Tel: 7676775624 | Mail: info@yellowandred.in

Language: EN KAN

    Follow us :


ಖಾಸಗಿ ಶಾಲಾ ಶಿಕ್ಷಕರಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ‌ಕಡ್ಡಾಯಗೊಳಿಸದಿರಲು ಜಿಲ್ಲಾಧಿಕಾರಿ ಗೆ ಮನವಿ

Posted date: 08 Jul, 2020

Powered by:     Yellow and Red

ಖಾಸಗಿ ಶಾಲಾ ಶಿಕ್ಷಕರಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ‌ಕಡ್ಡಾಯಗೊಳಿಸದಿರಲು ಜಿಲ್ಲಾಧಿಕಾರಿ ಗೆ ಮನವಿ

ರಾಮನಗರ:ಜು/೦೮/೨೦/ಬುಧವಾರ. ಇಂದು ರಾಮನಗರ ಜಿಲ್ಲಾ ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯಮಾಪನವನ್ನು ಕಡ್ಡಾಯಗೊಳಿಸದಿರಲು ಹಾಗೂ ಒಂದು ವೇಳೆ ಕಡ್ಡಾಯಗೊಳಿಸಿದರೆ ಕೋವಿಡ್-೧೯ ಗೆ ಸಂಬಂಧಿಸಿದ ಸೌಲಭ್ಯಗಳನ್ನು ನಮಗೂ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಸಹಾಯಕರಾದ ವೆಂಕಟಾಚಲ ಪತಿ ರವರಿಗೆ ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರ್ ರವರಿಗೆ ಮನವಿ ಸಲ್ಲಿಸಿದರು.


ಎಸ್ ಎಸ್ ಎಲ್ ಸಿ ಪರೀಕ್ಷೆ ಮೌಲ್ಯಮಾಪನವನ್ನು  ಕಡ್ಡಾಯ ಗೊಳಿಸಬಾರದು, ಒಂದು ವೇಳೆ ಕಡ್ಡಾಯಗೊಳಿಸಿದರೆ ಶಿಕ್ಷಕರಿಗೆ ಆರೋಗ್ಯ ವಿಮೆ, ಸೇವಾ ಭದ್ರತೆ, ಸರ್ಕಾರದಿಂದ ಆರ್ಥಿಕ ಸಹಾಯ ಮತ್ತು ಕಳೆದ ನಾಲ್ಕು ತಿಂಗಳ ಸಂಬಳವನ್ನು ಸರ್ಕಾರದ ವತಿಯಿಂದ ಕೊಡಬೇಕು. ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡುವ ಸೌಲಭ್ಯಗಳನ್ನು ಕೋವಿಡ್ ಸಮಯದಲ್ಲಾದರೂ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.


ಕೋವಿಡ್ ಸಮಯದಲ್ಲಿ ನಾವು ಮೌಲ್ಯ ಮಾಪನ ಮಾಡಲು ಹೋದರೆ ನಮ್ಮ ಆರೋಗ್ಯದ ಗತಿ ಏನು ? ಆರೋಗ್ಯ ಹದಗೆಟ್ಟರೆ ನಮ್ಮನ್ನೇ ನಂಬಿರುವ ನಮ್ಮ ಕುಟುಂಬದವರ ಗತಿ ಏನು. ಇದಕ್ಕೆ ಯಾರನ್ನೂ ಹೊಣೆ ಮಾಡುವುದು. ನಮಗೆ ಎಲ್ಲಾ ರೀತಿಯ ಭದ್ರತೆ ಒದಗಿಸಿದರೆ ಮಾತ್ರ ನಾವು ಮೌಲ್ಯಮಾಪನ ಕ್ಕೆ ಹಾಜರಾಗುತ್ತೇವೆ. ಅದು‌ ನಮ್ಮ ಜವಾಬ್ದಾರಿಯೂ ಹೌದು ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.


ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿಯೂ ಖಾಸಗಿ ಶಾಲೆಗಳ ಶಿಕ್ಷಕರು ಆಯಾಯ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಸಹ ಮನವಿ ಸಲ್ಲಿಸಿ ಗಮನ ಸೆಳೆದಿದ್ದಾರೆ.


 ಮನವಿ ಸಲ್ಲಿಸುವ ಸಂದರ್ಭದಲ್ಲಿ ಶಿಕ್ಷಕರುಗಳಾದ ರಾಮಕೃಷ್ಣ, ಗುರುಪ್ರಸಾದ್, ಕಿರಣ್ ವಂದಾರಗುಪ್ಪೆ, ರಂಜನ್, ಶ್ರೀಧರ್, ನಾರಾಯಣ, ರವಿಗೌಡ, ನಾಗೇಶ್ ಹಾಗೂ ಅನೇಕ ಖಾಸಗಿ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑