Tel: 7676775624 | Mail: info@yellowandred.in

Language: EN KAN

    Follow us :


“ಮೂಲೆಮನೆ “ ಕೋವಿಡ್-19 ಜಾಗೃತಿ ಮೂಡಿಸುವ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ

Posted date: 26 Sep, 2020

Powered by:     Yellow and Red

“ಮೂಲೆಮನೆ “ ಕೋವಿಡ್-19 ಜಾಗೃತಿ ಮೂಡಿಸುವ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ

ರಾಮನಗರದ ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಮತ್ತು ಮಿಷನ್ ಚಾಯ್ ಸಂಸ್ಥೆಗಳು ಒಟ್ಟುಗೂಡಿ ಜನರಿಗೆ ಕೋವಿಡ್ ೧೯ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರ ನಿರ್ಮಾಣ ಮಾಡಿದೆ. ಈ ಚಿತ್ರ ನಿರ್ಮಾಣಕ್ಕೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ ಸಂಪೂರ್ಣ ಸಹಕಾರ ನೀಡಿದೆ. ಜಿಲ್ಲಾ ಮಲೇರಿಯಾ ಅಧಿಕಾರಿಯಾಗಿರುವ  ಡಾ||. ಪ್ರಸನ್ನಕುಮಾರ್ ಎನ್. ರವರು ಈ ಕಿರುಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಚಿತ್ರದ ನಿರ್ದೇಶಕರಾಗಿ ರಾಮನಗರದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ|| ಶೃತಿ ಕನ್ನಂತ್ (ಯಕ್ಷಗಾನ ಕಲಾವಿದೆ) ಅವರು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ.  


ಈ ಕಿರುಚಿತ್ರ ಬಿಡುಗಡೆ ಸಮಾರಂಭವು ದಿನಾಂಕ: 26/09/2020 ರ ಶನಿವಾರದಂದು ಶ್ರೀ ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ & ಕಲ್ಚರಲ್ ಸೆಂಟರ್‌ನಲ್ಲಿ ಜರುಗಿತು. ಕಾರ್ಯಕ್ರಮದ ನಿರೂಪಣೆಯನ್ನು ಡಾ||. ಪ್ರಸನ್ನಕುಮಾರ್ ಎನ್. ಮಾಡುವ ಮೂಲಕ ಸಮುದಾಯದಲ್ಲಿ ಹರಡಿರವ ಕರೋನ ವೈರಸ್ ಬಗ್ಗೆ ಹಳ್ಳಿ-ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಆರೋಗ್ಯ ಶಿಕ್ಷಣ ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಕೆ.ಎಚ್.ಎಸ್.ಸಿ.ಸಿ ಕ್ಲಬ್ ಅಧ್ಯಕ್ಷರಾದ ಶ್ರೀ ಕುಮಾರಸ್ವಾಮಿ, ಯೆಲ್ಲೊ ಅಂಡ್ ರೆಡ್ಸ್ ಫೌಂಡೇಷನ್ಸ್ನ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಆರ್, ಸಂಸ್ಥಾಪನಾ ಅಧ್ಯಕ್ಷರಾದ ಶ್ರೀಅಮಿತ್‌ರಾಜ್‌ಶಿವಾ, ಚಾಯ್ ಮಿಷನ್‌ನ ರಾಕೇಶ್, ದಾನ್ ಫೌಂಡೇಷನ್ಸ್  ಶ್ರೀಮತಿ ನಾಗರತ್ನಮ್ಮ ಹಾಗೂ ಡಾ|| ಸ್ವಾತಿ, ಮತ್ತಿತರರು ಪಾಲ್ಗೊಂಡಿದ್ದರು.


ಕಾರ್ಯಕ್ರಮ ಸ್ವಾಗತದ ಭಾಷಣದ ನಂತರ ಗಾನ ಗಾರಡಿಗ ಎಸ್. ಪಿ. ಬಾಲ ಸುಬ್ರಮಣ್ಯಂ ರವರ ನಿಧನದ ಪ್ರಯುಕ್ತ ಅವರಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ನ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಆರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ  ಪ್ರಸ್ತುತ ಸಮಯದಲ್ಲಿ ಕೋವಿಡ್-೧೯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ನಾವು ಮಾಡುವ ಒಂದು ಸಣ್ಣ ತಪ್ಪು ಮತ್ತೊಬ್ಬರ ಜೀವಕ್ಕೆ ಹಾನಿಯಾಗುವ ಸಂಭವ ಇರುತ್ತದೆ. ಇದರ ಬಗ್ಗೆ ನಾವು ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಪ್ರಮಾಣದಲ್ಲಿ ಸಾವು ನೋವು ಉಂಟಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಆತಂಕ ವ್ಯಕ್ತ ಪಡಿಸಿದರು. ಇದರ ಬಗ್ಗೆ ಅರಿವು ಮೂಡಿಸುವಲ್ಲಿ ಈ ಕಿರುಚಿತ್ರ ತುಂಬಾ ಸಹಾಯಕವಾಗಲಿದೆ ಎಂದರು.

ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಗಣ್ಯರು ದೀಪ ಬೆಳಗಿಸುವ ಮೂಲಕ ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು.

ಕೆ.ಎಚ್.ಎಸ್.ಸಿ.ಸಿ ಕ್ಲಬ್ ಅಧ್ಯಕ್ಷರಾದ ಶ್ರೀ ಕುಮಾರಸ್ವಾಮಿ ಕಿರುಚಿತ್ರ ಬಿಡುಗಡೆ ಮಾಡಿದ ನಂತರ ಇದರ ಬಗ್ಗೆ ಮಾತನಾಡುತ್ತಾ ಜನರಲ್ಲಿ ಇತ್ತೀಚೆಗೆ ಕರೋನ ವೈರಸ್ ಬಗ್ಗೆ ಎಚ್ಚರಿಕಾ ಕ್ರಮಗಳನ್ನು ಪಾಲಿಸುವಲ್ಲಿ ನಿರ್ಲಕ್ಷö್ಯ ವಹಿಸುತ್ತಿದ್ದಾರೆ ಈಗಾಗಲೇ ಇದರ ಪರಿಣಾಮವನ್ನು ನಾವು ದಿನ ನಿತ್ಯದ ಕರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿರುದನ್ನು ನಾವು ನೋಡುತ್ತಿದ್ದೇವೆ ಈಗಲೂ ಇದರ ಬಗ್ಗೆ ನಾವು ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಪ್ರಮಾಣದಲ್ಲಿ ಸಾವು-ನೋವುಗಳುಗಳು ಉಂಟಾಗುತ್ತವೆ ಹಾಗಾಗಿ ಈ ಸಮಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಾವಶ್ಯಕವಾಗಿದೆ ಆ ಒಂದು ನಿಟ್ಟಿನಲ್ಲಿ ಈ ಕಿರುಚಿತ್ತ ಪ್ರಮುಖ ಪಾತ್ರ ವಹಿಸಲಿದೆ ಈ ಮೂಲಕ ನಾವು ನಮಗೆ ಸಾಧ್ಯವಾದಷ್ಟು ಜಾಗೃತಿ ಮೂಡಿಸುವಲ್ಲಿ ನಿರತರಾಗಬೇಕೆಂದರು. 

ಕಿರುಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರು ಹೊಸಬರಾಗಿದ್ದು ಉತ್ತಮ ಪ್ರದರ್ಶನ ನೀಡಿದ್ದಾರೆ. ಮಿಷನ್ ಚಾಯ್‌ನ ರಾಕೇಶ್ ರವರು ಈ ಕಿರುಚಿತ್ರದ ನಿರ್ಮಾಪಕರಾಗಿದ್ದು, ಕಿರುಚಿತ್ರ ಉತ್ತಮವಾಗಿ ಮೂಡಿಬಂದಿದೆ. ಜನರಿಗೆ ಈ ಕಿರುಚಿತ್ರದ ಮೂಲಕ ಒಂದು ಒಳ್ಳೆಯ ಸಂದೇಶ ತಲುಪುತ್ತದೆ ಎಂದು ಅಭಿಪ್ರಾಯಪಟ್ಟರು.  

ಒಟ್ಟಾರೆಯಾಗಿ ಈ ಕಿರುಚಿತ್ರದ ಮೂಲ ತಿರುಳು ಜನರಿಗೆ ಕರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರತಿ ಹಂತದಲ್ಲಿ ವಹಿಸಿಕೊಂಡರೆ ಮಾತ್ರ ಈ ವೈರಸ್ ತಡೆಗಟ್ಟಲು ಸಾಧ್ಯವಾಗುತ್ತದೆ.  


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑