Tel: 7676775624 | Mail: info@yellowandred.in

Language: EN KAN

    Follow us :


ಕನ್ನಡ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ರ ಧರ್ಮಪತ್ನಿ ನಿಧನ

Posted date: 04 Aug, 2020

Powered by:     Yellow and Red

ಕನ್ನಡ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ರ ಧರ್ಮಪತ್ನಿ ನಿಧನ

ಬೆಂಗಳೂರು:ಆ/04/20/ಮಂಗಳವಾರ. ಕನ್ನಡ ಚಳುವಳಿ ಪಕ್ಷದ  ವಾಟಾಳ್ ನಾಗರಾಜ್ ರವರ ಧರ್ಮಪತ್ನಿ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ ರವರು (60) ಕಿಡ್ನಿ ವೈಫಲ್ಯದಿಂದ    ಮಂಗಳವಾರ  ರಾತ್ರಿ ಶೇಷಾದ್ರಿ ಪುರಂ ನ ಮಲ್ಲಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 


ಮೃತರ ಪಾರ್ಥಿವ ಶರೀರವನ್ನ  ವಾಟಾಳ್ ನಾಗರಾಜ್ ರವರ ಸ್ವಗೃಹ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಕೊಂಡೊಯ್ಯಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಬುಧವಾರ ಬೆಳಗ್ಗೆ 9-00 ಘಂಟೆಗೆ ಬೆಂಗಳೂರಿನಿಂದ ಹೊರಟು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ವಾಟಾಳ್ ನಾಗರಾಜು ಅವರ ತೋಟದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದಾರೆ.


ಸಂತಾಪ: ವಾಟಾಳ್ ನಾಗರಾಜ್ ಅವರ ಪತ್ನಿ ಜ್ಞಾನಾಂಬಿಕಾ ನಾಗರಾಜ್ ಅವರ ನಿಧನಕ್ಕೆ, ಆಡಳಿತ ಪಕ್ಷದವರು, ವಿರೋಧ ಪಕ್ಷದವರು, ರಾಜಕಾರಣಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಮುಖಂಡರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑