Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಲ್ಲಿ ಸರಳ ಸ್ವಾತಂತ್ರ್ಯೋತ್ಸವ ಆಚರಣೆ ತಹಶಿಲ್ದಾರ್ ನಾಗೇಶ್

Posted date: 07 Aug, 2020

Powered by:     Yellow and Red

ತಾಲ್ಲೂಕಿನಲ್ಲಿ ಸರಳ ಸ್ವಾತಂತ್ರ್ಯೋತ್ಸವ ಆಚರಣೆ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಆ/07/20/ಶುಕ್ರವಾರ. ಕೊರೊನಾ (ಕೋವಿಡ್-19) ಹಿನ್ನೆಲೆಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ ವನ್ನು ಸರಳವಾಗಿ ಆಚರಿಸಲಾಗುವುದು ಎಂದು ತಹಶಿಲ್ದಾರ್ ನಾಗೇಶ್ ರವರು ತಿಳಿಸಿದರು.

ಅವರು ಇಂದು ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ನಾಡಹಬ್ಬ ಆಚರಣಾ ಸಮಿತಿಯ ಸದಸ್ಯರ ಜೊತೆ ಚರ್ಚಿಸಿ ಈ ವಿಷಯ ತಿಳಿಸಿದರು.


ಯಾವುದೇ ಶಾಲೆಯ ಮಕ್ಕಳನ್ನು ಕರೆತರಬಾರದು, ಮೆರವಣಿಗೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು. ಸಾಧ್ಯವಾದರೆ ಪೋಲೀಸ್ ಕವಾಯತು ನಡೆಸುವಂತೆ ಸಲಹೆ ನೀಡಲಾಯಿತು. ದಿನಾಚರಣೆಯಲ್ಲಿ ಕೇವಲ ಐವತ್ತು ಮಂದಿಯಷ್ಟೇ ಭಾಗವಹಿಸಿ ಕಾರ್ಯಕ್ರಮ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.


ಕೊರೊನಾ ವಾರಿಯರ್ಸ್, ಸೋಂಕಿನಿಂದ ಗುಣಮುಖರಾದವರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಕಂದಾಯ, ಪೋಲಿಸ್, ರೈತ, ಮಾಧ್ಯಮ, ಶಿಕ್ಷಣ, ಸಮಾಜ ಸೇವೆಯ ತಲಾ ಒಬ್ಬರಿಗೆ ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಪೌರಾಯುಕ್ತ ಶಿವನಂಕಾರಿಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು, ಅರಣ್ಯ, ತೋಟಗಾರಿಕೆ, ಕೃಷಿ, ಅಬಕಾರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ದಲಿತ ಮುಖಂಡರು, ಶಿಕ್ಷಕರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑