Tel: 7676775624 | Mail: info@yellowandred.in

Language: EN KAN

    Follow us :


ರಸಗೊಬ್ಬರಕ್ಕೆ ಹಾತೊರೆಯುತ್ತಿರುವ ರೈತರು. ಸಕಾಲದಲ್ಲಿ ಸ್ಪಂದಿಸದ‌ ಇಲಾಖೆ

Posted date: 14 Sep, 2020

Powered by:     Yellow and Red

ರಸಗೊಬ್ಬರಕ್ಕೆ ಹಾತೊರೆಯುತ್ತಿರುವ ರೈತರು. ಸಕಾಲದಲ್ಲಿ ಸ್ಪಂದಿಸದ‌ ಇಲಾಖೆ

ಚನ್ನಪಟ್ಟಣ:ಸೆ/14/20/ಸೋಮವಾರ. ಇತ್ತೀಚೆಗೆ ಒಳ್ಳೆಯ ಮಳೆಯಾಗುತ್ತಿದ್ದು, ತಾಲೂಕಿನಾದ್ಯಂತ ರಾಗಿ ಸೇರಿದಂತೆ ಇನ್ನಿತರ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ರೈತರಿಗೆ ಸಕಾಲದಲ್ಲಿ ಬೇಕಾದ ರಸಗೊಬ್ಬರವನ್ನು ಇಲಾಖೆ ಪೂರೈಸಲಾಗದೆ, ಕೇವಲ ಒಂದು ಚೀಲ ಯೂರಿಯಾ ಗೊಬ್ಬರಕ್ಕಾಗಿ ಕನಿಷ್ಠ ನಾಲ್ಕು ಗಂಟೆಗಳ ಕಾಲ ಕಾಯುವಂತ ಸ್ಥಿತಿಗೆ ರೈತರನ್ನು ಇಲಾಖೆ ದೂಡಿದೆ.


ನಗರದ ಸಾತನೂರು ರಸ್ತೆಯಲ್ಲಿರುವ ಗೋದಾಮುವಿನ ಬಳಿ ಇಂದು 500 ಕ್ಕೂ ಹೆಚ್ಚು ಮಂದಿ ಬೆಳಿಗ್ಗೆ ಆರು ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂದಿತು.

ತಂತಮ್ಮ ಆಧಾರ್ ಕಾರ್ಡ್ ಹಿಡಿದು ಕಾಫಿ, ತಿಂಡಿಯೂ ಇಲ್ಲದೆ, ತಡವಾಗಿ ಹೋದರೆ ಒಂದು ಚೀಲವು ಸಿಗದೇ ಹೋಗಬಹುದು ಎಂಬ ಆತಂಕದಿಂದ ರೈತರು ಜಮಾಯಿಸಿದರು.


ತಾಲ್ಲೂಕಿಗೆ ಈ ಮಳೆಗಾಲದಲ್ಲಿ 450 ರಿಂದ 500 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದ್ದು, ಪ್ರತಿ ವರ್ಷವೂ ಇಲಾಖೆಯು ಕೈಚೆಲ್ಲುವುದು, ಸಭೆಗಳಲ್ಲಿ ಎಲ್ಲವೂ ಸರಿಯಾಗಿದೆ. ದಾಸ್ತಾನು ಇದೆ ಎಂದು ಹೇಳುವುದನ್ನು ಮಾಡುತ್ತಾರೆಯೇ ವಿನಹ, ರೈತರಿಗೆ ಬೇಕಾಗುವಷ್ಟು ರಸಗೊಬ್ಬರವನ್ನು ಮಾತ್ರ ಯಾವ ವರ್ಷವೂ ಕೊಡದಿರುವುದು ಇಲಾಖೆಯ ಅಧಿಕಾರಿಗಳು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎನ್ನಬಹುದು.


ನಮ್ಮ ನಗರದ ಗೋದಾಮಿನಲ್ಲಿ 20 ಟನ್ ಯೂರಿಯಾ ಇದೆ. ಪ್ರತಿಯೊಬ್ಬರಿಗೂ ಒಂದೊಂದು ಚೀಲ ನೀಡಲು ಸೂಚಿಸಲಾಗಿದೆ. ನಾಳೆ ಬೆಳಿಗ್ಗೆಯೂ ಸಹ ರಸಗೊಬ್ಬರ ಬರಲಿದೆ. ಈ ಸಾಲಿಗೆ ಬೇಕಾದಷ್ಟು ರಸಗೊಬ್ಬರವನ್ನು ಸಕಾಲದಲ್ಲಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಕೊರತೆಯನ್ನು ಶೀಘ್ರವಾಗಿ ನೀಗಿಸುತ್ತೇವೆ.

*ಅಪರ್ಣಾ. ಕೃಷಿ ಅಧಿಕಾರಿ. ಚನ್ನಪಟ್ಟಣ.*


ನಾವು ವ್ಯವಸಾಯಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಬದಿಗೊತ್ತಿ, ಒಂದು ಚೀಲ ರಸಗೊಬ್ಬರಕ್ಕಾಗಿ ಒಪ್ಪತ್ತು ಕಾಯಬೇಕಾದ ಸ್ಥಿತಿಗೆ ರೈತರನ್ನು ದೂಡಿದ್ದಾರೆ. ಒಂದು ವರ್ಷವೂ ದಾಸ್ತಾನು ಇಡದೆ ಕೊನೆ ಗಳಿಗೆಯಲ್ಲಿ ಕಾಯಿಸುವುದು ಯಾವ ನ್ಯಾಯ. ಹೀಗೆ ಮುಂದುವರೆದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ.

*ಸ್ವಾಮಿ ರಾಂಪುರ*


ಮಳೆ ಹೆಚ್ಚಾಗಿ ಬೀಳುತ್ತಿರುವುದರಿಂದ ರಾಗಿ ಬಿಳುಚಿಕೊಳ್ಳುತ್ತಿದೆ. ಈ ಸಮಯದಲ್ಲಿ ಯೂರಿಯಾ ದ ಅವಶ್ಯಕತೆ ಇದೆ. ಈಗ ಹಾಕಿದರೆ ಮಾತ್ರ ರಾಗಿ ಪೈರು ಕಪ್ಪು ಬಣ್ಣಕ್ಕೆ ತಿರುಗಿ ಹುಲುಸಾಗಿ ಬೆಳೆಯಲು ಸಾಧ್ಯ. ಮಳೆಗಾಲ ಮುಗಿದ ನಂತರ ಕೊಟ್ಟರೆ ಯಾರಿಗೂ ಉಪಯೋಗವಿಲ್ಲ.

*ಎಂ ಕುಮಾರ. ಜಿಜಿ ದೊಡ್ಡಿ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑