Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೬೬: ನೈತಿಕ ಜೀವನವನ್ನು ನಾವು ಏಕೆ ನಡೆಸಬೇಕು ?

Posted date: 26 Jun, 2020

Powered by:     Yellow and Red

ತಾಳೆಯೋಲೆ ೨೬೬: ನೈತಿಕ ಜೀವನವನ್ನು ನಾವು ಏಕೆ ನಡೆಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ನೈತಿಕ ಜೀವನವನ್ನು ನಾವು ಏಕೆ ನಡೆಸಬೇಕು ?


ಭೂಲೋಕದಲ್ಲಿ ಅಥವಾ ಬೇರೆ ಲೋಕದಲ್ಲಾಗಲಿ ವಿಜಯವಂತವಾಗಿ ಜೀವಿಸುವುದಕ್ಕೆ ಒಬ್ಬ ವ್ಯಕ್ತಿಗೆ ಒಳ್ಳೆಯ ವ್ಯಕ್ತಿತ್ವವೂ ಬಹಳ ಅವಶ್ಯಕತೆ ಎಂದು ಪುರಾಣ ಇತಿಹಾಸಗಳು ಹೇಳುತ್ತಿವೆ. ಭಗವದ್ಗೀತೆಯಲ್ಲಿಯೂ ಸಹ ಭಗವಂತನಾದ ಶ್ರೀ ಕೃಷ್ಣನು ಧರ್ಮ ಪ್ರವರ್ತನೆಯುಳ್ಳ ಜೀವನದ ಬಗ್ಗೆ ಹೇಳಿರುವರು. ನಮ್ಮ ಒಳ್ಳೆಯ ತನವೇ ನಮಗೆ ಶ್ರೀ ರಾಮ ರಕ್ಷೆಯಾಗಿ ನಮ್ಮನ್ನು ಸದಾ ಕಾಪಾಡುತ್ತದೆ. ಯಾರು ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿ ಆದರ್ಶವಂತನಾದ ಜೀವನವನ್ನು ಯಾರು ನಡೆಸುತ್ತಿರುವರೋ, ಅಂತಹವರು ವಿಶ್ವದಲ್ಲಿ ಯಾವ ಲೋಕದಲ್ಲಿ ಇದ್ದರೂ ವಿಜಯಗಳಾಗಿ ಇರುವರು.


ನೈತಿಕತೆ ಲೋಪಿಸಿದ ವ್ಯಕ್ತಿ ತಪ್ಪದೇ ಪತನಗೊಳ್ಳುತ್ತಾ ವ್ಯಕ್ತಿಯೊಬ್ಬನ ಬುದ್ದಿ ಬಲವನ್ನು ನಾಶ ಮಾಡುತ್ತದೆ. ಕ್ರೋಧವನ್ನು ಬೆಳೆಸಿ ಪತನಕ್ಕೆ ದಾರಿ ಮಾಡಿಕೊಡುತ್ತದೆ. 


ಆದ್ದರಿಂದ ನಮ್ಮ ನಿತ್ಯ ಜೀವನದಲ್ಲಿ ಹಾಗೂ ಕುಟುಂಬ ಜೀವನದಲ್ಲಿನ ಆದರ್ಶವನ್ನು ಹೊಂದಿರುವ ಉನ್ನತ ವ್ಯಕ್ತಿಗೆ ಒಳ್ಳೆಯದು ಉಂಟಾಗುತ್ತದೆ. ಅಂತಹ ಧಾರ್ಮಿಕರಿಗೆ ಸ್ವರ್ಗವು ಸಿಗುವುದೆಂಬುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಆದ್ದರಿಂದ ಎಲ್ಲಾ ಸಂಪತ್ತುಗಳಲ್ಲಿ ಸದ್ಗುಣ ಸಂಪತ್ತೇ ಮಹೋನ್ನತವಾದುದೆಂದು ನಮ್ಮ ಹಿರಿಯರು ಬೋಧಿಸುವರು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑