Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ; ಚನ್ನಪಟ್ಟಣದ 17 ಮಂದಿ ಸೇರಿ ಜಿಲ್ಲೆಯಲ್ಲಿ 63 ಪ್ರಕರಣ ದೃಢ: 3 ಸಾವು

Posted date: 07 Aug, 2020

Powered by:     Yellow and Red

ಕೊರೊನಾ; ಚನ್ನಪಟ್ಟಣದ 17 ಮಂದಿ ಸೇರಿ ಜಿಲ್ಲೆಯಲ್ಲಿ 63 ಪ್ರಕರಣ ದೃಢ: 3 ಸಾವು

ರಾಮನಗರ:ಆ/07/20/ಶುಕ್ರವಾರ. ಜಿಲ್ಲೆಯಲ್ಲಿ ಚನ್ನಪಟ್ಟಣ 17, ಕನಕಪುರ 12, ಮಾಗಡಿ 9 ಮತ್ತು ರಾಮನಗರ 25 ಪ್ರಕರಣಗಳು ಸೇರಿ ಇಂದು ಒಟ್ಟು 63 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.


 *ಒಟ್ಟು ಪ್ರಕರಣ:* ಇದುವರೆಗೆ ಜಿಲ್ಲೆಯಲ್ಲಿ 1,532 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 346,  ಕನಕಪುರ 311, ಮಾಗಡಿ 279 ಮತ್ತು ರಾಮನಗರ 596 ಪ್ರಕರಣಗಳು ಸೇರಿವೆ.


 *ಸಾವು* : ಜಿಲ್ಲೆಯಲ್ಲಿ ಇಂದು 3 ಸಾವು ಸಂಭವಿಸಿದ್ದು, ಚನ್ನಪಟ್ಟಣ, ಕನಕಪುರ ಮತ್ತು ರಾಮನಗರದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದಂತೆ ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 2, ಕನಕಪುರ ತಾಲ್ಲೂಕಿನಲ್ಲಿ 4, ಮಾಗಡಿ ತಾಲ್ಲೂಕಿನಲ್ಲಿ 9 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 5 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 20 ಮಂದಿ ನಿಧನರಾಗಿದ್ದಾರೆ.


 *ಗುಣಮುಖ* : ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ 8, ಕನಕಪುರ ತಾಲ್ಲೂಕಿನಲ್ಲಿ 7, ಮಾಗಡಿ ತಾಲ್ಲೂಕಿನಲ್ಲಿ 5 ಹಾಗೂ ರಾಮನಗರ ತಾಲ್ಲೂಕಿನಲ್ಲಿ 15 ಜನ ಸೇರಿ ಒಟ್ಟಾರೆ 35 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 675 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 124, ಕನಕಪುರ 157, ಮಾಗಡಿ 178 ಮತ್ತು ರಾಮನಗರ 216 ಜನರು ಸೇರಿದ್ದಾರೆ.


 *ಸಕ್ರಿಯ ಪ್ರಕರಣ:* ಜಿಲ್ಲೆಯಲ್ಲಿ ದಾಖಲಾಗಿರುವ 1,532 ಪ್ರಕರಣಗಳ ಪೈಕಿ 675 ಜನರು ಗುಣಮುಖರಾಗಿದ್ದಾರೆ, ಇನ್ನೂ 837 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 675 ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 220, ಕನಕಪುರ 150, ಮಾಗಡಿ 92 ಮತ್ತು ರಾಮನಗರ 375 ಪ್ರಕರಣಗಳು ಸೇರಿವೆ.


 *ಜಿಲ್ಲಾ ಆರೋಗ್ಯ ಇಲಾಖೆ ವರದಿ:* ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಶುಕ್ರವಾರ (ಆ. 7) ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 18,597 (ಹೊಸದಾಗಿ ಇಂದಿನ 450 ಸೇರಿ). ಒಟ್ಟು 9,575 ಜನ 14 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 450 ಜನರು ಇಂದು ಹೋಂ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು, ಇವರ ಒಟ್ಟಾರೆ ಸಂಖ್ಯೆ 4,352ಗೆ ಏರಿಕೆಯಾಗಿದೆ.


 *ಜ್ವರ ತಪಾಸಣೆ:* ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು 35 ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ 4,281 ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ.


 *ಕ್ವಾರಂಟೈನ್* : ಒಟ್ಟು 11 ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಒಟ್ಟಾರೆ ಇನ್ಸ್ಟ್ಯೂಷನಲ್ ಕ್ವಾರೆಂಟೈನ್ ಸಂಖ್ಯೆ 20 ಕ್ಕೆ ಇಳಿಕೆಯಾಗಿದೆ.


 *ಮಾದರಿ ಸಂಗ್ರಹ:* ಇಂದು ಹೊಸದಾಗಿ 450 ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 19,151 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 16,779 ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. ಇಂದಿನ 274 ಬಾಕಿ ವರದಿ ಸೇರಿ ಒಟ್ಟು 579 ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑