Tel: 7676775624 | Mail: info@yellowandred.in

Language: EN KAN

    Follow us :


ಮನೆ ಮತ್ತು ದೇವಾಲಯಗಳಲ್ಲಿ ಸರಳಾಚರಣೆಗೊಂಡ ವರಮಹಾಲಕ್ಷ್ಮಿ ಹಬ್ಬ

Posted date: 31 Jul, 2020

Powered by:     Yellow and Red

ಮನೆ ಮತ್ತು ದೇವಾಲಯಗಳಲ್ಲಿ ಸರಳಾಚರಣೆಗೊಂಡ ವರಮಹಾಲಕ್ಷ್ಮಿ ಹಬ್ಬ

ಹೊಂಗನೂರು ಗ್ರಾಮದ ಶ್ರೀ ಲಕ್ಷ್ಮಿ ದೇವಿ

ಚನ್ನಪಟ್ಟಣ:ಜು:೩೧/೨೦/ಶುಕ್ರವಾರ. ಕಳೆದ ಒಂದೂವರೆ ದಶಕದಿಂದ ಅದ್ದೂರಿ ಪೂಜೆಗೆ ಅರ್ಹಳಾಗಿದ್ದ ವರಮಹಾಲಕ್ಷ್ಮಿ ದೇವಿ ಯು ಈ ವರ್ಷ ಕೊರೊನಾ ಭಯದಿಂದ ಸ್ವಲ್ಪ ಮಟ್ಟಿಗೆ ಅದ್ದೂರಿತನ ಕಳೆದುಕೊಂಡು ಸರಳಾ ಪೂಜೆಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ನಗರದ ಮನೆಯೊಂದರಲ್ಲಿ ಅಲಂಕೃತಗೊಂಡ ವರಮಹಾಲಕ್ಷ್ಮಿ ದೇವಿ


ಕೆಲ ಮನೆಗಳಲ್ಲಿ ಮಾತ್ರ ಅದ್ದೂರಿ ಪೂಜೆ ಹೊರತು ಪಡಿಸಿ ಹಲವಾರು ಮನೆಗಳಲ್ಲಿ ಸರಳವಾಗಿ ಅಲಂಕರಿಸಿ ಪೂಜೆ ಮಾಡುವ ಮೂಲಕ ತಮ್ಮ ಭಕ್ತಿ ಮೆರೆದು ಕೃತಾರ್ಥರಾದರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ವರಮಹಾಲಕ್ಷ್ಮಿ ದೇವಿ ಯ ಹಬ್ಬವೂ ವಿಶೇಷವಾಗಿರದೆ ಶೇಷವಾಗಿದ್ದು ಸಹ ಒಂದು ವಿಶೇಷ ಎನ್ನಲಡ್ಡಿಯಿಲ್ಲ.


ನಗರದ ಕೊಲ್ಲಾಪುರದಮ್ಮ (ಮಹಾಲಕ್ಷ್ಮಿ ) ದೇವಿ


ತಾಲ್ಲೂಕಿನ ಹೊಂಗನೂರು ಗ್ರಾಮದ ಶ್ರೀ ಲಕ್ಷ್ಮಿ ದೇವಿ ದೇವಾಲಯ ಮತ್ತು ನಗರದ ಹೃದಯ ಭಾಗದಲ್ಲಿರುವ ಕೊಲ್ಲಾಪುರದಮ್ಮ (ಮಹಾಲಕ್ಷ್ಮಿ) ದೇವಾಲಯ ಹಾಗೂ ಮಂಗಳವಾರಪೇಟೆ ಯ ಶ್ರೀ ಲಕ್ಷ್ಮಿ ದೇವಾಲಯದಲ್ಲಿ ಸಹ ಸರಳವಾಗಿ ದೇವಿಯ ವಿಗ್ರಹವನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಕೊರೊನಾ ಭಯದಿಂದ ಭಕ್ತರು ಸಹ ಬೆರಳೆಣಿಕೆಯಲ್ಲಿ ದರ್ಶನ ಪಡೆದು ಧನ್ಯರಾದರು.


ಮಂಗಳವಾರಪೇಟೆ ಯ ಶ್ರೀ ಲಕ್ಷ್ಮಿದೇವಿ


ಲಕ್ಷ್ಮಿ ದೇವಿ ಹಾಗೂ ಹೆಣ್ಣು ದೇವತೆಗಳ ದೇವಾಲಯಗಳಲ್ಲದೆ, ನಗರ ಹಾಗೂ ತಾಲ್ಲೂಕಿನಾದ್ಯಂತ ಇರುವ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ಸಹ ಸರಳವಾಗಿ ವಿಶೇಷ ಪೂಜೆಯನ್ನು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಏರ್ಪಾಡು ಮಾಡಿ ಪೂಜೆ ನೆರವೇರಿಸಲಾಯಿತು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑