Tel: 7676775624 | Mail: info@yellowandred.in

Language: EN KAN

    Follow us :


ಪ್ರಜ್ಞಾವಂತ ಶಿಕ್ಷಕರಿಂದ ಶೇಕಡಾ 91 ರಷ್ಟು ಮತದಾನ, ಬಿಜೆಪಿ ಜೆಡಿಎಸ್ ಹಣಾಹಣಿ

Posted date: 28 Oct, 2020

Powered by:     Yellow and Red

ಪ್ರಜ್ಞಾವಂತ ಶಿಕ್ಷಕರಿಂದ ಶೇಕಡಾ 91 ರಷ್ಟು ಮತದಾನ, ಬಿಜೆಪಿ ಜೆಡಿಎಸ್ ಹಣಾಹಣಿ

ಚನ್ನಪಟ್ಟಣ:ಅ/28/20/ಬುಧವಾರ. ತಾಲ್ಲೂಕಿನಲ್ಲಿ ಇಂದು ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆಯಿತು. ಮೊದ ಮೊದಲು ನೀರಸವಾಗಿದ್ದು ಹತ್ತು ಗಂಟೆಯ ನಂತರ ಸ್ವಲ್ಪ ಬಿರುಸುಗೊಂಡಿತು.

ನಗರ, ಕಸಬಾ ಮತ್ತು ಮಳೂರು ಹೋಬಳಿಗಳನ್ನು ಸೇರಿಸಿ ತಾಲ್ಲೂಕು ಕಛೇರಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಿದ್ದು, ವಿರೂಪಾಕ್ಷಿಪುರ ಹೋಬಳಿಯ ಮತದಾರರಿಗೆ ಕೋಡಂಬಳ್ಳಿ ಗ್ರಾಮದ ನಾಡಕಛೇರಿ ಯಲ್ಲಿ ಮತದಾನಕ್ಕೆ ಅನುವು ಮಾಡಿಕೊಡಲಾಗಿತ್ತು.


ನಗರದ ತಾಲ್ಲೂಕು ಕಛೇರಿಯ ಮುಂದೆ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಪರ ಪಕ್ಷದ ವತಿಯಿಂದ ಎರಡು ಕಡೆ, ಶಿಕ್ಷಕರ ಸಮುದಾ ಯದಿಂದ ಒಂದು ಕಡೆ ಚಪ್ಪರ (ಪೆಂಡಾಲ್) ಹಾಕಿ ಮತದಾರರಿಗೆ ಗುರುತಿನ ಚೀಟಿ ಪರೀಕ್ಷಿಸಿ ಸಂಖ್ಯೆ ನಮೂದಿಸಿ ಕಳುಹಿಸುವ ಕೆಲಸ ಮಾಡುತ್ತಿದ್ದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವತಿ ಯಿಂದ ಸ್ಪರ್ಧಿಸಿದ ಅಭ್ಯ ರ್ಥಿಗಳ ಪರ ಅಷ್ಟೇನೂ ಪ್ರಚಾರವಿಲ್ಲದಿದ್ದು, ಕಾಂಗ್ರೆಸ್ ಗಿಂತ ಜೆಡಿಎಸ್ ಹೆಚ್ಚು ಕ್ರಿಯಾಶೀಲವಾಗಿದ್ದು ಕಂಡು ಬಂದಿತು.

ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದವರಿಗಿಂತ ತುಸು ಹೆಚ್ಚಾಗಿ ಓಡಾಡುತ್ತಿದ್ದರೆ ಕಾಂಗ್ರೆಸ್ ಬಹುತೇಕ ಮಂಕಾಗಿತ್ತು.


ನಮ್ಮ ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಎ ಪಿ ರಂಗನಾಥ ರವರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಅವರು ಗೆಲ್ಲುವ ವಿಶ್ವಾಸ ಇದೆ. ನಮ್ಮ ಪಕ್ಷದ ನಿಷ್ಠಾ ವಂತ ಕಾರ್ಯಕರ್ತರು ಶಿಕ್ಷಕರಿಗೆ ಮನದಟ್ಟು ಮಾಡಿದ್ದು ನಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ತಿಳಿಸಿದರು.


ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ರವರು ತಾಲ್ಲೂಕು ಕಛೇ ರಿಯ ಹೊರಾಂಗಣದಲ್ಲಿ ಇಂದು ಆಪ್ತ ಶಿಕ್ಷಕರು ಮತ್ತು ಬಿಜೆಪಿ ಕಾರ್ಯಕರ್ತರ ಜೊತೆ ಸಮಾಲೋಚಿಸುವ ಮೂಲಕ ಒಂದು ಗಂಟೆಗೂ ಹೆಚ್ಚು ಕಾಲ ಕುಳಿತಿದ್ದರು.

ಕೋಡಂಬಳ್ಳಿ ಗ್ರಾಮದ ನಾಡಕಛೇರಿಯಲ್ಲಿ ಮತ ದಾನ ನಡೆಯುತ್ತಿದ್ದು, ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ೬೦ ಮಂದಿ ಶಿಕ್ಷಕರು ಮತದಾನ ಮಾಡಿದ್ದರು.


ತಾಲೂಕು ಕಛೇರಿ ಯಲ್ಲಿ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ೩೫೦ ಮಂದಿ ಶಿಕ್ಷಕರು ಮತ ಚಲಾಯಿಸಿದರು.

ಮತಗಟ್ಟೆ ಕೇಂದ್ರದ ಬಳಿ ಎಲ್ಲಾ ಪಕ್ಷದ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಸುವಂತೆ ಮತದಾರರಿಗೆ ದೂರದಿಂದಲೇ ವಿನಂತಿ ಸುತ್ತಿದ್ದರು.


ಕೆಲವು ಕಡೆ ಘರ್ಷಣೆಗೆ ಅವಕಾಶಗಳು ಕಂಡು ಬಂದರೂ ಸಹ ಅವುಗ ಳನ್ನು ನಾಯಕರುಗಳೇ ಸರಿದೂಗಿಸುವ ಕೆಲಸವನ್ನು ಮಾಡುತ್ತಿದಿದ್ದು ವಿಶೇಷ ಎಂದುಕೊಳ್ಳಬಹುದು

ಮತಗಟ್ಟೆಗಳಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗಿರೀಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಕ್ರಂ, ಎಎಸ್ಪಿ ರಾಮರಾಜನ್ ಭೇಟಿನೀಡಿ ಪರಿಶೀಲಿಸಿದರು. ಅಲ್ಲದೆ ವಿಶೇಷ ಸ್ಕ್ವಾರ್ಡ್ ಸಹ ಆಗಿಂದಾಗ್ಗೆ ಮತಗಟ್ಟೆಗಳ ಬಳಿ ಎಡತಾಕುತ್ತಿದ್ದರು.


ಸಂಜೆ ಐದು ಗಂಟೆಗೆ ಸಂಪೂರ್ಣ ಮತದಾನ ಮುಗಿದಿದ್ದು, ಚನ್ನಪಟ್ಟಣ ನಗರದಲ್ಲಿ 646 ಮತದಾರರ ಪೈಕಿ 596 ಮಂದಿ ಮತ ಚಲಾಯಿಸಿದ್ದು, ಇವರಲ್ಲಿ 365 ಮಂದಿ ಪುರುಷರು ಮತ್ತು 231 ಮಂದಿ ಮಹಿಳಾ ಶಿಕ್ಷಕಿಯರು ಮತ ಚಲಾಯಿಸಿದ್ದಾರೆ.

ಕೋಡಂಬಳ್ಳಿ ಗ್ರಾಮದಲ್ಲಿ ನಡೆದ ಮತಗಟ್ಟೆಯಲ್ಲಿ

93 ಮತದಾರರಿದ್ದು, ಇಲಾಖೆಯ ಕಾರಣಾಂತರಗಳಿಂದ 5 ಮಂದಿಯು ಮತ ಚಲಾಯಿಸುವಂತಿರಲಿಲ್ಲ. ಉಳಿದ 88 ಮತದಾರರ ಪೈಕಿ 83 ಮಂದಿ ಮತದಾನ ಮಾಡಿದ್ದು ಇವರಲ್ಲಿ 65 ಪುರುಷ ಶಿಕ್ಷಕರು ಹಾಗೂ 18 ಮಂದಿ ಮಹಿಳಾ ಶಿಕ್ಷಕಿಯರು ಮತದಾನ ಮಾಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑