Tel: 7676775624 | Mail: info@yellowandred.in

Language: EN KAN

    Follow us :


ಮಾನಸಿಕ ಖಾಯಿಲೆ ಮಾರಕವಲ್ಲ; ಮಾನಸಿಕ ತಜ್ಞ ಡಾ ಆದರ್ಶ

Posted date: 10 Jun, 2020

Powered by:     Yellow and Red

ಮಾನಸಿಕ ಖಾಯಿಲೆ ಮಾರಕವಲ್ಲ; ಮಾನಸಿಕ ತಜ್ಞ ಡಾ ಆದರ್ಶ

ಚನ್ನಪಟ್ಟಣ:ಜೂ/೧೦/೨೦/ಬುಧವಾರ. ಮಾನಸಿಕ ಖಾಯಿಲೆಯು ವಾಸಿಯಾಗುವ ಖಾಯಿಲೆಯಾಗಿದ್ದು ಆತಂಕ ಪಡಬೇಕಾಗಿಲ್ಲ. ಶೇಕಡಾ ೧೦ ರಷ್ಟು ಮಾನಸಿಕ ರೋಗಿಗಳು ನಮ್ಮೊಡನಿದ್ದಾರೆ. ಪೋಷಕರು ಆಸ್ಥೆ ವಹಿಸಿದರೆ ರೋಗ ಗುಣಮುಖವಾಗುವುದರಲ್ಲಿ ಅನುಮಾನವಿಲ್ಲ ಎಂದು ಮಾನಸಿಕ ತಜ್ಞ ಡಾ ಆದರ್ಶ ರವರು ತಿಳಿಸಿದರು.

ಅವರು ಇಂದು ನಗರದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಂದ್ರು ಡಯಾಗ್ನೋಸ್ಟಿಕ್ ಮತ್ತು ಮಾತೃಭೂಮಿ ಸೇವಾ ಫೌಂಡೇಶನ್ ಸಹಯೋಗ ದೊಂದಿಗೆ ಹಮ್ಮಿಕೊಂಡಿದ್ದ ಮಾನಸಿಕ ರೋಗಿಗಳಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


೨೦೧೫-೧೬ ಸಾಲಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಸರ್ವೆಯ ಪ್ರಕಾರ ಮಾನಸಿಕ ಖಾಯಿಲೆಗಳ  ರೋಗಿಗಳ ಸರ್ವ ಪ್ರಕಾರ ೧೩:೭ರ ಪ್ರಮಾಣದಲ್ಲಿದೆ. ಇದು ಜೀವಿತಾವಧಿಯಲ್ಲಿ ಮತ್ತು ಪ್ರಸ್ತುತ ಅವಧಿಯಲ್ಲಿ ೧೦.೬ ರ ಪ್ರಮಾಣದಲ್ಲಿದೆ. ಈ ಮಾನಸಿಕ (ಸ್ಕಿಜೋಫ್ರೇನಿಯಾ) ಖಾಯಿಲೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳ ನಾಲ್ಕನೇ ಮಂಗಳವಾರ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಪ್ರತಿ ಸೋಮವಾರ ರಾಮನಗರ ಜಿಲ್ಲಾ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಬಹುದು ಎಂದರು.


ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿಜಯನರಸಿಂಹ ಮಾತನಾಡಿ, ಮಾನಸಿಕ ಖಾಯಿಲೆಯು ನಮ್ಮ ಬದುಕಿನಲ್ಲಿ ಬಂದು ಹೋಗುವ ಅತಿಥಿಯಂತೆ. ಈ ಖಾಯಿಲೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಎಲ್ಲಾ ಆರೋಗ್ಯವಂತ ಮನುಷ್ಯ ರಂತೆ ಬದುಕಲು ಸಾಧ್ಯವಾಗುತ್ತದೆ. ಸರ್ಕಾರದಿಂದ ಈ ಖಾಯಿಲೆಗೆ ಬಹುತೇಕ ಉಚಿತ ಔಷಧೋಪಚಾರ ವಿದ್ದು ಸದುಪಯೋಗಪಡಿ ಸಿಕೊಳ್ಳಬೇಕು ಎಂದು ಕರೆ ನೀಡಿದರು.


ಚಂದ್ರ‍್ರು ಡಯಾಗ್ನೋಸ್ಟಿ ಕ್‌ನ ಮಾಲೀಕರಾದ ಚಂದ್ರೇಗೌಡ ಮಾತನಾಡಿ, ರಸ್ತೆಗಳಲ್ಲಿ ಓಡಾಡುವ ಮಾನಸಿಕ ಅಸ್ವಸ್ಥರು ಹಾಗೂ ಬಡ ಕುಟುಂಬದಲ್ಲಿರುವ ಅಸ್ವಸ್ಥರನ್ನು ಕೆಲ ಎನ್‌ಜಿಓಗಳು ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ ಆಸ್ಪತ್ರೆಗೆ ಸೇರಿಸುವ ಮೂಲಕ ರಾಮನಗರ ಜಿಲ್ಲೆಯನ್ನು ಮಾನಸಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕಾರ ನೀಡುವುದಾಗಿ ತಿಳಿಸಿದರು.


ಕಾರ್ಯಕ್ರಮದಲ್ಲಿ ಮಾತೃಭೂಮಿ ಸೇವಾ ಫೌಂಡೇಷನ್ ಮಹೇಶ್, ಸಾರ್ವಜನಿಕ ಆಸ್ಪತ್ರೆಯ ಸಿದ್ದರಾಮೇಗೌಡ, ಮನೋ ವೈದ್ಯಕೀಯ ಕಾರ್ಯಕರ್ತೆ ಪದ್ಮರೇಖಾ.ಎಸ್ ಮತ್ತು ಪವಿತ್ರ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑