Tel: 7676775624 | Mail: info@yellowandred.in

Language: EN KAN

    Follow us :


ಉಚಿತ "ಸಿ.ಸಿ.ಟಿ.ವಿ.ಕ್ಯಾಮರಾ, ಸೆಕ್ಯೂರಿಟಿ ಅಲಾರಾಂ ಸಿಸ್ಟಮ್, ಸ್ಮೋಕ್ ಡಿಟೆಕ್ಟರ್ -ಇನ್ ಸ್ಟಾಲೆಷನ್ ಅಂಡ್ ಸರ್ವಿಸಿಂಗ್" ತರಬೇತಿಗೆ ಅರ್ಜಿ ಆಹ್ವಾನ

Posted date: 26 Sep, 2020

Powered by:     Yellow and Red

ಉಚಿತ

ರಾಮನಗರ:ಸೆ/26/20/ಶನಿವಾರ. ಬಿಡದಿ ಬಳಿಯಿರುವ ಕೆನರಾ ಬ್ಯಾಂಕ್ ನ ಎ.ಡಿ.ಪೈ ಗ್ರಾಮೀಣ ಸ್ವ ಉದ್ಯೋಗ  ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ 13 ದಿನಗಳ ಉಚಿತ  .ಸಿ.ಸಿ.ಟಿ.ವಿ.ಕ್ಯಾಮರಾ, ಸೆಕ್ಯೂರಿಟಿ  ಅಲಾರಾಂ ಸಿಸ್ಟಮ್,  ಸ್ಮೋಕ್ ಡಿಟೆಕ್ಟರ್ -ಇನ್ ಸ್ಟಾಲೆಷನ್ ಅಂಡ್ ಸರ್ವಿಸಿಂಗ್ ತರಬೇತಿಯನ್ನು ಆಯೋಜಿಸಲಾಗಿದೆ.


ಆಸಕ್ತಿ ಉಳ್ಳ ಯುವಕರು ಕನಿಷ್ಠ 7 ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿರಬೇಕು. 18 ರಿಂದ 35  ವರ್ಷ 

ವಯೋಮಾನದವರಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.


ತರಬೇತಿಯ ಮುಖ್ಯ ಉದ್ದೇಶ ಯುವಕರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲತೆ ಸಾಧಿಸುವುದಾಗಿರುತ್ತದೆ. ಆಸಕ್ತರು ತಮ್ಮ ಇತ್ತೀಚಿನ 3 ಭಾವಚಿತ್ರಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲಿನೊಂದಿಗೆ ನೇರವಾಗಿ ಅಭ್ಯರ್ಥಿಗಳು ಅರ್ಜಿಗಳನ್ನು ದಿನಾಂಕ 30.09.2020 ರ ಒಳಗೆ ಕೆಳಗಿನ ವಿಳಾಸಕ್ಕೆ ಸಲ್ಲಿಸಿ ತಮ್ಮ ಹೆಸರನ್ನು  ತರಬೇತಿಗೆ  ನೊಂದಾಯಿಸಬಹುದಾಗಿದೆ. ತರಬೇತಿಯು ದಿನಾಂಕ 30.09.2020 ರಂದು ಪ್ರಾರಂಭವಾಗುತ್ತದೆ. 


*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ವಿಳಾಸ ಮತ್ತು ದೂರವಾಣಿ ಸಂಖ್ಯೆ:*

ಕೆನರಾ ಬ್ಯಾಂಕ್,

ಎ.ಡಿ.ಪೈ  ಗ್ರಾಮೀಣ  ಅಭಿವೃದ್ಧಿ ತರಬೇತಿ ಸಂಸ್ಥೆ,

ಬೆಂಗಳೂರು  -  ಮೈಸೂರು ಹೆದ್ದಾರಿ,

ವಂಡರ್ ಲಾ ಹಾಗೂ ಬಿಡದಿಯ ಮಧ್ಯಭಾಗ ಲಕ್ಷ್ಮಿಸಾಗರ ಗೇಟ್, ವಾಜರಹಳ್ಳಿ, ಬಿಡದಿ ಹೋಬಳಿ, 

ರಾಮನಗರ ಜಿಲ್ಲೆ - 562109.

ತರಬೇತಿ ಸಂಯೋಜಕರು. 

96862 69653.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑