Tel: 7676775624 | Mail: info@yellowandred.in

Language: EN KAN

    Follow us :


ನಾವು ಬದುಕಿರುವುದೇ ಪ್ರಕೃತಿಯಿಂದ, ಅದನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯವೂ ನಮ್ಮದೆ ಡಾ ಮಲವೇಗೌಡ

Posted date: 29 Jun, 2020

Powered by:     Yellow and Red

ನಾವು ಬದುಕಿರುವುದೇ ಪ್ರಕೃತಿಯಿಂದ, ಅದನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯವೂ ನಮ್ಮದೆ ಡಾ ಮಲವೇಗೌಡ

ಚನ್ನಪಟ್ಟಣ:ಜೂ/೨೮/೨೦/ಭಾನುವಾರ. ಪ್ರಕೃತಿಯೇ ಇಲ್ಲವೆಂದರೆ ಮನುಷ್ಯನು ಸೇರಿದಂತೆ ಯಾವುದೇ ಜೀವಚರಗಳು ಬದುಕಲು ಸಾಧ್ಯವಿಲ್ಲ. ಮನುಷ್ಯನ ದುರಾಸೆಯಿಂದ ಇಡೀ ಜಗತ್ತಿನ ವಾತಾವರಣವೇ ಕಲುಷಿತಗೊಂಡಿದೆ. ಮುಂದಿನ ಪೀಳಿಗೆಗೆ ನಾವು ಕೊಡುವುದೇನಾದರು ಇದ್ದರೆ ಅದು ಪ್ರಕೃತಿಯನ್ನು ಉಳಿಸಿ ಹೋಗುವುದು ಮಾತ್ರ ಎಂದು ನಗರದ ಮೂಳೆ ತಜ್ಞ ಮಾತೃಶ್ರೀ ಆರ್ಥೋಫೆಡಿಕ್ ಆಸ್ಪತ್ರೆಯ ವ್ಯವಸ್ಥಾಪಕ ಡಾ ಮಲವೇಗೌಡರು ಅಭಿಪ್ರಾಯಪಟ್ಟರು.

ಅವರು ಇಂದು ಮುಂಜಾನೆ ರೈಲ್ವೇ ನಿಲ್ದಾಣದ ಬಳಿ ಗಿಡಗಳನ್ನು ನೆಟ್ಟು ಮಾತನಾಡಿದರು.


ಯಾವುದೇ ಫಲಾಪೇಕ್ಷೆ ಆಶಿಸದೆ, ನಮಗೆ ಸಂಪೂರ್ಣ ಸಹಕಾರ ನೀಡಿರುವುದು, ನೀಡುತ್ತಿರುವುದು ಪ್ರಕೃತಿ. ಅದಕ್ಕೆ ಪ್ರತಿಯಾಗಿ ನಾವು ಗಿಡಮರಗಳನ್ನು ನಾಶ ಪಡಿಸದೆ, ಸಾಧ್ಯವಾದಷ್ಟು ಗಿಡಗಳನ್ನು ನೆಟ್ಟು ಪೋಷಿಸಬೇಕು. ಕಾರ್ಖಾನೆಗಳು, ವಾಹನಗಳು ಹಾಗೂ ಇನ್ನಿತರ ರಾಸಾಯನಿಕ ದಿಂದ ವಾತಾವರಣ ಕೆಟ್ಟುಹೋಗಿದೆ. ಪ್ತತಿಯೊಬ್ಬ ಮನುಷ್ಯನು ವರ್ಷಕ್ಕೊಮ್ಮೆ ಒಂದು ಗಿಡವನ್ನು ನೆಟ್ಟು ಪೋಷಿಸಿದರೆ ಮುಂದಿನ ಪೀಳಿಗೆಯ ಜನರಿಗೆ ನಾವು ಕೊಡುವ ಕೊಡುಗೆಯಾಗಿದೆ ಎಂದರು.


ಸಮಾಜ ಸೇವಕ ಎಲೆಕೇರಿ‌ ರವೀಶ್ ಮಾತನಾಡಿ ಈಗಾಗಲೇ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಹಣಕೊಟ್ಟು ಕೃತಕ ಆಮ್ಲಜನಕವನ್ನು ಪಡೆಯುವ ಸ್ಥಿತಿ ನಿರ್ಮಾಣವಾಗಿರುವುದು 

ನಮ್ಮ ದೇಶದ ಸಂಸ್ಕೃತಿಗೆ ವಿರುದ್ದವಾದದ್ದು. ಈಗಲಾದರೂ ಎಚ್ಚೆತ್ತುಗೊಳ್ಳದಿದ್ದರೆ ಜಗತ್ತು ಮುಂದಿನ ಶತಮಾನವನ್ನು ನೋಡುವುದು‌ ದುಸ್ತರವೆಂದೇ ಭಾವಿಸಬಹುದು. ನಮ್ಮ ಮಕ್ಕಳಿಗೆ ಪೋಷಕರು ಹಾಗೂ ಶಾಲೆಯಲ್ಲಿ ಸಹ ಪ್ರಕೃತಿಯ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಪರಿಸರ ಪ್ರೇಮವನ್ನು ಬಿತ್ತಬೇಕು ಎಂದರು.


ಡಾ ರಾಜಕುಮಾರ ಅಭಿಮಾನಿ ಬಳಗದ ತಾಲ್ಲೂಕು ಅಧ್ಯಕ್ಷ ಮಂಜುನಾಥ, ಶಿವಕುಮಾರ್, ಮಾತೃಭೂಮಿ ಸೇವಾ ಫೌಂಡೇಶನ್ ನ ಮಹೇಶ್ ಮತ್ತು ಸಂಗಡಿಗರು ಹಾಗೂ ಎಲೆಕೇರಿ ಗ್ರಾಮದ ಪರಿಸರ ಪ್ರೇಮಿಗಳು ಹಾಜರಿದ್ದು ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑