Tel: 7676775624 | Mail: info@yellowandred.in

Language: EN KAN

    Follow us :


ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು

Posted date: 17 Sep, 2020

Powered by:     Yellow and Red

ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು

ಕನಕಪುರ:ಸೆ/17/20/ಗುರುವಾರ. ಕನಕಪುರ ದ ಸೆಷನ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಜಯಪ್ರಕಾಶ್ ರವರು ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜ್ವರ ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.


ಜಯಪ್ರಕಾಶ್ ರವರು ಮೂಲ ಪಿರಿಯಾಪಟ್ಟಣ ದವರಾಗಿದ್ದು ಚನ್ನಪಟ್ಟಣದ ನ್ಯಾಯಾಲಯಲ್ಲಿ ಸಹಾಯಕ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅಭಿಯೋಜಕರಾಗಿ ಬಡ್ತಿ ‌ಹೊಂದಿದ್ದು ಬೆಂಗಳೂರಿಗೆ ವರ್ಗವಾಗಿದ್ದರು. ನಂತರ ಕನಕಪುರ ದ ಸೆಷನ್ಸ್ ನ್ಯಾಯಾಲಯದಲ್ಲಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಇತ್ತೀಚೆಗೆ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಸಾದೇನಹಳ್ಳಿ ಗ್ರಾಮದ ತಾಯಿ ಮಗ (ನಿಂಗಮ್ಮ ಮತ್ತು ಚಂದ್ರು) ಕೊಲೆ ಕೇಸಿನಲ್ಲಿ, ಬೆಂಗಳೂರಿನ ಉತ್ತರಹಳ್ಳಿಯ ಕೊಲೆಗಾರರಾದ ಸುರೇಶ್, ಶಾರದಾ ಮತ್ತು ಕಲಾ ಎಂಬುವವರ ವಿರುದ್ದ ವಾದ ಮಂಡಿಸಿದ್ದು ಜಿಲ್ಲಾ ಅಪರ ನ್ಯಾಯಾಧೀಶ ಎಸ್ ಎಸ್ ಕಲ್ಕುಣಿ ರವರು ಅಪರಾಧಿಗಳಿಗೆ ತಲಾ 50 ಸಾವಿರ ದಂಡ ಮತ್ತು ಜೀವಾವಧಿ ಶಿಕ್ಷೆಗೆ ಗುರಿ ಪಡಿಸಿದ್ದನ್ನು ಸ್ಮರಿಸಬಹುದು.


ಮೃತರ ದೇಹವು ಪಿರಿಯಾಪಟ್ಟಣಕ್ಕೆ ಹೋಗುವ ಸಮಯದಲ್ಲಿ ಚನ್ನಪಟ್ಟಣದ ನ್ಯಾಯಾಲಯದ ಮುಂದೆ ನಿಲ್ಲಿಸಿ ತಾಲ್ಲೂಕಿನ ವಕೀಲರು ಶ್ರದ್ಧಾಂಜಲಿ ಅರ್ಪಿಸಿದರು.


ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದು, ತಾಲೂಕು ಮತ್ತು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮೃತರಿಗೆ ಶಾಂತಿ ಕೋರಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑