Tel: 7676775624 | Mail: info@yellowandred.in

Language: EN KAN

    Follow us :


ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ

Posted date: 23 Jun, 2020

Powered by:     Yellow and Red

ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತ ಸಂಘದಿಂದ ಮನವಿ

ಚನ್ನಪಟ್ಟಣ:ಜೂ/೨೩/೨೦/ಮಂಗಳವಾರ. ರಾಜ್ಯ ಸರ್ಕಾರವು ರೂಪಿಸಲು ಹೊರಟಿರುವ  ಭೂ-ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಜನಾಂದೋಲನ ಮಹಾಮೈತ್ರಿ ಸಂಘಟನೆಯ ಸಹಯೋಗದೊಂದಿಗೆ ಶಾಸಕರ ಅನುಪಸ್ಥಿತಿಯಲ್ಲಿ ತಾಲ್ಲೂಕಿನ ಜಾತ್ಯಾತೀತ ಜನತಾದಳ ಪಕ್ಷದ ತಾಲ್ಲೂಕು ಅಧ್ಯಕ್ಷ ರಾಂಪುರ ರಾಜಣ್ಣ ನವರಿಗೆ ರೈತ ಸಂಘದ ಪದಾಧಿಕಾರಿಗಳು ಇಂದು ಮನವಿ ಸಲ್ಲಿಸಿದರು.


ಇದಕ್ಕೂ ಮೊದಲು ರೈತಪರ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮನವಿ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಎಂ ರಾಮು ರವರು ಸರ್ಕಾರವೂ ರೈತರನ್ನು ಮೂರ್ಖರನ್ನಾಗಿ ಹಾಗೂ ಭೂರಹಿತರನ್ನಾಗಿ ಮಾಡಲು ಮರಣ ಶಾಸನ ರೂಪಿಸುತ್ತಿದೆ. ಕರ್ನಾಟಕ ಸರ್ಕಾರ ಭೂ-ಸುಧಾರಣಾ ಕಾಯ್ದೆ ೧೯೬೧ ಕ್ಕೆ ತಿದ್ದುಪಡಿ ತಂದು ಕಾಯ್ದೆ ಕಲಂ ೭೯ ಎ.ಬಿ.ಸಿ ಮತ್ತು ೬೩ ಹಾಗೂ ೮೦ ನ್ನು ತೆಗೆದು ಹಾಕಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಕೊಂಡಿದೆ. ಇದನ್ನು ವಿರೋಧ ಪಕ್ಷದ ಶಾಸಕರು ಹಾಗೂ ನೀರಾ ಚಳುವಳಿಯಲ್ಲಿ ಭಾಗಿಯಾಗಿದ್ದ ಸ್ಥಳೀಯ ಶಾಸಕರೂ ಆದ ಕುಮಾರಸ್ವಾಮಿ ಯವರು ಪ್ರತಿಭಟಿಸುವ ಮೂಲಕ ಕಾಯ್ದೆಯನ್ನು ಹಿಂಪಡೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.


ಭೂ-ಸುಧಾರಣಾ ಕಾಯ್ದೆ ಯ ಜೊತೆಯಲ್ಲಿ ವಿದ್ಯುತ್ ಖಾಸಗೀಕರಣವಾಗುವುದನ್ನು ಕೈ ಬಿಡಬೇಕು. ಭೂ-ಸುಧಾರಣಾ ಕಾಯ್ದೆ ಜಾರಿಗೆ ಬಂದರೇ ಕೃಷಿಯು ಕಾರ್ಖಾನೆಗಳಂತಾಗುತ್ತವೆ. ಅದರ ಬೆಲೆಯನ್ನು ಕೃಷಿ ಕಾರ್ಖಾನೆಯ ಮಾಲೀಕನೇ ಬೆಲೆ ನಿಗದಿ ಮಾಡುತ್ತಾನೆ. ಅಷ್ಟೊತ್ತಿಗೆ ರೈತ ಹೇಳ ಹೆಸರಿಲ್ಲದಂತಾಗಿರುತ್ತಾನೆ. ರೈತರು ಕೂಲಿ ಕಾರ್ಮಿಕರಾಗಿ, ಕೊಂಡು ತಿನ್ನುವ ಗ್ರಾಹಕರು ಕಂಗಾಲಾಗಬೇಕಾದ ಸಂದಿಗ್ಧತೆ ಉಂಟಾಗುತ್ತದೆ ಎಂದು ತಿಳಿಸಿದರು.


ಮನವಿ ಸ್ವೀಕರಿಸಿ ಮಾತನಾಡಿ ದ ರಾಜಣ್ಣ ನವರು ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಕಾಯ್ದೆ ಜಾರಿಗೆ ತಂದು ಭೂಮಿಯನ್ನು ಕಿತ್ತುಕೊಂಡರೆ ಅವರ ಬದುಕು ನಿರ್ನಾಮವಾಗುತ್ತದೆ. ಇದಕ್ಕೆ ಅವಕಾಶವಾಗಬಾರದು. ಹಾಗಾಗಿ ತಮ್ಮ ಮನವಿಯನ್ನು ಶೀಘ್ರವಾಗಿ ಕುಮಾರಸ್ವಾಮಿ ಯವರ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.


ರೈತ ಸಂಘದ ತಾಲ್ಲೂಕು ಅಧ್ಯಕ್ಷ ರಾಮೇಗೌಡ, ಹೆಚ್ ಸಿ ಕೃಷ್ಣಯ್ಯ, ತಿಮ್ಮೇಗೌಡ, ವಿಜಯಕುಮಾರ್, ವೆಂಕಟಪ್ಪ ಮುಂತಾದವರು ಭಾಗಿಯಾಗಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑