Tel: 7676775624 | Mail: info@yellowandred.in

Language: EN KAN

    Follow us :


ರೈತರ ಕೂಗಿಗೆ ಸರ್ಕಾರ ಸ್ಪಂದಿಸದಿದ್ದರೆ, ಪರ್ಯಾಯ ಅಧಿವೇಶನ ಮಾಡಿ. ವಿಧಾನಸೌಧ ಮುಚ್ಚುತ್ತೇವೆ. ಬಡಗಲಪುರ ನಾಗೇಂದ್ರ

Posted date: 15 Sep, 2020

Powered by:     Yellow and Red

ರೈತರ ಕೂಗಿಗೆ ಸರ್ಕಾರ ಸ್ಪಂದಿಸದಿದ್ದರೆ, ಪರ್ಯಾಯ ಅಧಿವೇಶನ ಮಾಡಿ. ವಿಧಾನಸೌಧ ಮುಚ್ಚುತ್ತೇವೆ. ಬಡಗಲಪುರ ನಾಗೇಂದ್ರ

ಚನ್ನಪಟ್ಟಣ:ಸೆ/15/20/ಮಂಗಳವಾರ. ರಾಜ್ಯ ಸರ್ಕಾರವು ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯದೇ ಹೋದರೆ, ರಾಜ್ಯ ರೈತ ಸಂಘಟನೆಗಳು ಸೇರಿದಂತೆ ರಾಜ್ಯದ 37 ಸಂಘಟನೆಗಳು ಸೇರಿ, ಪರ್ಯಾಯ ಅಧಿವೇಶನ ನಡೆಸಿ, ರಾಜ್ಯದ ಆಡಳಿತದ ಚುಕ್ಕಾಣಿ ಇರುವ ವಿಧಾನ ಸೌಧ ವನ್ನು ಬಾಗಿಲು ಹಾಕುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಅವರು ಇಂದು ನಗರದ ರೈತ ಸಂಘದ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಹಾಗೂ ರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ ಇವೆರಡು ಭ್ರಷ್ಠ ಸರ್ಕಾರಗಳಾಗಿವೆ ಎಂದು ಆರೋಪಿಸಿದರು.
ಈ ಸರ್ಕಾರಗಳು ಹಣವುಳ್ಳವರ ಕೈಗೆ ರೈತರ ಆಸ್ತಿಗಳನ್ನು ಕಿತ್ತುಕೊಡುವ ಸಂಚು ನಡೆಸಿವೆ, ಇಂದು ಭ್ರಷ್ಟಾದಾರಿಯಲ್ಲಿ ಸಾಗಿವೆ. ಇವು ರೈತರ ಹಾಗೂ ಕಾರ್ಮಿಕರ ಹಿತ ಕಾಪಾಡುವ ಬದಲಿಗೆ ಕಾರ್ಪೋರೇಟ್ ಕಂಪನಿಗಳಿಗೆ ಪೂರ ಕವಾಗಿ ಕೆಲಸ ಮಾಡುತ್ತಿವೆ.

ಈ ಸರ್ಕಾರಗಳು ರೈತ ವಿರೋಧಿ ಕಾನೂನುಗಳನ್ನು ಕೈ ಬಿಡದಿದ್ದರೆ, ಭವಿ ಷ್ಯದಲ್ಲಿ ಈ ಸರ್ಕಾರವನ್ನು ಒಕ್ಕಲೆಬ್ಬಿಸುವ ಹಿನ್ನೆಲೆಯಲ್ಲಿ ಹೋರಾಟ ಮಾಡಲಿದ್ದೇವೆ ಎಂದರು.

ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ ರಾಮು ಮಾತನಾಡಿ
ರೈತ ಮತ್ತು ಕಾರ್ಮಿಕರ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ಕೊಡುವ ದಾರಿಯಲ್ಲಿ  ಮುಂದಾದರೆ ವಿಧಾನಸೌಧದ ಬಾಗಿಲು ಹಾಕುತ್ತೇವೆ. ಅಷ್ಟೇ ಅಲ್ಲದೆ ಪರ್ಯಾಯ ವಿಧಾನ ಸಭಾಧಿವೇಶನವನ್ನು ನಡೆಸಲು ಮುಂದಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ 21 ನೇ ತಾರೀಖು ನಡೆಯುವ ಪ್ರತಿಭಟನೆಯು ಸಾಂಕೇತಿಕವಾಗಿರುತ್ತದೆ. ಅದಕ್ಕೆ ಬಗ್ಗದಿದ್ದರೆ ಮುಂದಿನ ಹೋರಾಟಕ್ಕೆ ಸಿದ್ದರಾಗುತ್ತೇವೆ ಎಂದರು.

ಈ ಹೋರಾಟದಲ್ಲಿ ಹಿರಿಯ ಹೋರಾಟಗಾರ, ರಾಜಕಾರಣಿ ಯೋಗೇಂದ್ರ ಯಾದವ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ, ನಿವೃತ್ತ ಶ್ರೇಷ್ಠ ನ್ಯಾಯಾಲಯದ ನ್ಯಾಯಮೂರ್ತಿ ನಾಗಮೋಹನದಾಸ್  ಅಲ್ಲದೆ 37 ಸಂಘಟನೆಗಳು ಪ್ರತಿಭಟನೆಗೆ ಪೂರಕವಾಗಿ ನಿಂತಿವೆ ಎಂದು ಅವರು ವಿಷಯ ಸ್ಪಷ್ಟ ಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಸಂಘದ ಅಧ್ಯಕ್ಷರಾದ ಕೆ.ಮಲ್ಲಯ್ಯ. ತಾಲ್ಲೂಕು ಅಧ್ಯಕ್ಷರಾದ ರಾಮೇಗೌಡ, ಗೌರವಾಧ್ಯಕ್ಷರಾದ ಹೆಚ್. ಕೃಷ್ಣಯ್ಯ, ಕನಕಪುರದ ಹಿರಿಯ ಹೋರಾಟಗಾರ ಸಿದ್ದೇಗೌಡ, ಕೃಷ್ಣಪ್ಪ ರಾಮನಗರದ ಚಂದ್ರಶೇಖರ್, ಪುಟ್ಟಸ್ವಾಮಿ  ಉಪಸ್ಥಿತರಿದ್ದರು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑