Tel: 7676775624 | Mail: info@yellowandred.in

Language: EN KAN

    Follow us :


ತಗಚಗೆರೆ ವಿಲೇಜ್ ಅಕೌಂಟೆಂಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಯತ್ನ. ಆಸ್ಪತ್ರೆಗೆ ದಾಖಲು

Posted date: 15 Sep, 2020

Powered by:     Yellow and Red

ತಗಚಗೆರೆ ವಿಲೇಜ್ ಅಕೌಂಟೆಂಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಯತ್ನ. ಆಸ್ಪತ್ರೆಗೆ ದಾಖಲು

ಚನ್ನಪಟ್ಟಣ:ಸೆ/14/20/ಮಂಗಳವಾರ. ತಾಲ್ಲೂಕಿನ ತಗಚಗೆರೆ ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿ ಕವಿತಾ ಎಂಬುವವರು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.


ಜಮೀನು ಮತ್ತು ಕೆಪಿಟಿಸಿಎಲ್ ಗೆ ಸಂಬಂಧಿಸಿದ ಭೂಮಿಯ ಸರ್ವೇ ಕಾರ್ಯ ತಾಲೂಕಿನಾದ್ಯಂತ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ತಹಶಿಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ವಿಎ ಸರ್ವೇ ಕೆಲಸದ ನಿಮಿತ್ತ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಹಶಿಲ್ದಾರ್ ರವರು ಸರ್ವೇ ನಂಬರಿನ ಖಾತೆ ಗೆ ಸಂಬಂಧಿಸಿದಂತೆ ವಿಎ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ತನ್ನದಲ್ಲದ ತಪ್ಪಿಗೆ ಸಾರ್ವಜನಿಕವಾಗಿ ನಿಂದಿಸಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿದೆ.


ಈಕೆ ಐದು ತಿಂಗಳ ಗರ್ಭಿಣಿಯಾಗಿದ್ದು, ಹದಿನಾರು ನಿದ್ರೆ ಮಾತ್ರೆಗಳನ್ನು ನುಂಗಿದ್ದು, ಸಾವು ಬದುಕಿನ ನಡುವೆ ಸೆಣಸಾಟ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ವಿಷಯ ತಿಳಿದ ಉಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಾಕ್ಷಾಯಣಿ ರವರು ಆಸ್ಪತ್ರೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.


ಇದು ತಾಲ್ಲೂಕಿನ ಆಡಳಿತಕ್ಕೆ ಸೂಕ್ಷ್ಮ ವಿಷಯವಾಗಿದ್ದು ಮುಂದಿನ ಆಗುಹೋಗುಗಳು ಯಾವರೀತಿ ತಿರುವು ಪಡೆದುಕೊಳ್ಳಲಿವೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ತಾಲ್ಲೂಕು ದಂಡಾಧಿಕಾರಿಯವರು ಪ್ರತಿಕ್ರಿಯಿಸಿ ನನ್ನ ಮತ್ತು ಅವರ ನಡುವೆ ಯಾವುದೇ ರೀತಿಯ ವಾಗ್ವಾದ ನಡೆದಿಲ್ಲ. ನಾನು ನಿಂದಿಸಿಯೂ ಇಲ್ಲ, ಆರ್ ಐ ಮತ್ತು ವಿಎ ಇಬ್ಬರೂ ಸಹ ನನ್ನ ಜೊತೆ ಸರ್ವೇ ವೀಕ್ಷಣೆಗೆ ಬಂದಿದ್ದರು. ಯಾಕೆ ಅವರು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಪ್ರತಿಕಿಯಿಸಿದ್ದಾರೆ.


ಆಕೆ ನಿಮುಸಲೈಡ್ (nimusalaid) ಮಾತ್ರೆ ನುಂಗಿದ್ದು ಸದ್ಯ ಆಕೆಯ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ. ಆಕೆ ಗರ್ಭಿಣಿ ಆಗಿರುವುದರಿಂದ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಲೇ ಏನೂ ಹೇಳಲಾಗುವುದಿಲ್ಲ. ಗರ್ಭಿಣಿಗೆ ಇಪ್ಪತ್ತು ವಾರಗಳ ಪರೀಕ್ಷೆಯ ನಂತರ ಹೇಳಬಹುದು ಎಂದು ಆಸ್ಪತ್ರೆಯ ಮುಖ್ಯ ವೈದ್ಯೆ ಪತ್ರಿಕೆಗೆ ತಿಳಿಸಿದರು.


ವಿಎ ಮತ್ತು ಅವರ ಸಂಬಂಧಿಕರಿಗೆ ಕರೆ ಮಾಡಲಾಗಿ ಅವರು ಸ್ವೀಕರಿಸದಿದ್ದರಿಂದ ಅವರ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಈ ನಡುವೆ ತಾಲೂಕಿನ ಅನೇಕ ಗ್ರಾಮ ಲೆಕ್ಕಾಧಿಕಾರಿಗಳು ಆಸ್ಪತ್ರೆಯ ಬಳಿ ಜಮಾಯಿಸಿದ್ದು ಕಂಡುಬಂತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑