Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೬೮: ಗೃಹಸ್ಥನು ಸನ್ಹಾಸಿಗಳಿಗಿಂತ ಹೇಗೆ ಉನ್ನತನಾಗಿ ಇರಬಹುದು ?

Posted date: 29 Jun, 2020

Powered by:     Yellow and Red

ತಾಳೆಯೋಲೆ ೨೬೮: ಗೃಹಸ್ಥನು ಸನ್ಹಾಸಿಗಳಿಗಿಂತ ಹೇಗೆ ಉನ್ನತನಾಗಿ ಇರಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಗೃಹಸ್ಥನು ಸನ್ಹಾಸಿಗಳಿಗಿಂತ ಹೇಗೆ ಉನ್ನತನಾಗಿ ಇರಬಹುದು ?


ಒಬ್ಬ ಸನ್ಯಾಸಿ ಸಂಪೂರ್ಣನು ಎಂದು ಭಾವಿಸುವುದು ಸರಿಯಾದುದಲ್ಲ. *ವಾಸ್ತವವಾಗಿ ಒಬ್ಬ ನಿಜವಾದ ಸನ್ಯಾಸದ ಜೀವನವನ್ನು ನಡೆಸುವವನು ಸಾವಿರ ಜನಗಳಲ್ಲಿ ಒಬ್ಬರಿರುವರೆಂದರೆ ಆಶ್ಚರ್ಯ ಪಡಬೇಕಾದುದೇನಿಲ್ಲ. ಸರ್ವ ಸಂಘ ಪರಿತ್ಯಾಗಿಯಾಗಿ, ನಿತ್ಯ ಸಂತುಷ್ಟನಾಗಿ, ಸರ್ವ ವಿಧ ಕಾಮ ಗಳನ್ನು ತ್ಯಜಿಸಿದವನಾಗಿ, ಆತ್ಮದಲ್ಲಿಯೇ ತಮ್ಮ ಮನಸ್ಸನ್ನು ಲಗ್ನ ಮಾಡಿ ಜೀವಿಸುವವನೇ ನಿಜವಾದ ಸನ್ಯಾಸಿ.* ಅಂತಹ ಸನ್ಯಾಸಿ ನಿಜವಾಗಿಯೂ ಸಂಪೂರ್ಣನೆ.


ಆದರೆ *ಜಪ ಧ್ಯಾನಾದಿಗಳೊಂದಿಗೆ ಕಾಲಯಾಪನೆ ಮಾಡುವ ಸತ್ಯ ಹೃದಯವಿಲ್ಲದ ಸನ್ಯಾಸಿಗಿಂತ ಆದರ್ಶನಾಗಿರುವ ಗೃಹಸ್ಥನು ಎಷ್ಟೋ ಉನ್ನತನು.* ಅಂತಹ ಗೃಹಸ್ಥನು ತನ್ನ ಕುಟುಂಬಕ್ಕೆ, ಒಂದು ಕಡೆ ಸಮಾಜಕ್ಕೂ ಸೇವೆ ಮಾಡಿದವನಾಗಿದ್ದು, ದಾನ ಧರ್ಮಗಳನ್ನು ಮಾಡುತ್ತಾ ತನ್ನ ಅಸ್ತಿತ್ವಕ್ಕೆ ಒಂದು ಮೌಲ್ಯವನ್ನು ಹೊಂದಿದವನಾಗಿರುವನು. ನಿಜವಾದ ಸನ್ಯಾಸಿಯೂ ಸಹ ತನ್ನ ದೈವ ಬಲದಿಂದ ಲೋಕ ಕಲ್ಯಾಣವನ್ನು ಮಾಡಬಲ್ಲನು.


ಆದರ್ಶವಂತನಾದ ಗೃಹಸ್ಥನನ್ನು ದೇವರು ಬಹಳಷ್ಟು ಅಭಿಮಾನಿಸುವನು. ತನ್ನ ಸ್ವಾರ್ಥವನ್ನೇ ಲಕ್ಷ್ಯವಾಗಿಟ್ಟುಕೊಳ್ಳದೆ ತನ್ನೊಂದಿಗೆ ಹತ್ತು ಮಂದಿಯ ಒಳ್ಳೆಯದಕ್ಕಾಗಿ ನಿಜವಾಗಿಯೂ ಕೆಲಸ ಮಾಡುವವನ ಮೇಲೆ ದೇವರ ಕೃಪೆ ಸದಾ ಇರುತ್ತದೆ. ಹೀಗೆ ಹತ್ತು ಮಂದಿಗೆ ಸೇವೆಗಳನ್ನು ನೀಡಬಲ್ಲ. ಹಾಗೆಯೇ ಪೋಷಿಸಬಲ್ಲ ಗೃಹಸ್ಥನೇ ಧನ್ಯನು.


ಇಂತಹ ಗೃಹಸ್ಥನು ಕಪಟ ಸನ್ಯಾಸಿಗಿಂತ ಬಹಳಷ್ಟು ಪಾಲು ಉತ್ತಮನು. *ಕೇವಲ ತನ್ನ ಮೋಕ್ಷಕ್ಕಾಗಿಯೇ ಪೂರ್ತಿ ಜೀವನವನ್ನು ನಡೆಸುವ ಸನ್ಯಾಸಿಗಿಂತ ಸಂಘ ಕ್ಷೇಮಕ್ಕೆ ಕೆಲಸ ಮಾಡುವ ಗೃಹಸ್ಥನೇ ಉನ್ನತನು.*

ಸಕ್ರಮವಾದ ಜೀವನ ವಿಧಾನವನ್ನು ಹೊಂದಿ ಭಕ್ತಿ ಶ್ರದ್ಧೆಗಳಿಂದ ತನ್ನ ಬಾಧ್ಯತೆಗಳನ್ನು ನಿರ್ವಹಿಸುವ ಗೃಹಸ್ಥನೂ ಸಹ ಉನ್ನತ ಲೋಕಗಳಿಗೆ ಸೇರುವ ಅರ್ಹತೆಯನ್ನು ಹೊಂದಿರುತ್ತಾನೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑