Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೨೪: ಗರ್ಭಿಣಿಯರಿಗೆ ನೀತಿ ಕಥೆಗಳನ್ನು ಏಕೆ ಕೇಳಿಸಬೇಕು ?

Posted date: 03 Sep, 2020

Powered by:     Yellow and Red

ತಾಳೆಯೋಲೆ ೩೨೪: ಗರ್ಭಿಣಿಯರಿಗೆ ನೀತಿ ಕಥೆಗಳನ್ನು ಏಕೆ ಕೇಳಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಗರ್ಭಿಣಿಯರಿಗೆ ನೀತಿ ಕಥೆಗಳನ್ನು ಏಕೆ ಕೇಳಿಸಬೇಕು ?


ಗರ್ಭಿಣಿಯರಿಗೆ ಸದ್ಗುಣಗಳನ್ನು ಹೆಚ್ಚಿಸುವ ಕತೆಗಳನ್ನು ಹೇಳಬೇಕೆಂದು ನಮ್ಮ ಸಂಸ್ಕೃತಿ ಸೂಚಿಸುತ್ತದೆ. ಆಧುನಿಕ ವಿಜ್ಞಾನವೂ ಸಹ ಇದನ್ನು ಒಪ್ಪಿಕೊಂಡಿದೆ. ಇಂತಹ ಕತೆಗಳನ್ನು ಕೇಳುವುದರಿಂದ ಗರ್ಭಿಣಿಯರಲ್ಲಿ ಒಳ್ಳೆಯ ಪರಿಣಾಮ ಏರ್ಪಡುತ್ತದೆ.


ಹಿಂದಿನ ದಿನಗಳಲ್ಲಿ ಹಲವು ನಿರ್ದಿಷ್ಟ ಚಟುವಟಿಕೆಗಳನ್ನು ಗರ್ಭಿಣಿಯರಲ್ಲಿ ಗಮನಿಸಲಾಗಿದೆ. ನೀತಿ ಕತೆಗಳನ್ನು ಓದುವುದು ಮತ್ತು ಕೇಳುವುದು ಅವುಗಳಲ್ಲಿ ಒಂದಾಗಿತ್ತು. ಮನೆಯಲ್ಲಿನ ಅಜ್ಜಿಯರು ಕತೆಗಳನ್ನು ಗರ್ಭಿಣಿಯರಿಗೆ ಕೇಳಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದರು.


ಗರ್ಭಿಣಿಯರು ಇಂತಹ ನೀತಿಕತೆಗಳನ್ನು ಕೇಳಿ ತೀಕ್ಷ್ಣ ಬುದ್ದಿಯ‌ ಮಕ್ಕಳಿಗೆ ಜನ್ಮ ನೀಡಿದ್ದರೆಂದು ನಮಗೆ ಪುರಾಣಗಳಿಂದ ತಿಳಿದು ಬರುತ್ತದೆ.


ಇಂತಹ ನೀತಿಕತಗಳನ್ನು ಕೇಳಿ ಗರ್ಭಿಣಿಯರು ಪ್ರೇರಣೆಯನ್ನು ಹೊಂದಿ ಸಂತುಷ್ಟರಾಗುತ್ತಿದ್ದರು. ಇಂತಹ ಕತೆಗಳು ಗರ್ಭಿಣಿಯರು ಆರಾಮದಾಯಕವಾಗಿರಲು ಸಹಾಯಕವಾಗುತ್ತದೆಂದು ಆಧುನಿಕ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿರುವರು. ಅಷ್ಟೇ ಅಲ್ಲದೆ ಗರ್ಭಿಣಿಯರು ಉದ್ವೇಗದ ಕತೆಗಳು ಹಾಗೂ ಮಾತುಗಳಿಂದ ದೂರವಿರಬೇಕು. ಅವರಿಗೆ ಕೋಪ ಮತ್ತು ಆತಂಕಗಳ ಸನ್ನಿವೇಶ ಉಂಟಾಗದಂತೆ ನೋಡಿಕೊಳ್ಳಬೇಕು.


ಇಂತಹ ನೀತಿಕತೆಗಳು ಮತ್ತು ಧಾರ್ಮಿಕ ಕತೆಗಳು ಗರ್ಭಿಣಿಯರ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಆರೋಗ್ಯವಂತ ಮತ್ತು ಒಳ್ಳೆಯ ಮಗುವಿಗೆ ಜನ್ಮ ನೀಡಲು ಸಹಾಯಕವಾಗುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑