Tel: 7676775624 | Mail: info@yellowandred.in

Language: EN KAN

    Follow us :


ಖ್ಯಾತ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ ಇನ್ನಿಲ್ಲ

Posted date: 02 Jul, 2020

Powered by:     Yellow and Red

ಖ್ಯಾತ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ ಇನ್ನಿಲ್ಲ

ಬೆಂಗಳೂರು:ಜು/೦೨/೨೦/ಗುರುವಾರ. ಸುಮಾರು ೬೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಟ ಮಿಮಿಕ್ರಿ ರಾಜ ಗೋಪಾಲ್ ಇಂದು ವಿಧಿವಶರಾದರು. ಅವರಿಗೆ ೬೯ ವಯಸ್ಸಾಗಿತ್ತು.

ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನ ಕೆಂಗೇರಿಯ ಅವರ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.


ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ಹಾಸ್ಯನಟ ನಾಗಿ, ಪೋಷಕ ನಟನಾಗಿ ಅಭಿನಯಿಸಿದ್ದರು. ರಾಜಗೋಪಾಲ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಇಂದು ಮಧ್ಯಾಹ್ನ ಅವರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.


ರಾಜ್ ಗೋಪಾಲ್‌ಗೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ. ಮಿಮಿಕ್ರಿ ರಾಜ ಗೋಪಾಲ್ ಮಿನುಗು ತಾರೆ ಕಲ್ಪನಾ ಅವರ ಧ್ವನಿಯನ್ನು ಯಥಾವತ್ತಾಗಿ ಮಿಮಿಕ್ರಿ ಮಾಡುವ ಮೂಲಕ ಗಮನ ಸೆಳೆದಿದ್ದರು.

ವರನಟ ಡಾ. ರಾಜ್ ಕುಮಾರ್ ಕೂಡ ರಾಜ ಗೋಪಾಲ್ ಮಿಮಿಕ್ರಿ ಯನ್ನ ಮೆಚ್ಚಿ ಹೊಗಳಿದ್ದರು. ಹಾಗೆಯೇ ಇವರು ಹಲವಾರು ರಸಮಂಜರಿ ಕಾರ್ಯಕ್ರಮ ಕೂಡ ನಡೆಸಿ ಗಮನ ಸೆಳೆದಿದ್ದರು.

ಅಕ್ರೇಸ್ಟ್ರಾಗಳಲ್ಲಿ ಮಿಮಿಕ್ರಿ ಮಾಡಿ ಹೆಸರು ಮಾಡಿದ್ದ ರಾಜ್ ಗೋಪಾಲ್ ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್ ಹೀಗೆ ಕನ್ನಡದ ದೊಡ್ಡ ನಟರ ಜೊತೆ ಅಭಿನಯಿಸಿದ್ದರು. ಪೋಷಕ ಕಲಾವಿದರಿಗೆ ಹೆಚ್ಚು ಅವಕಾಶವನ್ನು ನೀಡಬೇಕು ಎಂಬ ಕೂಗು ಹುಟ್ಟು ಹಾಕಿದವರಲ್ಲಿ ಪ್ರಮುಖರಾಗಿದ್ದರು.


ಬೆಳ್ಳಿ ಪರದೆ ಮೇಲೆ ನಗಿಸುವ ಅದೆಷ್ಟೋ ಕಲಾ ವಿದರ ನಿಜ ಬದುಕಿನ ಸ್ಥಿತಿ ಕಷ್ಟಕರ ವಾಗಿರುವುದಂತೂ ಸತ್ಯ. ಇನ್ನಾದರೂ ಹಿರಿಯ ಕಲಾವಿದರ ಬಗ್ಗೆ ಸರ್ಕಾರ ಗಮನ ಹರಿಸಲಿ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑