Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೨೭* (ಇಂದಿಗೆ ಮುಗಿಯಿತು)

Posted date: 07 Sep, 2020

Powered by:     Yellow and Red

ತಾಳೆಯೋಲೆ ೩೨೭* (ಇಂದಿಗೆ ಮುಗಿಯಿತು)

*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಬಿಲ್ವಪತ್ರೆ ಕಾಯಿಯ ಮಹತ್ವವೇನು ?*


ಬಿಲ್ವ ಮರವು ಲಕ್ಷ್ಮಿಯ ಬಲದ ಕೈ ಕಮಲದಿಂದ ಹುಟ್ಟಿರುವುದೆಂದು ನಮ್ಮ ಪುರಾಣಗಳ ಮತ್ತು ಋಷಿ ಶ್ರೇಷ್ಠರ ಅಭಿಪ್ರಾಯ. ಈ ವೃಕ್ಷವು ಹೂಗಳನ್ನು ಬಿಡದೇ ಕಾಯಿಗಳನ್ನು ನೀಡುವ ಮನಸ್ಪತಿಯಾಗಿದೆ. ಬಿಲ್ವ ವೃಕ್ಷವನ್ನು ಶ್ರೀ ವೃಕ್ಷವೆಂದು ಕರೆಯುತ್ತಾರೆ. ಈ ವೃಕ್ಷದ 10 ಕಡ್ಡಿಗಳನ್ನು ಪಾಯಸದಲ್ಲಿ ಅದ್ದಿ ಪ್ರತಿ ಶ್ರೀ ಸೂಕ್ತದ ಋಕ್ಕನ್ನು ಹೇಳಿ ಹೋಮ ಮಾಡಬೇಕೆಂದು ಹೇಳಲಾಗಿದೆ.


ಇಂತಹ ಪವಿತ್ರವಾದ ಬಿಲ್ವ ಫಲವು ಒಳಗಿನ ಇಂದ್ರಿಯಗಳಿಗೆ ಸಂಬಂಧಪಟ್ಟ ಮೌಡ್ತ, ಆಲಸ್ಯ, ಅವಿದ್ಯೆ ಇತ್ಯಾದಿಗಳನ್ನು ಹೊರಗಿನ ಇಂದ್ರಿಯಗಳಿಗೆ ಸಂಬಂಧಪಟ್ಟಂತೆ ಸುಮ್ಮನೆ ನಗುವುದು, ಹಲ್ಲು ಕಿಸಿಯುವುದು ಮುಂತಾದ ಅಂಗ ಚೇಷ್ಟೆಗಳನ್ನು ನಾಶಪಡಿಸುತ್ತದೆ. ಈ ವೃಕ್ಷದ ಕೆಳಗೆ ಕುಳಿತು ಲಕ್ಷ್ಮಿ ಮಂತ್ರವನ್ನು ಹೇಳಿದರೆ ಅದು ಸಿದ್ದಿಯಾಗುವುದೆಂದು ನಂಬಿಕೆ. ತುಳಸಿ, ನೆಲ್ಲಿ, ಬಿಲ್ವ ಈ ಮೂರು ಪಾರ್ವತಿ, ಸರಸ್ವತಿ ಮತ್ತು ಲಕ್ಷ್ಮಿಯ ಸ್ವರೂಪಗಳೆಂದು ಪುರಾಣಗಳು ತಿಳಿಸುತ್ತವೆ.


ಬಿಲ್ವ ಫಲವನ್ನು ವಾಸ್ತು ಹೋಮಗಳಲ್ಲಿ ಪೂರ್ಣ ಫಲವಾಗಿ ಉಪಯೋಗಿಸುವರು. ಈ ಫಲಕ್ಕೆ ಯಾವುದೇ ರೀತಿಯ ಹುಳುವಾಗಲಿ, ಕೆಡುವ ಹಾಗೂ ಕೊಳೆಯುವ ಗುಣಗಳಿಲ್ಲ. ಈ ಫಲವನ್ನು ವ್ಯಾಪಾರಿಗಳು ಶುಕ್ರವಾರ ಪೂಜಿಸಿದ್ದೇ ಆದರೆ ಅವರ ವ್ಯಾಪಾರ ವ್ಯವಹಾರಗಳು ಅಭಿವೃದ್ಧಗೊಳ್ಳುತ್ತದೆ. ಮನೆಯಲ್ಲಿಟ್ಟು ಪೂಜಿಸಿದರೆ ಆರ್ಥಿಕ ಮುಗ್ಗಟ್ಟು ಇರುವುದಿಲ್ಲ. ಬಿಲ್ವ ಫಲವು ಲಕ್ಷ್ಮಿಯ ಸ್ವರೂಪವೆಂದು, ಇದನ್ನು ಈಶ್ವರನು ಬಳುವಳಿಯಾಗಿ ಲಕ್ಷ್ಮಿಗೆ ನೀಡಿದನೆಂದು ಪುರಾಣಗಳು ಹೇಳುತ್ತಿವೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*



*ತಾಳೆಯೋಲೆ ಇಂದಿಗೆ ಮುಕ್ತಾಯ. ಓದಿ ಅರ್ಥೈಸಿಕೊಂಡು ಪ್ರೋತ್ಸಾಹಿಸಿದ ಓದುಗ ಮಹಾಶಯರಿಗೆ ಪತ್ರಿಕಾ ಬಳಗದಿಂದ ಅಭಿನಂದನೆಗಳು*


ಆತ್ಮೀಯ ತಾಳೆಯೋಲೆ ಓದುಗ ಮಿತ್ರರಿಗೆ ಮೊದಲನೆಯದಾಗಿ ನಮಸ್ಕಾರಗಳು;


ಕಳೆದ ವರ್ಷ ಅಂದರೆ ಆಗಸ್ಟ್ ೦೧/೨೦೧೯ ರಲ್ಲಿ ತಾಳೆಯೋಲೆ ಎಂಬ ಗ್ರಂಥದಲ್ಲಿನ ಲೇಖನವನ್ನು ಪ್ರಾರಂಭಿಸಿದೆವು. ಇದು ಡಾ ವೆಂಗನೂರು ಬಾಲಕೃಷ್ಣನ್ ರವರ ಮೂಲ ಕೃತಿಯಾಗಿದ್ದು, ಊರುಕುಂಟೆ ನರಸಿಂಹಮೂರ್ತಿ ಯವರು ಈ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಈ ಗ್ರಂಥದಲ್ಲಿ ಭಾರತೀಯ ಆಚಾರ ವಿಚಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ. ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿರುವ ಗ್ರಂಥ ವಾಗಿದ್ದು, ಅನೇಕ ಆಚಾರಗಳಲ್ಲಿ ಅಡಗಿರುವ ವೈಜ್ಞಾನಿಕ ವಿಚಾರವನ್ನು ತಿಳಿಸಲಾಗಿತ್ತು. ಈ ಲೇಖನಗಳು ಕಳೆದ ಒಂದು ವರ್ಷದಲ್ಲಿ ಸಹಸ್ರಾರು ಓದುಗರು ಸಂಪಾದಿಸಿಕೊಂಡಿದ್ದು ಜನಮನ್ನಣೆ ಗಳಿಸಿತ್ತು.


ಸತತ ಒಂದು ವರ್ಷಗಳ ಕಾಲ ೩೨೭ ಲೇಖನಗಳನ್ನು ಓದಿ, ಅರ್ಥೈಸಿಕೊಂಡು ಪ್ರೋತ್ಸಾಹಿಸಿದ ನನ್ನೆಲ್ಲಾ ಓದುಗ ಮಿತ್ರರಿಗೆ ಮತ್ತೊಮ್ಮೆ ಧನ್ಯವಾದಗಳು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑