Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಂಭತ್ತಕ್ಕೂ ಹೆಚ್ಚು ಕಾಡಾನೆಗಳಿಂದ ದಾಳಿ: ಬೆಳೆ ನಾಶ

Posted date: 11 Oct, 2020

Powered by:     Yellow and Red

ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಂಭತ್ತಕ್ಕೂ ಹೆಚ್ಚು ಕಾಡಾನೆಗಳಿಂದ ದಾಳಿ: ಬೆಳೆ ನಾಶ

ಚನ್ನಪಟ್ಟಣ:ಅ/10/20/ಶನಿವಾರ. ತಾಲ್ಲೂಕಿನ ಬಿವಿ ಹಳ್ಳಿ, ಅರಳಾಳುಸಂದ್ರ, ವಿಠಲೇನಹಳ್ಳಿ ಮೆಣಸಿಗನಹಳ್ಳಿ, ಭೂಹಳ್ಳಿ ಮತ್ತು ಸಿಂಗರಾಜಪುರ ಸೇರಿದಂತೆ ಅನೇಕ ಗ್ರಾಮದ ಅಂಚಿನ ಹೊಲಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ಒಂಭತ್ತಕ್ಕೂ ಹೆಚ್ಚು ಕಾಡಾನೆಗಳು ತಿಂದು ಹಾಕಿರುವುದಲ್ಲದೆ, ತುಳಿದು ಹಾಳು ಮಾಡಿವೆ.


ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಕಾಡಾನೆಗಳು ಹಾಳು ಮಾಡಿರುವುದರಿಂದ ರೈತರು ಕಂಗೆಟ್ಟಿದ್ದಾರೆ. ಇದು ಪ್ರತಿ ವರ್ಷವೂ ನಡೆಯುತ್ತಿದ್ದರೂ ಸಹ ನರಿ ಕೂಗು ಗಿರಿ ಮುಟ್ಟುವುದೇ ಎಂಬಂತೆ ರೈತರ ಕೂಗು ಸರ್ಕಾರಕ್ಕಿರಲಿ ಅರಣ್ಯ ಇಲಾಖೆಗೂ ಮುಟ್ಟದಿರುವುದು ರೈತನ ಬಾಳಿನಲ್ಲಿ ಕಗ್ಗತ್ತಲಂತಾಗಿದೆ.


ಸಂಬಂಧ ಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಖುದ್ದು ಭೇಟಿ ನೀಡಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ತಲುಪಿಸಿ ರೈತರಿಗೆ ನೆರವಾಗಬೇಕಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑