ಓರ್ವರಿಗೆ (ಪಿ-೩೩೧೩) ಕೊರೊನಾ ದೃಢಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಳೆದ ಮೇ ೨೫ ರಂದು ಚೆನ್ನೈನಿಂದ ಹಿಂದಿರುಗಿದ್ದ ಎರಡು ವರ್ಷದ ಬಾಲಕನಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಇಂದು ಇನ್ನೊಂದು ಕೋವಿಡ್ ಪ್ರಕರಣ ದೃಢಪಡುವುದರೊಂದಿಗೆ ಒಟ್ಟು ಪ್ರಕರಣ ಎರಡಕ್ಕೆ ಏರಿಕೆಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಸೋಮವಾರದ (ಜೂ.೦೧) ಇನ್ನುಳಿದ ಅಂಕಿ - ಅಂಶಗಳು ಹೀಗಿವೆ. 


ಇದುವರೆಗೆ  ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೪,೧೧೨ (ಹೊಸದಾಗಿ ಇಂದಿನ ೧೬೫ ಸೇರಿ). ೨೮ ದಿನಗಳ ನಿಗಾ ಅವಧಿ ಪೂರೈಸಿದವರು ೧,೪೬೪ ಜನರಿದ್ದಾರೆ. ಇಂದು ಹೊಸದಾಗಿ ಪೂರೈಸಿದವರು ಇರುವುದಿಲ್ಲ. ೧೪ ದಿನಗಳ ನಿಗಾ ಅವಧಿ ಪೂರೈಸಿದವರು ೧,೩೧೬ ಜನರಾಗಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ ೧,೦೨೯ ಜನರಾಗಿದ್ದಾರೆ. (ಹೊಸದಾಗಿ ಇಂದಿನ ೧೬೧ ಜನ).


ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು ೧೧ ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ ೧,೬೭೭ ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ. ಒಟ್ಟು ೯ ಜನ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್‌ಗೆ ಒಟ್ಟಾರೆ ಸಂಖ್ಯೆ ೧೭೩ ಕ್ಕೆ ಏರಿಕೆಯಾಗಿದೆ.


ಇಂದು ಹೊಸದಾಗಿ ೧೭೯ ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು ೪,೨೦೬ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದಿನ ೯೨ ಮಾದರಿಗಳು ನಕಾರಾತ್ಮಕವಾಗಿವೆ. ಇದುವರೆಗೆ ಒಟ್ಟು ೩,೭೦೯ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿರುತ್ತದೆ. ಇಂದಿನ ೧೭೯ ಬಾಕಿ ವರದಿ ಸೇರಿ ಒಟ್ಟು ೪೯೫ ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑