Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೨೬: ಹಬ್ಬಗಳೆಂದರೇನು ? ಏತಕ್ಕಾಗಿ ನಾವು ಅವುಗಳನ್ನು ಆಚರಿಸಬೇಕು ?

Posted date: 05 Sep, 2020

Powered by:     Yellow and Red

ತಾಳೆಯೋಲೆ ೩೨೬: ಹಬ್ಬಗಳೆಂದರೇನು ? ಏತಕ್ಕಾಗಿ ನಾವು ಅವುಗಳನ್ನು ಆಚರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಹಬ್ಬಗಳೆಂದರೇನು ? ಏತಕ್ಕಾಗಿ ನಾವು ಅವುಗಳನ್ನು ಆಚರಿಸಬೇಕು ?


ಹಿಂದಿನ ಕಾಲದಿಂದಲೂ ಹಿಂದೂ ಧಾರ್ಮಿಕ ಕ್ರಿಯೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿರುವರು.

ನಮ್ಮ ಸಮಾಜದಲ್ಲಿ ಈಗೀಗ ಧಾರ್ಮಿಕತೆಯ ಸ್ನೇಹಭಾವ ಕಡಿಮೆಯಾಗುತ್ತಿದೆ. ನೆರೆಹೊರೆಯವರ ಹೆಸರುಗಳೂ ಸಹ ತಿಳಿಯುತ್ತಿಲ್ಲ. ಆದ್ದರಿಂದ ಬರಬರುತ್ತಾ ಮಾನವ ಯಂತ್ರ ಮಾನವನಾಗುತ್ತಿದ್ದಾನೆ. ತಾನಾಯಿತು ತನ್ನ ಕೆಲಸವಾಯಿತು. ಇದೇ ಪ್ರಪಂಚ ಎಂಬಂತಿದ್ದಾರೆ.


ನಮ್ಮ ಪ್ರಾಚೀನ ಋಷಿಗಳಿಗೆ ಈ ರೀತಿಯ ಸಮಾಜವು ಉಂಟಾಗಬಹುದೆಂದು ಊಹೆಯಿಂದಲೇ ಅನೇಕ ಧಾರ್ಮಿಕ ಕ್ರಿಯೆಗಳನ್ನು ಆಯಾ ವರ್ಗಕ್ಕೆ ತಕ್ಕಂತೆ ಹಬ್ಬ ಹರಿದಿನಗಳ ಆಚರಣೆಯನ್ನು ಜಾರಿಗೆ ತಂದರು. ಈ ಹಬ್ಬಗಳನ್ನು ದೈನಂದಿನ ಬದುಕಿನಿಂದ ಪೂರ್ತಿಯಾಗಿ ಬೇರೆಯಾಗಿ, ನೂತನ ಉಲ್ಲಾಸವನ್ನು ಅನುಭವಿಸಿ ತನ್ನ ಆಪ್ತರೊಡನೆ ವಿಚಾರ ವಿನಿಮಯಗಳನ್ನು ಮಾಡಿಕೊಳ್ಳುವನು. ಅದೇ ರೀತಿ ಮಹಿಳೆಯರೂ ಸಹ ನೆರೆ ಹೊರೆಯವರೊಂದಿಗೆ ಊಟ, ಹೋಮ, ಪೂಜೆ ಮುಂತಾದವುಗಳಲ್ಲಿ ಭಾಗವಹಿಸುವಂತೆ ಮಾಡುತ್ತದೆ.


ಒಂದೊಂದು ಹಬ್ಬವೂ ತನ್ನದೇ ಆದ ಮಹತ್ವವನ್ನು ಮತ್ತು ಪುರಾಣವನ್ನು ಹೊಂದಿದೆ. ಈ ಹಬ್ಬಗಳಲ್ಲಿ ಕೆಲವನ್ನು ವ್ರತಗಳು ಎಂದು ಕರೆಯುವರು. ಈ ಹಬ್ನಗಳ ಆಚರಣೆ ಆಯಾ ದೇಶದ/ಸ್ಥಳದ ಧರ್ಮಕ್ಕನುಸಾರವಾಗಿ ನಡೆಸುತ್ತಾರೆ. ನಿಷ್ಕಾಮ ಭಾವನೆಯಿಂದ ಧರ್ಮಾಚರಣೆಯನ್ನು ಮಾಡುವುದನ್ನೇ ಕರ್ಮಯೋಗ ಎನ್ನುತ್ತಾರೆ. ಸಕಾಮ ಭಕ್ತಿಯನ್ನು ಧರ್ಮವು ಆಕ್ಷೇಪಿಸುವುದಿಲ್ಲ.


ಕಾಲ ಪ್ರವಾಹದಲ್ಲಿ ಧರ್ಮದ ಬಗ್ಗೆ ಮಾನವನ ಮೂಲ ಧೋರಣೆಯೇ ನಾಶವಾಗುತ್ತಾ ಹೋದಂತೆ, ಅವನ ಧರ್ಮಾಚರಣೆಯಲ್ಲಿ ಬದಲಾವಣೆ ಉಂಟಾಗಿ, ಹಬ್ಬಗಳು ನಿರ್ಮಾಣಗೊಂಡು ಜನರಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಯ ತೊಡಗಿತು. ಇವೆಲ್ಲದರ ಪರಿಣಾಮವಾಗಿ ನಮ್ಮ ಧರ್ಮವನ್ನು ಉಳಿಸುತ್ತಾ, ಬೆಳೆಸುತ್ತಾ ಮಾನವರು ತಮ್ಮ ಪಾಪ ಕರ್ಮಗಳಿಂದ ಮುಕ್ತರಾಗಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑