Tel: 7676775624 | Mail: info@yellowandred.in

Language: EN KAN

    Follow us :


ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು

Posted date: 13 Jun, 2020

Powered by:     Yellow and Red

ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು

ಸಾಂದರ್ಭಿಕ ಚಿತ್ರ

ಚನ್ನಪಟ್ಟಣ:ಜೂ/೧೩/೨೦/ಶನಿವಾರ. OKತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದ್ದು, ಹೈನುಗಾರಿಕೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಗ್ರಾಮದಲ್ಲಿ ಸೂಚಕ ಛಾಯೆ ಅಮರಿಕೊಂಡಿದೆ. ಈ ಗ್ರಾಮದ ಜನರು ಈಗ ಸುಲಭೋಪಾಯವೊಂದನ್ನು ಕಂಡುಕೊಂಡಿದ್ದು, ಅಕ್ಕಪಕ್ಕದೂರಿನ ತಮ್ಮ ನೆಂಟರಿಸ್ಟರ ಮನೆಗಳಿಗೆ ತಮ್ಮ ಹಾಲು ಕರೆಯುವ ಹಸುಗಳನ್ನು ಸಾಗಿಸಿ ಅವರ ಮೂಲಕ ವ್ಯಾಪಾರದಲ್ಲಿ ತೊಡಗಿರುವುದರಿಂದ ಆ ಗ್ರಾಮದ ಜನರಿಗೆ ಆತಂಕ ಮೂಡಿರುವುದರ ಜೊತೆಗೆ ಜಗಳಗಳು ಪ್ರಾರಂಭವಾಗಿವೆ.


ಸೋಂಕಿತರ ಮನೆಗಳಿಂದ ೫೦ ಮೀಟರ್ ದೂರವನ್ನು ನಿಯಂತ್ರಣ ವಲಯ (ಕಂಟೋನ್ಮೆಂಟ್ ಝೋನ್) ಎಂದು ಉಳಿದ ಭಾಗವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಿದ್ದು ಕೃಷಿಗೆ ಆದ್ಯತೆ ನೀಡಿದ್ದರೂ ಸಹ ಬಮೂಲ್ ನವರು ಹಾಲು‌ ಖರೀದಿಸದಿರುವುದರಿಂದ ಹೈನೋದ್ಯಮಿಗಳು ಸಂಕಷ್ಟಕ್ಕೀಡಾಗಿದ್ದರು. ಇದನ್ನು ಮನಗಂಡ ಸ್ಥಳೀಯ ಬಮೂಲ್ ನಿರ್ದೇಶಕ ಜಯಮುತ್ತು ಬಮೂಲ್ ವತಿಯಿಂದ ಶೇಕಡಾ ೫೦ ರಷ್ಟು ಹಣವನ್ನು ಹಾಗೂ ಗ್ರಾಮದ ಹಾಲು ಉತ್ಪಾದಕರ ಸಂಘದಿಂದ ಶೇಕಡಾ ೨೫ ರಷ್ಟು ಹಣವನ್ನು ಗ್ರಾಹಕರಿಗೆ ತುಂಬಿಕೊಡುವ ಭರವಸೆ ನೀಡಿದ್ದರೂ ಸಹ ಹಾಲನ್ನು ಭೂಮಿಗೆ ಚೆಲ್ಲುವ ಬದಲು ನೆಂಟರ ಮೂಲಕ ಹಾಲನ್ನು ಡೈರಿಗೆ ಹಾಕಲು ಪ್ರಯತ್ನಿಸಿದ್ದು ಇದು ಆತಂಕ ಮತ್ತು ವಿವಾದಕ್ಕೆ ಕಾರಣವಾಗಿದೆ.


ನಿನ್ನೆ (ಶುಕ್ರವಾರ) ಸಂಜೆ ಕೊಂಡಾಪುರ ಗ್ರಾಮಕ್ಕೆ ಶಾನುಭೋಗನಹಳ್ಳಿ ಯ ಗ್ರಾಮದ ಮೂರು ಹಸುಗಳನ್ನು ಕೊಂಡಾಪುರ ಗ್ರಾಮದ ನೆಂಟರು ತಂದು, ಅವುಗಳ ಹಾಲನ್ನು ಡೈರಿ ಗೆ ಹಾಕಬೇಕಾದರೆ ಸಣ್ಣ ಗಲಾಟೆಯು ನಡೆದಿದೆ. ಇದರಿಂದ ಜಿದ್ದಿಗೆ ಬಿದ್ದ ಕೆಲವರು ನಮಗೂ ನೆಂಟರಿದ್ದಾರೆ, ನಾವೂ ಅಲ್ಲಿಂದ ಹಸುಗಳನ್ನು ತಂದು ಹಾಲನ್ನು ಮಾರಾಟ ಮಾಡುತ್ತೇವೆ ಎಂಬ ವಾಗ್ವಾದಗಳು ನಡೆದಿದ್ದು, ಕೊರೊನಾ ಜೊತೆಗೆ ಸಂಬಂಧಗಳಲ್ಲಿಯೂ ಬಿರುಕು‌ ಮೂಡುವ ಮುನ್ಸೂಚನೆಯಾಗಿದೆ.


ನಿಯಂತ್ರಣ ವಲಯದಿಂದ ಹಸುಗಳನ್ನು ಕೊಂಡು ತಂದು ಹಾಲನ್ನು ಕರೆಯಬಹುದು. ಪ್ರಾಣಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ವೈರಸ್ ಬರುವುದು ತೀರಾ ಕಡಿಮೆ. ತರುವ ಮುನ್ನಾ ಮತ್ತು ತಂದ ನಂತರ ಡೆಟಾಲ್ ಮತ್ತು ಬಿಸಿನೀರಿನಿಂದ ಹಸುವಿನ ಮೈ ತೊಳೆದು, ಅವರೂ ಸಹ ಮುಂಜಾಗ್ರತಾ ಕ್ರಮವನ್ನು ಕೈಗೊಂಡರೆ ಯಾವುದೇ ವೈರಸ್ ಹರಡುವುದಿಲ್ಲ. ಸುಖಾಸುಮ್ಮನೆ ಚರಂಡಿಗೆ ಚಲ್ಲುವ ಬದಲಿಗೆ ಈ ರೀತಿಯಾಗಿ ಉಪಯೋಗವಾಗುದು ಒಳ್ಳೆಯದು.

*ಡಾ ಜಯರಾಮು. ಪಶು ವೈದ್ಯಕೀಯ ಸಂಘದ ಅಧ್ಯಕ್ಷರು. ರಾಮನಗರ.*


ನಿಯಂತ್ರಣ ವಲಯದಲ್ಲೂ ಸಹ ಕೃಷಿ ಚಟುವಟಿಕೆಗೆ ಆದ್ಯತೆ ಇದ್ದು, ಹೈನುಗಾರಿಕೆಯೂ ಸಹ ಕೃಷಿ ಗೆ ಬರುವುದರಿಂದ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹಸುವನ್ನು ಬೇರೆಯವರು ಕೊಂಡೊಯ್ದರೆ ಸಮಸ್ಯೆ ಆಗುವುದಿಲ್ಲ. ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಹಸುಗಳನ್ನು ಕರೆದೊಯ್ಯುವುದು ಸೂಕ್ತವಾಗಿದ್ದು ಇದರಿಂದ ಪೋಲಾಗುವ ಹಾಲನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ರೈತರಿಗೆ ವರದಾನವಾಗಲಿದೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮಾಲೋಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ.

*ಬಿ ಕೆ ಸುದರ್ಶನ್. ತಹಶಿಲ್ದಾರರು. ಚನ್ನಪಟ್ಟಣ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑