Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಟೂರಿಸಂ ಫೋಟೊ ಕಾಂಟೆಸ್ಟ್ 2020 ರಲ್ಲಿ ವಿಜೇತರಿಗೆ ಪ್ರಶಸ್ತಿಪತ್ರ & ನಗದು ಬಹುಮಾನ ವಿತರಿಸಿದ - ರಾಮನಗರ ಜಿ.ಪಂ. ಸಿ.ಇ.ಒ ಇಕ್ರಮ್

Posted date: 29 Sep, 2020

Powered by:     Yellow and Red

ರಾಮನಗರ ಟೂರಿಸಂ ಫೋಟೊ ಕಾಂಟೆಸ್ಟ್ 2020 ರಲ್ಲಿ ವಿಜೇತರಿಗೆ ಪ್ರಶಸ್ತಿಪತ್ರ & ನಗದು ಬಹುಮಾನ ವಿತರಿಸಿದ - ರಾಮನಗರ ಜಿ.ಪಂ. ಸಿ.ಇ.ಒ ಇಕ್ರಮ್

ರಾಮನಗರ ಜಿಲ್ಲಾ ಪಂಚಾಯಿತಿಯು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿರುವ ಪ್ರವಾಸಿ ಸ್ಥಳಗಳನ್ನು ಹುಡುಕಲು ಫೇಸ್‌ಬುಕ್‌ನಲ್ಲಿ ಜುಲೈ 24 ರಂದು ಛಾಯಚಿತ್ರ ಸ್ಪರ್ಧೆಗೆ ಚಾಲನೆ ನೀಡಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಳ್ಳುವ ಮೂಲಕ ಸುಮಾರು 500 ಕ್ಕೂ ಹೆಚ್ಚು ಪೋಟೊಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಛಾಯಚಿತ್ರ ಸ್ಪರ್ಧೆ ರಾಮನಗರದ ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್  ಸಹಕಾರ ನೀಡಿದೆ ಜೊತೆಗೆ  ಟೆಕ್ನಿಕಲ್ ಸಹಾಯವನ್ನು ಯೆಲ್ಲೊ ಅಂಡ್ ರೆಡ್ ಸರ್ವೀಸ್.ಪ್ರೈ.ಲಿ. ನೀಡಿದೆ.


ದಿನಾಂಕ: 29/09/2020 ರ ಮಂಗಳವಾರ  ಜಿಲ್ಲಾ ಪಂಚಾಯ್ತಿ ಮೀಟಿಂಗ್ ಹಾಲ್ ನಲ್ಲಿ  ಛಾಯಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಸಿ.ಇ.ಒ ಆದ ಶ್ರೀ ಇಕ್ರಮ್‌ರವರು, ರಾಮನಗರ ಪ್ರವಾಸೋದ್ಯ ಅಭಿವೃದ್ದಿ ಅಧಿಕಾರಿ ಇಮ್ರಾನ್, ಹಾಗೂ ಯೆಲ್ಲೊ ಅಂಡ್ ಫೌಂಡೇಷನ್ಸ್  ಅಧ್ಯಕ್ಷರಾದ ಆರ್.ರಾಘವೇಂದ್ರ, ಸಂಸ್ಥಾಪನಾ ಅಧ್ಯಕ್ಷರಾದ ಅಮಿತ್‌ರಾಜ್‌ಶಿವಾ ಹಾಗೂ ಸಂಸ್ಥೆಯ ಡೈರೆಕ್ಟರ್ ಗಳಲ್ಲಿ ಒಬ್ಬರಾದ ಶ್ರೀಮತಿ ಅನುರಾಧ ರವರು ಪಾಲ್ಗೊಂಡಿದ್ದರು.


ಸ್ಪರ್ಧೆಯಲ್ಲಿ ಅತ್ಯುತ್ತಮ ಛಾಯಚಿತ್ರ ತೆಗೆದ ಶಶಿಕುಮಾರ್ ಬಿ, ಚೇತನ್ ಸಿದ್ದು, ಅಜಯ್ ಗೌಡ ಮತ್ತು ರಘುಕುಮಾರ್ ಸಿ. ಇವರಿಗೆ ಇಕ್ರಮ್ ರವರು ಪ್ರಶಸ್ತಿಪತ್ರ ಹಾಗೂ 1 ಸಾವಿರ ನಗದು ಬಹುಮಾನ ವಿತರಿಸಿ ಅಭಿನಂದನೆ ಹೇಳಿದರು. ಹಾಗೂ ಇನ್ನುಳಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಎಲ್ಲಾ ಛಾಯಚಿತ್ರ ಅಭ್ಯರ್ಥಿಗಳನ್ನು ಕುರಿತು ಸಿ.ಇ.ಒ ಅವರು ರಾಮನಗರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸಿ ತಾಣಗಳನ್ನು ಗುರುತಿಸಿ ಬೆಳಕಿಗೆ ತರಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ನಿಮಗೆ ಯಾವುದೇ ರೀತಿಯ ಸಹಕಾರ ಬೇಕಾದಲ್ಲಿ ನಮ್ಮ ಪ್ರವಾಸೋದ್ಯಮ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಹೇಳಿದರು. 


ಅಭ್ಯರ್ಥಿಗಳಲ್ಲಿ ಕೆಲವರು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ರಾಮನಗರ ಜಿಲ್ಲೆಯಲ್ಲಿ ಇರುವ ಪ್ರವಾಸಿ ಸ್ಥಳಗಳ ಸ್ವಚ್ಚತೆ ಮತ್ತು ಸುವ್ಯವಸ್ಥಿತ ರಸ್ತೆಯ ಸೌಲಭ್ಯವನ್ನು ಒದಗಿಸಬೇಕು. ಹಾಗೂ ಬೆಳಕಿಗೆ ಬರದೇ ಇರುವ ಅದೆಷ್ಟೂ ಪ್ರವಾಸಿ ಸ್ಥಳಗಳ ಪುನರುಜ್ಜೀವನಕ್ಕಾಗಿ ಆಡಳಿತ ವರ್ಗ ಸಹಕರಿಸಬೇಕೆಂದರು.

 

ಇನ್ನುಳಿದಂತೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಸಿಬ್ಬಂಧಿವರ್ಗ ಮತ್ತು ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು. 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑