Tel: 7676775624 | Mail: info@yellowandred.in

Language: EN KAN

    Follow us :


ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ

Posted date: 24 Jun, 2020

Powered by:     Yellow and Red

ಭೂಹಳ್ಳಿ ಡೈರಿಯಲ್ಲಿ ಹಾಲು ಕದ್ದ ಅಧ್ಯಕ್ಷ

ಚನ್ನಪಟ್ಟಣ:ಜೂ/೨೪/೨೦/ಬುಧವಾರ. ತಾಲ್ಲೂಕಿನ ಭೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನ "ಅಧ್ಯಕ್ಷತೆಯಲ್ಲಿ" ಕಾರ್ಯದರ್ಶಿ, ಹಾಲು ಪರೀಕ್ಷಕ ಮತ್ತು ಸಹಾಯಕ ಹಾಲು ಪರೀಕ್ಷಕರು ಸೇರಿ ಪ್ರತಿದಿನವೂ ೩೨ ರಿಂದ ೩೫ ಲೀಟರ್ ಹಾಲು ಕದಿಯುತ್ತಿದ್ದದ್ದು ಇಂದು ಬಹಿರಂಗಗೊಂಡಿದೆ.


ಭೂಹಳ್ಳಿಯ ಹಾಲು ಉತ್ಪಾದಕರ ಸಂಘದಲ್ಲಿ ಶೇಖರಿಸಿದ ಹಾಲಿನ ಡಬ್ಬಗಳನ್ನು ಅರಳಾಳುಸಂದ್ರ ಗ್ರಾಮದಲ್ಲಿರುವ ಶೀಥಲೀಕರಣ ಘಟಕಕ್ಕೆ ಪ್ರತಿದಿನವೂ ಟೆಂಪೋ ಮೂಲಕ ಸಾಗಿಸಲಾಗುತ್ತದೆ. ಈ ಟೆಂಪೋ ಮಾಲೀಕ ಮತ್ತು ಚಾಲಕನೂ ಸಹ ಅಧ್ಯಕ್ಷ ನೇ ಆಗಿದ್ದು ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಸಹ ಭಾಗಿಯಾಗಿರುವ ಸಾಧ್ಯತೆ ಇದೆ.


ಹಾಲಿನ ಡಬ್ಬಗಳನ್ನು ತುಂಬಿಕೊಂಡು ದಾರಿ ಮಧ್ಯದಲ್ಲಿ ಒಂದು ಕಡೆ ನಿಲ್ಲಿಸಿ ಎರಡು ಲೀಟರ್ ನೀರಿನ ಎಂಟು ಬಾಟಲ್ ಗಳಲ್ಲಿ ಹಾಲು ತುಂಬಿಸಿಕೊಂಡು ಡಬ್ಬಕ್ಕೆ ನೀರು ತುಂಬಿಸಿ ಶೀಥಲೀಕರಣ ಘಟಕಕ್ಕೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.


ಹಾಲು ಉತ್ಪಾದಕರಿಗೆ ಅನುಮಾನ ಬಂದು ಹಿಂಬಾಲಿಸಿ ಹಾಲನ್ನು ಕದಿಯುತ್ತಿದ್ದುದನ್ನು ಖುದ್ದು ಹಿಡಿದು ಬಮೂಲ್ ನ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಅಧಿಕಾರಿಗಳು ಭೇಟಿ ನೀಡಿ ರಾಜಿ ಸಂಧಾನ ಅಥವಾ ಕ್ರಮ ಕೈಗೊಳ್ಳುವ ಸಲುವಾಗಿಯೋ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


ಅರಳಾಳುಸಂದ್ರ ಶೀಥಲೀಕರಣ ಆರಂಭವಾದ ದಿನದಿಂದ ಇಲ್ಲಿಯವರೆಗೂ ಸಂಘಕ್ಕೆ ಆಗಿರುವ ನಷ್ಟ ತುಂಬಿಕೊಡುವಂತೆ ಬಮೂಲ್ ಸೂಪರ್ ವೈಸರ್ ಹೊನ್ನಪ್ಪ ಪೂಜಾರ್ ತಿಳಿಸಿದ್ದಾರೆ ಎಂಬ ಮಾಹಿತಿಯನ್ನು ನಂಬಲರ್ಹ ಮೂಲಗಳು ಖಚಿತಪಡಿಸಿವೆ. ಸಂಬಂಧಿಸಿದವರನ್ನು ಕೆಲಸದಿಂದ ವಜಾಗೊಳಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಬೇಕಾಗಿದೆ. ಅಧಿಕಾರಿ ಹೊನ್ನಪ್ಪ‌ಪೂಜಾರ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಧ್ಯಕ್ಷ ಕಂ ಚಾಲಕ ಹಾಲು ಕದಿಯುತ್ತಿದ್ದುದ್ದನ್ನು ಒಪ್ಪಿಕೊಂಡಿದ್ದಾರೆ. ನಷ್ಟವನ್ನು ತುಂಬಿಕೊಡುವುದಾಗಿಯೂ ಹೇಳಿದ್ದಾರೆ. ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.


ಬಮೂಲ್ ನಿರ್ದೇಶಕ  ಜಯಮುತ್ತು ಮಾತನಾಡಿ ಒಂದೇ ಒಂದು ದಿನದ ಮಾಹಿತಿಯನ್ನು ಬಿಡದೇ ಸಂಗ್ರಹಿಸಿ, ಒಟ್ಟು ಎಷ್ಟು ದಿನದಿಂದ ಎಷ್ಟೆಷ್ಟು ಹಾಲನ್ನು, ಯಾರು ಯಾರು ಹೇಗೆ ಕದಿಯುತ್ತಿದ್ದರು. ಎಷ್ಟು ಕದ್ದಿದ್ದಾರೆ ಎಂಬುದನ್ನು ಕಲೆಹಾಕಿ, ಅಷ್ಟು ಬಾಬ್ತನ್ನು ಜಮಾ ಮಾಡಿಸುವುದಾಗಿ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑