Tel: 7676775624 | Mail: info@yellowandred.in

Language: EN KAN

    Follow us :


ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ

Posted date: 01 Jul, 2020

Powered by:     Yellow and Red

ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ:ಜು/೦೧/೨೦/ಬುಧವಾರ. ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹಾಗೂ ಪುರಾಣ ಪ್ರಸಿದ್ದ ದೇವರಹೊಸಹಳ್ಳಿ ಗ್ರಾಮದ ಶ್ರೀ ಸಂಜೀವರಾಯಸ್ವಾಮಿ ಜಾತ್ರೆಯನ್ನು ಕೊರೊನಾ ಕಾಟದಿಂದ ರದ್ದುಗೊಳಿಸಲಾಗಿದೆ ಎಂದು ತಾಲ್ಲೂಕು ಆಡಳಿತ ಹೇಳಿದೆ.


ಆಷಾಡ ಮಾಸದ ಉಪವಾಸದಿನದಂದು ಬರುವ ಈ ಹಬ್ಬವು ೩ ದಿನಗಳ ಕಾಲ ನಡೆಯುತ್ತದೆ. ಈ ಜಾತ್ರೆಗೆ ಹೊಸದಾಗಿ ಮದುವೆಯಾದ ನವದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಕೊರೊನಾ ಪೀಡಿತ ಪ್ರದೇಶದಲ್ಲಿ ಯಾವುದೇ ಜಾತ್ರೆ, ಉತ್ಸವ ನಡೆಸದಿರಲು ಸರ್ಕಾರ ಆದೇಶಿಸಿರುವುದರಿಂದ ಈ ಜಾತ್ರೆಯನ್ನೂ ಸಹ ತಾಲ್ಲೂಕು ಆಡಳಿತ ರದ್ದು ಗೊಳಿಸಿದೆ.


ಈ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನರು, ನವಜೋಡಿಗಳು ಬರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು.

ಇಲ್ಲಿನ ಅರ್ಚಕರು ಹಾಗೂ ಹಿರಿಯರ ಪ್ರಕಾರ, ಇತಿಹಾಸದಲ್ಲಿ ದೇವರಹೊಸಹಳ್ಳಿ ಸಂಜೀವರಾಯ ಸ್ವಾಮಿ ಜಾತ್ರೆ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ರದ್ದಾಗಿರುವುದು ಇದೇ ಮೊದಲನೆಯ ಬಾರಿಗೆ ಎನ್ನಲಾಗಿದೆ. ಇದೇ ರೀತಿಯಲ್ಲಿ ದೊಡ್ಡ ದೊಡ್ಡ ದೇವಸ್ಥಾನಗಳೂ ಸಹ ಮುಚ್ಚಿವೆ.


ಆದರೆ ಜಾತ್ರೆಯ ವಿಶೇಷ ವಾಗಿ, ಶಾಸ್ತ್ರೋಕ್ತವಾಗಿ ಏನೇನೂ ಪೂಜಾ ವಿಧಿವಿಧಾನಗಳು ನಡೆಯಬೇಕೋ, ಅವೆಲ್ಲವೂ ಸಾಂಗೋಪವಾಗಿ ನಡೆಯುತ್ತವೆ. ಈ ಎಲ್ಲಾ ಪೂಜೆಗಳಲ್ಲಿ, ಅರ್ಚಕರಾದ ಸುದರ್ಶನ್, ದಯಾನಿಧಿ, ಶರತ್ ಸೇರಿದಂತೆ ಇನ್ನಿತರ ಅರ್ಚಕರನ್ನು ಹೊರತುಪಡಿಸಿ ಭಕ್ತಾದಿಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑