Tel: 7676775624 | Mail: info@yellowandred.in

Language: EN KAN

    Follow us :


ವಿಶ್ವದ ಬಹುತೇಕ ಯುದ್ದಗಳಲ್ಲಿ ನಿಸ್ವಾರ್ಥ ಸೇವೆ ನೀಡಿದ ಏಕೈಕ ಸಂಸ್ಥೆ ರೆಡ್‌ ಕ್ರಾಸ್‌: ತಹಶಿಲ್ದಾರ್ ನಾಗೇಶ್

Posted date: 29 Sep, 2020

Powered by:     Yellow and Red

ವಿಶ್ವದ ಬಹುತೇಕ ಯುದ್ದಗಳಲ್ಲಿ ನಿಸ್ವಾರ್ಥ ಸೇವೆ ನೀಡಿದ ಏಕೈಕ ಸಂಸ್ಥೆ ರೆಡ್‌ ಕ್ರಾಸ್‌: ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಸೆ/29/20/ಮಂಗಳವಾರ. ವಿಶ್ವದ ಬಹುತೇಕ ಎಲ್ಲಾ ಯುದ್ದಗಳಲ್ಲೂ, ಗಾಯಗೊಂಡ ಸೈನಿಕರಿಗೆ ರಕ್ತ ಪೂರೈಸುವ ಮೂಲಕ, ನಿಸ್ವಾರ್ಥ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಏಕೈಕ ಸಂಸ್ಥೆ ಎಂದರೆ ಅದು ರೆಡ್ ಕ್ರಾಸ್ ಸಂಸ್ಥೆ ಎಂದು ತಾಲ್ಲೂಕು ದಂಡಾಧಿಕಾರಿ ನಾಗೇಶ್ ತಿಳಿಸಿದರು.

ಅವರು ಇಂದು ನಗರದ ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹೃದಯದ ದಿನ ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡದರು.


ರೆಡ್ ಕ್ರಾಸ್ ಸಂಸ್ಥೆಯು ಪ್ರತಿ ತಾಲ್ಲೂಕಿನಲ್ಲಿ ತನ್ನದೇ ಕಾರ್ಯಪಡೆಯನ್ನು ಹೊಂದಿದೆ. ಕೆಲವು ಜಿಲ್ಲಾ ಕೇಂದ್ರಗಳು ಸೇರಿದಂತೆ ದೊಡ್ಡ ನಗರಗಳಲ್ಲಿ ರಕ್ತನಿಧಿಗಳನ್ನು ಹೊಂದಿದ್ದು, ಸೇನಾನಿಗಳಷ್ಟೇ ಅಲ್ಲದೆ, ರಕ್ತದ ಅವಶ್ಯಕತೆ ಇರುವ ಎಲ್ಲರಿಗೂ ತನ್ನ ಸಹಾಯ ಹಸ್ತ ಚಾಚುತ್ತಿದೆ. ಇಂತಹ ಸಾಧನೆಗೈಯುತ್ತಿರುವ ರೆಡ್ ಕ್ರಾಸ್ ಸಂಸ್ಥೆಯು ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಆಶಿಸಿದರು.


ಹೃದಯ ತಜ್ಞ ಡಾ ಬಸವರಾಜು ಮಾತನಾಡಿ ದೇಹದ ಎಲ್ಲಾ ಅಂಗಗಳನ್ನು ಕೆಲಕಾಲ ನಿಯಂತ್ರಿಸಬಹುದು, ಆದರೆ ಹೃದಯ ಬಡಿತವನ್ನು ನಿಲ್ಲಿಸಲಾಗುವುದಿಲ್ಲ. ಆ ಭಾಗವನ್ನು ಮಾತ್ರ ಭಗವಂತ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾನೆ. ಆತ ಒಮ್ಮೆ ನಿಲ್ಲಿಸಿದರೆ ನಮ್ಮ ಕತೆ ಮುಗಿಯುತ್ತದೆ. ಆದರೂ ಹೃದಯಘಾತವನ್ನು ನಾವು ತಡೆಯಲು ಕೆಲ ಅಗತ್ಯ ಕ್ರಮಗಳನ್ನು ಕೈಗೊಂಡರೆ ತಪ್ಪಿಸಿಬಹದು. ಯೋಗ, ವ್ಯಾಯಾಮಗಳು ಮತ್ತು ನಡಿಗೆಯಿಂದಲೂ ಇದು ಸಾಧ್ಯವಾಗುತ್ತದೆ ಎಂದು ಹಲವಾರು ಉದಾಹರಣೆಗಳ ಸಮೇತ ತಿಳಿಸಿದರು.


ಹಿರಿಯ ಪತ್ರಕರ್ತ ಸು ತ ರಾಮೇಗೌಡ ಮಾತನಾಡಿ ಹೃದಯ ಎಂಬುದು ನಮ್ಮ ದೇಹದ ಬಹುಮುಖ್ಯ ಅಂಗ ಎನ್ನಬಹುದು. ಪ್ರತಿ ಅಂಗವೂ ಕೆಲಸ ಮಾಡಬೇಕಾದರೆ ಹೃದಯ ಕೆಲಸ ಮಾಡಬೇಕಾಗುತ್ತದೆ. ಹೃದಯದ ಬಡಿತ ನಿಂತರೆ ಎಲ್ಲಾ ಅಂಗಗಳು ಸ್ತಬ್ದವಾಗುವ ಮೂಲಕ ಆತ ಮರಣವನ್ನಪ್ಪುತ್ತಾನೆ. ನಮ್ಮ ಎಡಗೈ ಮುಷ್ಟಿಯಲ್ಲಿಡಿಯಬಹುದಾದಷ್ಟು ಇರುವ ಹೃದಯ ಪುರಾಣ ಮತ್ತು ಇತಿಹಾಸಗಳಲ್ಲದೆ ಬೈಗುಳಗಳಲ್ಲೂ‌ ಸಹ ಉಲ್ಲೇಖಿತವಾಗಿದೆ. ಹೃದಯ ಹೀನ, ನೆಲಕಚ್ಚು, ಎಡಮಗ್ಗುಲಲ್ಲಿ ಏಳಬೇಡ ಎಂಬ ನುಡಿಗಳು ಇವುಗಳಲ್ಲಿ ಸೇರಿವೆ. ಸ್ಕೌಟ್ ಮತ್ತು ಗೈಡ್ ಸಂಸ್ಥೆಯಲ್ಲಿ ಎಡಗೈ ಮೂಲಕ ಹಸ್ತಲಾಘವ ಮಾಡುವುದು ಸಹ ಹೃದಯಕ್ಕೆ ಸಂಬಂಧಿಸಿದ ವಿಷಯ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಭಾರತವಿಕಾಸ ಪರಿಷತ್ ನ ಅಧ್ಯಕ್ಷ ವಸಂತಕುಮಾರ್ ಮಾತನಾಡಿದರು.ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಚಂದ್ರೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. 75 ವರ್ಷದ ಕಾಡಯ್ಯನವರಿಗೆ ಡಾ ಬಸವರಾಜು ರವರು ಆರೋಗ್ಯ ತಪಾಷಣೆ ಮಾಡುವ ಮೂಲಕ ವಿನೂತನವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲಾವಿದರಾದ ವಿಠಲೇನಹಳ್ಳಿ ಕೃಷ್ಣೇಗೌಡ, ಶಾರದಾ ನಾಗೇಶ್ ಮತ್ತು ಗೌರಮ್ಮ ನವರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಶಿಕ್ಷಕ ಯೋಗೇಶ್ ಚಕ್ಕೆರೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑