Tel: 7676775624 | Mail: info@yellowandred.in

Language: EN KAN

    Follow us :


ನಗರದ ತ್ಯಾಜ್ಯವೆಲ್ಲಾ ಮೋರಿಯಲ್ಲಿ, ಸರಾಗವಾಗಿ ನೀರು ಹರಿಯದೇ ಬಂದ್. ಒನ್ ವೇ ಆದ ಹೆದ್ದಾರಿ

Posted date: 27 Jun, 2020

Powered by:     Yellow and Red

ನಗರದ ತ್ಯಾಜ್ಯವೆಲ್ಲಾ ಮೋರಿಯಲ್ಲಿ, ಸರಾಗವಾಗಿ ನೀರು ಹರಿಯದೇ ಬಂದ್. ಒನ್ ವೇ ಆದ ಹೆದ್ದಾರಿ

ಮೋರಿಗೆ ಕಸ ಸುರಿಯಲು ಹೋಗುತ್ತಿರುವ ವ್ಯಕ್ತಿ

ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ನಗರದ ಹೆದ್ದಾರಿಯ ಸಾತನೂರು ವೃತ್ತದ ಬಳಿ ಇರುವ ದೊಡ್ಡ ಮೋರಿಯೊಂದು ಕಟ್ಟಿಕೊಂಡಿದ್ದರಿಂದ ನೀರು ಸರಾಗವಾಗಿ ಹರಿಯದೇ, ಹೆದ್ದಾರಿಯ ಮೇಲೆ ಮಂಡಿಯುದ್ದ ಗಟಾರದ ನೀರು ಹರಿಯುತ್ತಿದ್ದು, ಅದನ್ನು ಸರಿಪಡಿಸಲೋಸುಗ ಬಸ್ ನಿಲ್ದಾಣದಿಂದ ಸಾತನೂರು ವೃತ್ತದ ವರೆಗೆ ಒಂದು ಬದಿ ರಸ್ತೆಯನ್ನು ಮುಚ್ಚಿ, ಒಂದೇ ಬದಿ ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಮಾಡಿ ಮೋರಿ ಸರಿಪಡಿಸುವ ಕಾರ್ಯವನ್ನು ರಾಜ್ಯ ಹೆದ್ದಾರಿ ಯ ಇಂಜಿನಿಯರ್ ಗಳು ಇಂದು ಕೈಗೆತ್ತಿಕೊಂಡರು.


ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದಿಂದ ಬರುವ ಎಲ್ಲಾ ರೀತಿಯ ನೀರು ಇದೇ ಮೋರಿಯಲ್ಲಿ ಬರುತ್ತದೆ. ಅಂಬೇಡ್ಕರ್ ಭವನ ಮತ್ತು ಪಾಲಿಟೆಕ್ನಿಕ್ ಕಾಲೇಜಿನ ನಡುವೆ ಈ ಕಾಲುವೆ ಇದ್ದು, ರೇಷ್ಮೆ ಗೂಡಿನ ಮಾರುಕಟ್ಟೆಯ ಬಳಿಯೇ ಹರಿದು ಶೆಟ್ಟಿಹಳ್ಳಿ ಕೆರೆ ಸೇರುತ್ತದೆ. ಇವುಗಲಕ ನಡುವೆ ಹೆದ್ದಾರಿ ಇದ್ದು ಹೆದ್ದಾರಿಯ ಮಧ್ಯದಲ್ಲಿ ಮೋರಿ ಕಟ್ಟಿಕೊಂಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿತ್ತು.

ಮೋರಿಯಲ್ಲಿ ಕಟ್ಟಿಕೊಂಡಿರುವ ತ್ಯಾಜ್ಯವನ್ನು ತೆಗೆಯುತ್ತಿರುವ ಕಾರ್ಮಿಕರು



ಮೋರಿ ಕಟ್ಟಿಕೊಳ್ಳಲು ಕಾರಣವೇನು ಗೊತ್ತೇ ?


ಮದೀನ ಚೌಕದ ಬಳಿ ಪಶು ಮಾಂಸದಂಗಡಿಗಳು ಹೆಚ್ಚಾಗಿ ಇವೆ. ಇವುಗಳ ಜೊತೆಯಲ್ಲಿ ಮೀನಿನ ಅಂಗಡಿಗಳು, ಕೋಳಿ ಮಾಂಸದಂಗಡಿಗಳು ಸಾಕಸ್ಟಿವೆ. ಮದಿನಾ ಚೌಕದ ಬಳಿ ಯೇ ಈ ಎಲ್ಲಾ ಕಸವನ್ನು ಹಾಕಲಾಗುತ್ತದೆ. ಹಲವಾರು ಮಂದಿ ರಸ್ತೆಯ ಬದಿಯಲ್ಲಿ ಹಾಕುವ ಬದಲು, ಮೋರಿಗೆ ತಂದು ಸುರಿಯುತ್ತಾರೆ. ಇದಕ್ಕೆ ಕಲಶವಿಟ್ಟಂತೆ ಅತಿಯಾದ ಪ್ಲಾಸ್ಟಿಕ್ ಚೀಲಗಳು ಮತ್ತು ಕೊಳೆಯದ ತೆಳುವಾದ ಪ್ಲಾಸ್ಟಿಕ್ ಕವರ್ ಗಳು, ಚೀಲಗಳಲ್ಲಿ ಕಟ್ಟಿ ಹಾಕುವ ಮಾಂಸದ ತ್ಯಾಜ್ಯಗಳೆಲ್ಲವೂ ಸೇರಿ ಕೊಂಡು ಮೋರಿ ಕಟ್ಟಿಕೊಳ್ಳಲು ಕಾರಣ ಎಂದು ಹೆದ್ದಾರಿಯ ಇಂಜಿನಿಯರ್ ಗಳು ಹೇಳುತ್ತಾರೆ.


ನಗರಸಭೆಯೇ ಕಾರಣ ?


ನಗರಸಭೆಯ ಮಂದಿ‌ ಸರಿಯಾದ ಸಮಯಕ್ಕೆ ಕಸ ವಿಲೇವಾರಿ ಮಾಡದಿರುವುದು, ಪ್ಲಾಸ್ಟಿಕ್ ನಿಷೇಧಿಸಿದರಿವುದು, ಮಿಗಿಲಾಗಿ ಕಸ ವಿಂಗಡಿಸಿ, ಅದಕ್ಕೊಂದು ಮುಕ್ತಿ ನೀಡಲು ಸರಿಯಾದ ಕ್ರಮ ಕೈಗೊಳ್ಳದಿರುವುದು ಮೋರಿಗಳು ಕಟ್ಟಲು ಕಾರಣವಾಗಿವೆ. ಎಲ್ಲಾ ಮೋರಿಗಳನ್ನು ಬಾಕ್ಸ್ ಮೋರಿಗಳನ್ನಾಗಿ ಮಾಡಿ, ನೀರು ಸರಾಗವಾಗಿ ಹರಿಯುವಂತೆ ಮಾಡಿದರೇ ಮೋರಿಗಳು ಕಟ್ಟಿಕೊಳ್ಳುವುದಿಲ್ಲ ಎಂಬುದು ಸಾಮಾನ್ಯ ತಿಳುವಳಿಕೆಯಾದರು ಅಧಿಕಾರಿಗಳಿಗೆ ಇದು ಹೊಳೆಯಲಿಲ್ಲವೋ ! ಅಥವಾ ಜಾಣಗುರುಡೋ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದ್ದು ಅವರೇ ಉತ್ತರಿಸಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑