Tel: 7676775624 | Mail: info@yellowandred.in

Language: EN KAN

    Follow us :


ಕೃಷ್ಣಾಪುರ ಗ್ರಾಮದಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶಪಡಿಸಿಕೊಂಡ ಅಕ್ಕೂರು ಪೋಲೀಸರು

Posted date: 08 Oct, 2020

Powered by:     Yellow and Red

ಕೃಷ್ಣಾಪುರ ಗ್ರಾಮದಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶಪಡಿಸಿಕೊಂಡ ಅಕ್ಕೂರು ಪೋಲೀಸರು

ನ್ನಪಟ್ಟಣ:ಅ/08/20/ಗುರುವಾರ. ಡ್ರಗ್ಸ್ ದಂಧೆ ಬೆಳಕಿಗೆ ಬಂದ ನಂತರ ಎಚ್ಚೆತ್ತ ಪೋಲೀಸರು ಅಕ್ರಮವಾಗಿ ಬೆಳೆದಿರುವ ಗಾಂಜಾ ಗಿಡಗಳನ್ನು ಎಕ್ಕಿ ತೆಗೆಯುತ್ತಿದ್ದಾರೆ. ಅದೇ ರೀತಿಯಲ್ಲಿ ಇಂದು ಖಚಿತ ಮಾಹಿತಿ ಪಡೆದ ಅಕ್ಕೂರು ಪೊಲೀಸರು ಸೀಮೆಹುಲ್ಲಿನಲ್ಲಿ ಅಕ್ರಮವಾಗಿ ಬೆಳೆದಿದ್ದ  ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಕೃಷ್ಣಾಪುರದಲ್ಲಿ ನಡೆದಿದೆ.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಸಹಾಯಕ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ  ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ ಮಾರ್ಗದರ್ಶನದಲ್ಲಿ ಅಕ್ಕೂರು ಪೊಲೀಸ್ ಠಾಣೆಯ ಪಿಎಸ್‌ಐ  ಸರಸ್ವತಿ ಹಾಗೂ ಸಿಬ್ಬಂದಿಗಳಾದ ಅಯ್ಯನಗೌಡ, ಶಿವಕುಮಾರ್, ಸುನೀಲ್, ವೆಂಕಟೇಶ್, ಪ್ರಕಾಶ್, ಗಿರೀಶ್, ಪಾಪಣ್ಣ  ಹಾಗೂ ಇತರೆ ಸಿಬ್ಬಂದಿ ದಾಳಿ ಮಾಡಿದ್ದಾರೆ.


ಗ್ರಾಮದ ಕಾಳೇಗೌಡ  ಎಂಬುವರ ಮಗ ಶಿವಣ್ಣ ಎಂಬಾತ ಸಾದಹಳ್ಳಿಗೆ ಸೇರಿದ ಸರ್ವೆ ನಂಬರಿನಲ್ಲಿ ಸೀಮೆ ಹುಲ್ಲು ಬೆಳೆದಿದ್ದು ಅದರ ಮಧ್ಯದಲ್ಲಿ ೪ ಗಾಂಜಾ ಗಿಡಗಳನ್ನು ಬೆಳೆಸಿದ್ದನು.

ಇದರ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.


ಆರೋಪಿ ಪರಾರಿಯಾಗಿದ್ದು 15 ಸಾವಿರ ರೂ  ಮೌಲ್ಯದ 2 ಕಿಲೋ 480 ಗ್ರಾಂ  ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑