Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೨೧:ತನ್ನಷ್ಟಕ್ಕೆ ತಾನೇ ಏಕೆ ಜಂಭ ಕೊಚ್ಚಿಕೊಳ್ಳಬಾರದು ?

Posted date: 31 Aug, 2020

Powered by:     Yellow and Red

ತಾಳೆಯೋಲೆ ೩೨೧:ತನ್ನಷ್ಟಕ್ಕೆ ತಾನೇ ಏಕೆ ಜಂಭ ಕೊಚ್ಚಿಕೊಳ್ಳಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ತನ್ನಷ್ಟಕ್ಕೆ ತಾನೇ ಏಕೆ ಜಂಭ ಕೊಚ್ಚಿಕೊಳ್ಳಬಾರದು ?


ತಮ್ಮಷ್ಟಕ್ಕೆ ತಾವೇ ಜಂಭ ಕೊಚ್ಚಕೊಳ್ಳಬಾರದೆಂದು ಬುದ್ದಿವಂತರು ನಮಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಜಂಭ ಕೊಚ್ಚಿಕೊಳ್ಳುವುದರಿಂದ ಅನೇಕ ರೀತಿಯ ಹಾನಿಗಳಿರವವು. ವಾಸ್ತವವಾಗಿ ಸಾಮಾನ್ಯವಾಗಿ ಎಲ್ಲರ ತಮ್ಮ ಬಗ್ಗೆ ಹೇಳಿಕೊಳ್ಳುವರು. ಯಾವುದೇ ಆಗಲಿ ತುಂಬ ಅತಿ ಹಾನಿಗೆ ದಾರಿ. ಅದೇ ರೀತಿಯಾಗಿ ಅತಿ ಜಂಭವು ಹಾನಿಗೆ ಎಡೆ ಮಾಡಿಕೊಡುವುದು.


ಜಂಭ ಕೊಚ್ಚಿಕೊಳ್ಳುವುದು ಸ್ವಪ್ರತಿಷ್ಠೆಯು ಇಲ್ಲದ ಸಂಕೇತ. ಸದಾ ನಿನ್ನ ಬಗೆಯೇ ನೀನು ಮಾಡಿದ ಕೆಲಸಗಳ ಬಗ್ಗೆ ನಿನ್ನ ಸ್ನೇಹಿತರೊಂದಿಗೆ ಬಿಡುವಿಲ್ಲದೆ ಹೇಳುತ್ತಿದ್ದರೆ, ಕೇಳುಗರು ನಿನ್ನ ಮೇಲಿರುವ ಗೌರವ ಮತ್ತು ಅಭಿಪ್ರಾಯವನ್ನು ಕಳೆದುಕೊಳ್ಳುತ್ತಾರೆ. ನಿನ್ನನ್ನು ಕೇಳುಗರು ಸದಾ ದ್ವೇಷಿಸುವುದಕ್ಕೆ ಪ್ರಾರಂಭಿಸುವರು. ನಿನ್ನನ್ನು ಕಂಡ ಕೂಡಲೇ ತಲೆ ಮರೆಸಿಕೊಳ್ಳುವರು.


ಜಂಭವು ಸ್ವಾಭಿಮಾನವನ್ನು ಹಾನಿಗಿಳಿಸುವುದು. ನಿನ್ನ ಮರ್ಯಾದೆಯನ್ನು ನೀನೇ ಕಳೆದುಕೊಳ್ಳುವೆ. ನಿನ್ನ ಬಗ್ಗೆಯೇ ನೀನು ಸದಾ ಯೋಚನೆ ಮಾಡುತ್ತಾ, ಬೇರೆಯವರ ಜೀವನವನ್ನು ಗಮನಿಸಿ, ಅವರಿಂದೇನಾದರೂ ಕಲಿಯಬೇಕಾದುದೇನಾದರೂ ಇದ್ದರೆ ಅದನ್ನು ಗಮನಿಸದೆ, ನಿನ್ನ ಜಂಭವು ನಿನ್ನ ಜೀವನವನ್ನು ಹಾಳು ಮಾಡುತ್ತದೆ. ಜಂಭವು ಸ್ನೇಹಿತರನ್ನೂ ಸಹ ದೂರ ಮಾಡುತ್ತದೆ.


ಭಾರತೀಯರು ಸಂಪ್ರದಾಯದ ಪ್ರಕಾರವಾಗಿ ಜಂಭ ಕೊಚ್ಚುಕೊಳ್ಳುವಿಕೆ ಮತ್ತು ಆತ್ಮಹತ್ಯೆ ಎರಡೂ ಒಂದೇ ಎಂದು ತೀರ್ಮಾನಿಸಿದೆ. ಆದ್ದರಿಂದ ನಿಮ್ಮಲ್ಲೇನಾದರೂ ಈ ರೀತಿಯ ಅಭ್ಯಾಸವಿದ್ದರೆ, ಅದನ್ನು ಆದಷ್ಟೂ ಬೇಗ ಹೋಗಲಾಡಿಸಿ ಎಲ್ಲರೊಂದಿಗೆ ಬೆರೆತು ಇತರರ ಕಷ್ಟ ಸುಖಗಳನ್ನು ಕೇಳಿ ಸುಖವಾಗಿರಿ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑