Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೬೭: ವ್ಯಕ್ತಿಯೊಬ್ಬನ ‌ಪ್ರಧಾನ ನೈತಿಕತೆ ಯಾವುದು ?

Posted date: 27 Jun, 2020

Powered by:     Yellow and Red

ತಾಳೆಯೋಲೆ ೨೬೭: ವ್ಯಕ್ತಿಯೊಬ್ಬನ ‌ಪ್ರಧಾನ ನೈತಿಕತೆ ಯಾವುದು ?

**


*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ವ್ಯಕ್ತಿಯೊಬ್ಬನ ‌ಪ್ರಧಾನ ನೈತಿಕತೆ ಯಾವುದು ?


ನಿಷ್ಕಪಟವು ವ್ಯಕ್ತಿಯೊಬ್ಬನಲ್ಲಿನ ದೊಡ್ಡ ನೈತಿಕ ಗುಣ. ಕಪಟವಿಲ್ಲದ ಸತ್ಯ ಹೃದಯವೇ ಸದ್ಗುಣ. ಪರಮೇಶ್ವರನು ಭೋಲೋ ಶಂಕರ ಎಂದು ಕೀರ್ತಿಯನ್ನು ಹೊಂದಿರುವನು.


ಕಪಟ ಗುಣವನ್ನು ಹೊಂದಿ ಇತರರನ್ನು ಮೋಸಗೊಳಿಸುವುದೇ ಅನೈತಿಕತೆ. ನಾವು ನಮ್ಮ ಅಂತರಾತ್ಮವನ್ನು ವಂಚಿಸಿಕೊಳ್ಳಬಾರದು. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ನಮ್ಮ ಅಂತರಾತ್ಮವು ನಮಗೆ ಹೇಳುತ್ತಲೇ ಇರುತ್ತದೆ. ಆದರೆ ಸ್ವಾರ್ಥ ಪ್ರಯೋಜನೆಗಾಗಿ ಅಂತರಾತ್ಮದ ಕೂಗನ್ನು ಮುಚ್ಚಿ ಕೆಟ್ಟ ಹಾದಿಯಲ್ಲಿ ಮನುಷ್ಯ ನಡೆಯುತ್ತಾನೆ. ಇಂತಹ ಅನೈತಿಕ ಜೀವನವು ಮಾನವನಿಗೆ ಶಾಶ್ವತ ಸುಖವನ್ನು ಪ್ರಸಾದಿಸುವುದಿಲ್ಲ.


ನೈತಿಕತೆ ಇಲ್ಲದವನು ಎಷ್ಟು ದೈವೋಪಾಸನೆಯನ್ನು ಮಾಡಿದರೂ ಎಷ್ಟು ವೃತಗಳನ್ನು ಅನುಷ್ಠಿಸಿದರೂ, ಎಷ್ಟು ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿದರೂ, ಸಹ ದೈವತ್ವವು ಸಿದ್ದಿಸುವುದಿಲ್ಲ.

ಕಪಟವಿಲ್ಲದ ಭೋಲೆನಾಥನಂತವನು ಆಧ್ಯಾತ್ಮಿಕ ಸಾಧನೆಗಳಲ್ಲಿ ಶೀಘ್ರವಾಗಿ ವಿಜಯವನ್ನು ಹೊಂದುವನು. ಚಿತ್ತ ಶುದ್ಧಿಯಿಲ್ಲದ ಶಿವ ಪೂಜೆಗಳು, ಆತ್ಮ ಶುದ್ದಿ ಇಲ್ಲದ ಆಚಾರಗಳು ಫಲವಾದುವುಗಳಲ್ಲ. ನಾಲ್ವರಲ್ಲಿ ಉತ್ತಮವೆಂದು ಗುರುತಿಸುವುದರಿಂದ ವ್ಯಕ್ತಿಯೊಬ್ವ ಉತ್ತಮನಾಗುವುದಿಲ್ಲ. ಆದ್ದರಿಂದ ಸತ್ಯವನ್ನು ನಂಬಿಕೊಂಡು ಸನ್ಮಾರ್ಗದಲ್ಲಿ ಪ್ರಯಾಣಿಸುವುದೇ ಸರಿಯಾದ ನೈತಿಕ ಜೀವನ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*



ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑