Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೬೯: ಭಾರತೀಯ ಸಂಪ್ರದಾಯದ ಪ್ರಕಾರ ಹೆಂಡತಿ ಎಂತಹವಳು ?

Posted date: 30 Jun, 2020

Powered by:     Yellow and Red

ತಾಳೆಯೋಲೆ ೨೬೯: ಭಾರತೀಯ ಸಂಪ್ರದಾಯದ ಪ್ರಕಾರ ಹೆಂಡತಿ ಎಂತಹವಳು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಭಾರತೀಯ ಸಂಪ್ರದಾಯದ ಪ್ರಕಾರ ಹೆಂಡತಿ ಎಂತಹವಳು ?


ಪರಮೇಶ್ವರನು ಅರ್ಧನಾರೀಶ್ವರನಾಗಿದ್ದು, ಹೆಂಡತಿಯ ಸ್ಥಾನವನ್ನು ತನ್ನ ಸಮವಾದ ಸ್ಥಾನವಾಗಿ ಪುರುಷನು ಗುರುತಿಸುವ ಹಾಗೆ ಇರುವನು. ಗೌರಿ ಶಂಕರ, ಉಮಾ ಮಹೇಶ್ವರ, ಲಕ್ಷ್ಮಿ ನಾರಾಯಣ ಇಂತಹ ಹೆಸರಗಳಲ್ಲಿಯೇ ದೇವರುಗಳು ಗುರುತಿಸಿಕೊಂಡಿರುವರು. ಇದರಿಂದ ಹೆಂಡತಿ ತನಗೆ ಸಮಾನದವಳಾಗಿರುವಳೆಂದು ಗುರುತಿಸುವುದು ಗಂಡನಿಗೆ ಅವಶ್ಯಕವೆಂದು ನಮ್ಮ ಸಂಪ್ರದಾಯ ತಿಳಿಸುತ್ತದೆ.


ಆದ್ದರಿಂದ ಒಬ್ಬ ವ್ಯಕ್ತಿ ತನ್ನ ಹೆಂಡತಿಯಾಗುವವಳನ್ನು ಆಚರಿಸಿಕೊಳ್ಳಬೇಕಾದರೆ ತಕ್ಕ ಎಚ್ವರಿಕೆಯನ್ನು ತೆಗೆದುಕೊಳ್ಳಬೇಕು. ತಾನು ವಿವಾಹವನ್ನು ಮಾಡಿಕೊಳ್ಳುವ ಸ್ತ್ರೀಯು‌ ತನ್ನ ಆರ್ಥಿಕ ಹಾಗೂ ಇತರೆ ಅಂಶಗಳ ಬಗ್ಗೆ ಪೂರ್ತಿಯಾಗಿ ಅಂಗೀಕೃತವಾಗಿರಬೇಕು. ತನ್ನ ಆರ್ಥಿಕ ಸ್ಥಿತಿ ಗತಿಗೆ ತಕ್ಕ ಹಾಗೆ ನಡೆದುಕೊಳ್ಳುವ ಸ್ತ್ರೀ ಯನ್ನು ಮಾತ್ರವೇ ಆಕೆಯ ಅಂಗೀಕಾರದೊಂದಿಗೆ ಮದುವೆಯಾಗಬೇಕು. ತಕ್ಕದಲ್ಲದ ಸ್ತ್ರೀ ಯನ್ನು ಮದುವೆ ಮಾಡಿಕೊಂಡರೆ ಪುರುಷನು ಜೀವನದಲ್ಲಿ ಅನೇಕ ಕಷ್ಟಗಳಿಗೆ ಗುರಿಯಾಗದೆ ತಪ್ಪದು.


ತನ್ನ ಹೆಂಡತಿ ತನ್ನ ಬಂಧು-ಮಿತ್ರರನ್ನು ಆದರಿಸುವವಳಾಗಿರಬೇಕು. ಇಲ್ಲದಿದ್ದರೆ ತನ್ನ ಬಾಂಧವ್ಯಗಳಿಗೆ ಹಾನಿ ಉಂಟು ಮಾಡುವಳು. ಮನೆಯಲ್ಲಿ ಕಿಚ್ಚನ್ನು (ಜಗಳ) ಇಡುವಳು. ಕುಟುಂಬದ ಗೌರವವನ್ನು ಕಾಪಾಡುವುದರಲ್ಲಿ ಹೆಂಡತಿಯ ಪಾತ್ರ ಮುಖ್ಯವಾದುದು. ಅಂತಹ ಸುಗುಣವತಿಯನ್ನೇ ವಿವಾಹ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮನೆಯ ಗೌರವವನ್ನು ಬೀದಿಗಳೆಯುವಳು. ಆದ್ದರಿಂದ ಆದರ್ಶ ಕುಟುಂಬಗಳಲ್ಲಿನ ಸ್ತ್ರೀಯನ್ನೇ ವಿವಾಹವಾಗುವುದು ಕ್ಷೇಮಕರ.


ಎಷ್ಟು ಧನವಿದ್ದರೂ, ಗುಣವಿಲ್ಲದ ಹೆಂಡತಿ ಹೊಂದಿದವನ ಜೀವನ ನರಕಪ್ರಾಯವಾಗುವುದು. ತಕ್ಕ ಹೆಂಡತಿ ಹೊಂದಿರುವವನ ಕುಟುಂಬವು ಚಿಂತೆಗಳಿಲ್ಲದ ಕುಟುಂಬವಾಗಿ ಸರ್ವವಿಧ ಕ್ಷೇಮಗಳು ಉಂಟಾಗುವವು.

ಹೆಂಡತಿಗೆ ಪತಿಯೇ ದೈವವು. ಹಾಗೂ ಸರ್ವಸ್ವವು. ಆತನ ಆಜ್ಞೆಯನ್ನು ಪಾಲಿಸುವುದಕ್ಕೆ ಆಕೆ ಆದಷ್ಟು ನಗು ಮುಖದಿಂದ ಕೂಡಿರಬೇಕು. ಪತಿಗಿಂತ ಪತಿಯ ಸಂಪತ್ತಿಗೆ ಬೆಲೆ ಕೊಡುವ ಹೆಂಡತಿ ಮನೆಗೆ ಕೆಟ್ಟದ್ದನ್ನು ಬಯಸುವಳು. ಅನುಕೂಲವತಿ ಅಲ್ಲದ ಹೆಂಡತಿಯನ್ನು ಹೊಂದಿರುವವನಿಗೆ ಭಕ್ತಿ ಹಾಗೂ ವೇದಾಂತ ಜ್ಞಾನ ಅತ್ಯವಶ್ಯಕ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑