Tel: 7676775624 | Mail: info@yellowandred.in

Language: EN KAN

    Follow us :


ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ

Posted date: 22 Sep, 2020

Powered by:     Yellow and Red

ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ

ಚನ್ನಪಟ್ಟಣ:ಸೆ/22/20/ಮಂಗಳವಾರ.ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ದಲಿತರು ಸಾವನ್ನಪ್ಪಿದರೆ ಶವ ಹೂಳಲು ಸ್ಮಶಾನವಿಲ್ಲ. ಇದೊಂದೆ ಗ್ರಾಮವಲ್ಲದೆ ತಾಲ್ಲೂಕಿನಾದ್ಯಂತ ದಲಿತರು ಇರುವ ಅನೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲ. ಎಂದು ಇಂದು ದೇವರಹೊಸಹಳ್ಳಿ ಗ್ರಾಮದಲ್ಲಿ ಸಾವನ್ನಪ್ಪಿದ ಮೃತ ವ್ಯಕ್ತಿಯ ಸಂಬಂಧಿಕರು ಮತ್ತು ತಾಲ್ಲೂಕಿನ ದಲಿತ ಮುಖಂಡರು, ತಾಲೂಕು ಆಡಳಿತ ಅಂತ್ಯಕ್ರಿಯೆಗೆ ಜಾಗ ತೋರಿಸಿಕೊಡಬೇಕು ಚನ್ನಪಟ್ಟಣ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.


ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ದಲಿತ ಸಮುದಾಯದ ಪುಟ್ಟರಾಮಯ್ಯ (೭೦) ಎಂಬುವವರು ವಯೋಸಹಜ ಖಾಯಿಲೆಯಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದರು. ಮೃತರ ಅಂತ್ಯಕ್ರಿಯೆಯನ್ನು ಈ ಹಿಂದಿನಂತೆ ನಡೆಸುತ್ತಿದ್ದ ಜಾಗದಲ್ಲಿ ನಡೆಸಲು ಏರ್ಪಾಡು ಮಾಡುವ ವೇಳೆ, ಈ ಜಾಗ ಸ್ಮಶಾನಕ್ಕೆ ಸೇರಿದಲ್ಲ, ಇಲ್ಲಿ ಅಂತ್ಯಕ್ರಿಯೆ ನಡೆಸಬಾರದು ಎಂದು ಗ್ರಾಮದ ವ್ಯಕ್ತಿಯೊಬ್ಬರು ತರಕಾರು ತೆಗೆದಿದ್ದಾರೆ.


ಇದರಿಂದ ಆಕ್ರೋಶಗೊಂಡ ಮೃತರ ಕುಟುಂಬದವರು ಶವವನ್ನು ಗ್ರಾಮದ ಮನೆಯ ಬಳಿಯೆ ಇರಿಸಿ, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ದಲಿತಪರ ಹೋರಾಟಗಾರರ ಸಹಕಾರದೊಂದಿಗೆ ತಾಲೂಕು ಕಚೇರಿ ಮುಂಭಾಗ ಸ್ಮಶಾನಕ್ಕಾಗಿ ಪ್ರತಿಭಟನೆ ನಡೆಸಿದರು.


ಈ ಹಿಂದಿನಿಂದಲೂ ನಮ್ಮ ಪೂರ್ವಿಕರು ಸತ್ತಾಗ ಆ ಜಾಗದಲ್ಲೇ ಅಂತ್ಯಕ್ರಿಯೆ ನಡೆಸುತ್ತಿದ್ದೆವು. ಇದೀಗ, ಸಮುದಾಯದ ಮಂದಿ ಸತ್ತರೆ ಹೂಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ತಾಲೂಕು ಆಡಳಿತ ಸ್ಮಶಾನವನ್ನು ಗುರುತಿಸಿಕೊಡಬೇಕು. ಇಲ್ಲವಾದರೆ, ಮನೆಯ ಬಳಿ ಇರುವ ಶವವನ್ನು ತಾಲೂಕು ಕಚೇರಿ ಮುಂಭಾಗ ತಂದಿಡುವುದಾಗಿ ಆಕ್ರೋಶವ್ಯಕ್ತಪಡಿಸಿದರು.


ಪ್ರತಿಭಟನಾಕಾರರ ಅಹವಾಲು ಆಲಿಸಿದ. ತಹಸೀಲ್ದಾರ್ ಎಲ್. ನಾಗೇಶ್ ಕೂಡಲೇ ಗ್ರಾಮಕ್ಕೆ ಬಂದು ಈ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.


ತದನಂತರ ಗ್ರಾಮಕ್ಕೆ ಭೇಟಿ ನೀಡಿದ ತಹಶಿಲ್ದಾರ್ ನಾಗೇಶ್ ರವರು ಎಲ್ಲರ ಸಮ್ಮುಖದಲ್ಲಿ ಮೊದಲು ಸಂಸ್ಕಾರ ಮಾಡುತ್ತಿದ್ದ ಜಾಗದಲ್ಲೇ ಶವ ಸಂಸ್ಕಾರ ಮಾಡಿಸಿ, ಈ ಜಾಗ ಸರ್ಕಾರಿ ಜಾಗವಾಗಿದ್ದು, ಈಗಾಗಲೇ ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕ ನಂತರ ಇದನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.


ಗೋ ರಾ ಶ್ರೀನಿವಾಸ...


ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑