Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದ 12 ಸೇರಿ ಜಿಲ್ಲೆಯಲ್ಲಿ ಇಂದು 64 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

Posted date: 05 Aug, 2020

Powered by:     Yellow and Red

ಚನ್ನಪಟ್ಟಣದ 12 ಸೇರಿ ಜಿಲ್ಲೆಯಲ್ಲಿ  ಇಂದು 64 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

ರಾಮನಗರ:ಆ/05/20/ಬುಧವಾರ. ಚನ್ನಪಟ್ಟಣ ತಾಲ್ಲೂಕಿನ 12 ಮಂದಿ ಸೇರಿ ಜಿಲ್ಲೆಯಲ್ಲಿ ಇಂದು 64 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ಒಟ್ಟು  ಸೋಂಕಿತರ ಸಂಖ್ಯೆ 1,419 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.


ಚನ್ನಪಟ್ಟಣ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ 4 ಮತ್ತು ನಗರದಲ್ಲಿ 8 ಮಂದಿಗೆ ಸೋಂಕು ಕಂಡುಬಂದಿರುತ್ತದೆ.


ಮಾಗಡಿ ತಾಲ್ಲೂಕಿನಲ್ಲಿ 2  ಪ್ರಕರಣ ಕಂಡುಬಂದಿರುತ್ತದೆ. 


ಕನಕಪುರ ತಾಲ್ಲೂಕಿನಲ್ಲಿ 14  ಪ್ರಕರಣ ಕಂಡುಬಂದಿರುತ್ತದೆ. 


ರಾಮನಗರ ತಾಲ್ಲೂಕಿನಲ್ಲಿ 36 ಪ್ರಕರಣ ಕಂಡುಬಂದಿರುತ್ತದೆ. 


ಇವರನ್ನು ಚಿಕಿತ್ಸೆಗಾಗಿ ರಾಮನಗರದ ಕೋವಿಡ್  ಆಸ್ಪತ್ರೆಗೆ  ದಾಖಲಿಸಿದೆ.


ಇಂದು 29 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 601 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ. 801 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑